ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು
೩೭೩

ಯನ್ನು ಹಾಕು ? ಎಂದನು ಅವಳು ಒಳಗೆ ಹೋಗಿ ರೊಟ್ಟಿಯನ್ನು ತಂದುಹಾಕಲಿಕ್ಕೆ ಬರಲು ಬಾದಶಹನು ತಾಯಿ ! ನೀನು ಯಾಕೆ ದುಃಖಿಸುತ್ತಿದ್ದೀ ಎಂದು ಕೇಳಿದನು ಅದಕ್ಕೆ ಆ ಸ್ತ್ರೀಯು ನನ್ನ ಪತಿಯು ಹಡಗವನ್ನೇರಿ ಪರದೇಶಕ್ಕೆ ವ್ಯಾಪಾರದ ಸಲುವಾಗಿ ಹೋಗಿ ಹನ್ನೆರಡು ವರುಷಗಳಾದವು. ಇನ್ನೂವರೆಗೆ ಬರಲಿಲ್ಲವೆಂದು ಶೋಕಿಸಹತ್ತಿದ್ದೇನೆ ಎಂದು ಉತ್ತರಕೊಟ್ಟಳು. ಅದನ್ನು ಕೇಳಿಕೊಂಡು ಕಿಂಚಿತ್ ಮುಂದೆಬರಲು ಮತ್ತೊಬ್ಬ ಸ್ತ್ರೀಯು, ಬೀಸುವ ಕಲ್ಲನ್ನು ತಿರುಗಿಸುತ್ತ ಅಳುತ್ತ ಕುಳಿತಿದ್ದಳು. ಆಮನೆಗೆ ಹೋಗಿ, ನೀನು ಯಾಕೆ ಅಳುತ್ತಿರುವಿ ! ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಅವಳು, ನನ್ನ ಪತಿಯು ಕಳವು ಮಾಡಲಿಕ್ಕೆ ಹೋಗಿ ಮೂರು ದಿವಸಗಳಾದವು, ಜೀವದಿಂದ ಇರುವನೋ ಅಥವಾ ಮರಣ ಹೊಂದಿದನೋ ಎಂಬ ಸಂಗತಿಯು ತಿಳಿಯದಾದ್ದರಿಂದ ಅಳುತ್ತೇನೆಂದು ಹೇಳಿದಳು. ಕಿಂಚಿತ್ ಮುಂದಕ್ಕೆ ಬರಲು ಮತ್ತೊಬ್ಬ ಸ್ತ್ರೀಯು ಹಾಡಾಡಿಕೊಂಡು ಅಳುವಸ್ವರವು ಕೇಳಬಂತು. ಆ ಮನೆಗೆ ಹೋಗಿ ತಾಯಿ ನೀನೇಕೆ ಅಳುತ್ತಿರುವಿ ? ಎಂದು ಕೇಳಿದನು. ಆ ಮಾತಿಗೆ ಅವಳು ನನ್ನ ಪತಿಯು ಪುತ್ರಹೀನನಾಗಿದ್ದಾನೆ ಎಂದು ಹೇಳಿದಳು.

ಈ ಸಂಗತಿಗಳಿಂದ ಬಾದಶಹನ ಮನಸ್ಸಿಗೆ ವಿಷಾದವಾಗಿ ಮನೆಗೆ ಬಂದುಬಿಟ್ಟನು. ಮರುದಿವಸ ಓಲಗದಲ್ಲಿ ಬೀರಬಲನನ್ನು ಕುರಿತು ಆ ಮೂವರು ಸ್ತ್ರೀಯರು ಯಾರುಯಾಕೆ ಅಳುತ್ತಿದ್ದರು ಎಂದು ಪ್ರಶ್ನೆ ಮಾಡಿದನು.

ಅದಕ್ಕೆ ಬೀರಬಲನು--

ಏಕಸಮುಂದರ ವಾಣಿಜ ಕರೈ ನಿತ ಉಠಚೋರಿಜಾಯ |
ಬಾಲಕ ಹೀಸೆ ನೇಹಂಗಾಯಾ ಯೇ ತೀನೋ ಬಿಲಖಾಯ ||

ಬೀರಬಲನು ಹಿಂದು ಮುಂದಿನ ಸಂಗತಿಯನ್ನು ತಿಳಿದುಕೊಳ್ಳದೆ ಯಥಾರ್ಥವಾಗಿದ್ದ ಸಂಗತಿಗಳನ್ನು ಹೇಳಿದ್ದರಿಂದ ಬಾದಶಹನಿಗೆ ಪರಮಾನಂದವಾಯಿತು.

-(೨೨೪, ಕಾಜಿಗೆ ಮದ್ಯವನ್ನು ಕುಡಿಸು.)-

ಹೋಲಿಕಾ ಮಹೋತ್ಸವದಲ್ಲಿ ಬಾದಶಹನು ಬೀರಬಲನನ್ನು ಕುರಿತು ಏನಾದರೂ ಹಂಚಿಕಿಮಾಡಿ ಕಾಜಿಗೆ ಮದ್ಯವನ್ನು ಕುಡಿಸು ? ಎಂದು ಅಪ್ಪಣೆಮಾಡಿದನು. ಅದಕ್ಕೆ ಬೀರಬಲನು ಇದುಯಾವ ಆಶ್ಚರ್ಯದ ಮಾತು, ಈ ದಿವಸವೇ ಅವನನ್ನು ಅಧಿಕಾರದಿಂದ ದೂರ ಮಾಡಿರಿ ! ಅಂದರೆ ಅವನು ಆ ಕ್ಷಣದಲ್ಲಿಯೇ ತಮ್ಮ ಬಳಿಗೆ ವಿನಂತಿ ಮಾಡಿಕೊಳ್ಳಲಿಕ್ಕೆ ಬರುವನು. ಆಗ