ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೪೭)
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೬೯


ಖ್ಯಾಜಾಜಂಗ-ವಾಯುವೇಗಕ್ಕಿಂತಲೂ, ಶೀಘ್ರಗಮನವು ಯಾವದಕ್ಕೆ
ಬಾಲಕ:- ಮನೋವೇಗ,

(ಇರುವದು)

ಫೈಜ-ರಾಜರಲ್ಲಿ ಇರತಕ್ಕ ಅವಶ್ಯವಾದ ಅಮೂಲ್ಯವಾದ ವಸ್ತುವು ಯಾವದು ?
ಬಾಲಕ-ರಾಜನೀತಿ,
ಎಂದು ಹೇಳಿ, ಆಮೇಲೆ " ಇಂಥ ಪ್ರಸಿದ್ಧರಾದ ಪಂಡಿತರು ಇಂಥ ಸ ರಳವಾದ ಪ್ರಶ್ನೆಗಳನ್ನು ಮಾಡಲಾರರೆಂದು ನಾನು ನಂಬಿದ್ದೆನು ” ಎಂದು ಅಂದನು ಆಗ ಎಲ್ಲ ಪಂಡಿತರ ಮುಖಗಳು ಅವನತವಾದವು ಆಗ ಪುನಃ-
ಜ. ಪಂಡಿತ:- ನಿಜವಾದ ಸಾಕ್ಷಿಯು ಯಾವದು ?
ಬಾಲಕ:- ತನ್ನ ಮಸ್ಸು,
ಬೀರಬಲ:- ಸಂಚಾರದ ಅಸ್ಥಿತ್ವವು ಎಲ್ಲಿಯ ವರೆಗೆ ?
ಬಾಲಕ :-ತನ್ನ ಮರಣದ ವರೆಗೆ,
ಬಾದಾಶಹ:- ಮೃತ್ಯುವಿಗೂ ಸಂಸಾರಕ್ಕೂ ಸಂಬಂಧವೇನು ?
ಚಾಲಕ:-ಪೃಥ್ವಿನಾಥ ! ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಿರುವದೋ, ಅಲ್ಲಿಯವರೆಗೆ ಸಂಸಾರದ ಸಂಬಂಧವು ಇದ್ದೇ ಇರುವದು.
ಬಾದಕಹನು ಆ ಬಾಲಕನ ಚಾತುರ್ಯಕ್ಕೆ ತಲೆದೂಗಿದನು.
ಗಂಗಕವಿ-ಮೂರ್ಖನೆಂದು ಯಾತರ ಮೇಲಿಂದ ತಿಳಿದು ಕೊಳ್ಳಬೇಕು ?
ಬಾಲಕ:- ಅವನ ಮಾತಿನ ಮೇಲೆ.
ತಾನಸೇನ:-ಶರೀರದ ಪ್ರಥಮ ಸುಖವು ಯಾವದು ? ಬಾಲಕ:- ಆರೋಗ್ಯತೆಯು
ಸಭಾಸದರೆಲ್ಲರು ಆ ಬಾಲಕನ ಚಾತುರ್ಯಕ್ಕೂ, ದಿಟ್ಟತನಕ್ಕೂ ಬೆರಗಾದರು ಯಾವತ್ತೂರಿಗೂ ಸೇಲಿಮನು ದುರದೃಷ್ಟನೆಂದು ತಿಳಿದುಹೋಯಿತು. ಅಷ್ಮರಲ್ಲಿ ಪೈಜಿಯು ಮುಂದೆಬಂದು - ಬಾದಸಹನ ಕ್ರೋಧದ ಸ್ವ ರೂಪವೇನು ?
ಬಾಲಕ-ಪ್ರಜ್ವಲಿತ ವಾದ ಅಗ್ನಿಯಂತೆ.
ಅಬುಲ್‌ಫಜಲ್-ಯಾವ ಫಲವು ರುಚಿಕರವಾದದ್ದು ?
ಬಾಲಕ-ಧೈರ್ಯದಿಂದ ದೊರೆತ ಫಲವು.
ಬೈಜುಬಾವರ:-ಮಗೂ ಸಮುದ್ರದಲ್ಲಿ ಮಳಳಿನ ಕಥಗಳು ಎಷ್ಟಿರುವುವು?
ಬಾಲಕ-ಈ ಜಗತ್ತಿನಲ್ಲಿ ಜೀವಂತರಾಗಿರುವ ಮನುಷ್ಯರ ಅಂಗಾಂಗಗಳಲ್ಲಿ ರುವ ರೋಮಗಳಷ್ಟು.