ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೭೦
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು


ಖಾನಖಾನ-ಬಲಕ್ಕೆ ಸಹಾಯಕಾರಿಯದದ್ದು ಯಾವದು ?

ಬಾಲಕ-ಸಾಹಸ.

ತೋಡರಮಲ್ಲ-ಎಲ್ಲಕ್ಕಿಂತಲೂ ಹೀನ ಸ್ಥಿತಿಯು ಯಾವದು ?

ಬಾಲಕ-ದಾಸತ್ವವು

ಮಾನಸಿಂಹ - ಈ ಸಂಸಾರದಲ್ಲಿ ನೀಚತರ ತಮವಾದ ಉದ್ಯೋಗವಾವುದು.

ಬಾಲಕ-ಭಿಕ್ಷಾವೃತ್ತಿಯು.

ತೋಡರಮಲ್ಲ-ಹೋದಂಥ ಯಾವವಸ್ತುವು ಪುನರಪಿ ಬರಲಾರದು ?

ಬಾಲಕ-ಸಮಯ.

ಆ ಚತುರನಾದ ಬಾಲಕನನ್ನು ಪ್ರಶ್ನೆಗಳಿಂದ ಪರಾಜಿತನನ್ನಾಗಿ ಮಾಡುವದು ಯಾರಿಂದಲೂ ಸಾಧ್ಯವಾಗಲಿಲ್ಲ. ಬಾದಶಹನು ಪ್ರಸನ್ನನಾದನು.

ಬಾದಶಹ-ಬಾಲಕನೇ, ನಿನ್ನ ಅಪೇಕ್ಷೆ ಯೇನಿರುವದು? ಅದನ್ನು ಕೇಳು?

ಬಾಲಕ-ಭೂಮೀಶ ! ನಾನು ಎಲ್ಲರಂತೆ ಸಮಯವನ್ನು ಕಳೆದುಕೊಳ್ಳಲಾರೆನು. ನಾನು ಅಸ್ವತಂತ್ರನು ಆದರೂ ನಾನು ಕೇಳಿದ ಪ್ರಶ್ನೆಗೆ ಸಮರ್ವಕವಾದ ಉತ್ತರವು ದೊರೆತಲ್ಲಿ ಪ್ರಸನ್ನಚಿತ್ತನಾಗಿ ಹೊರಟು ಹೋಗುವೆನು.

ಬಾದಶಹ ಒಳ್ಳೇದು! ಅದನ್ನು ಹೇಳು.

ಬಾಲಕ- ಪೃಥ್ವೀಶ ! ನನಗೆ ಯುವರಾಜ ಪದವಿಯು ಬೇಕಾಗಿಲ್ಲ ಅದರಿಂದ ನನ್ನ ಬುದ್ಧಿಗೆ ಮಾಂದ್ಯವುಂಟಾದೀತು! ಈ ಇಕ್ಷುದಂಡದಲ್ಲಿ ನನಗೊಂದು ಮುರಲ (ಕೊಳಲು)ಯನ್ನು ಮಾಡಿಸಿಕೊಡಬೇಕು. ಆದರೆ ಅಂಥ ಶ್ರೇಷ್ಟಮಾತೆಯ ಸುಪುತ್ರನು ಒಬ್ಬನಾದರೂ ತಮ್ಮ ಓಲಗದಲ್ಲಿ ಇದ್ದಂತೆ ಕಂಡುಬರುವದಿಲ್ಲ ಅಂದಮೇಲೆ ನಾನು ಇಲ್ಲಿ ವ್ಯರ್ಥವಾಗಿ ಕಾಲಹರಣ ಮಾಡುವದರಿಂದ ಪ್ರಯೋಜನವಿಲ್ಲ

ಎಂದು ಕಬ್ಬಿನ ಗಣಿಕೆಯನ್ನು ಚೆಲ್ಲಿ ಹೊರಟು ಹೋದನು. ಬಾದಶಹನು ಅವನ ಶೋಧದ ಸಲುವಾಗಿ ಅತಿ ಪ್ರಯಾಸಪಟ್ಟನು ಪುನರಪಿದರ್ಶನವಾಗಲಿಲ್ಲ.

- ( ೨೧೯. ತಾವು ಜಗತ್ಪಿತೃಗಳಾಗಿರುವಿರಿ )-

ಒಂದು ದಿವಸ ಒಬ್ಬ ವೇಶ್ಯಾ ಸ್ತ್ರೀಯು ಮಗನುಮಾಡಿದ ಅಪರಾಧದ ವಿಚಾರಣೆಯು ನಡೆದಿತ್ತು. ಆಗ ಬಾದಶಹನು ವಿನೋದಕ್ಕಾಗಿ ಆ ವೇಶ್ಯೆಯನ್ನು ಕುರಿತು - ಇವನ ತಂದೆಯ ಹೆಸರೇನು ? ಎಂದು ಕೇಳಿದನು. ಆ ವೇಶ್ಯೆ