ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೭೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.

ಹಿಡಿಸಲಾರದಷ್ಟು ನಗೆಯು ಬಂತು ಫಕ್ಕನೆ ನಕ್ಕನು ಮಳೆಯು ಬರಹತ್ತಿತು ಆ ಮರುದಿವಸವೇ ಬಾದಕಶಹನು ಬೀರಬಲನನ್ನು ಶೋಧಮಾಡಿ, ನಿನ್ನೆ ಮಳೆಯಾಗಲಿಕ್ಕೆ ಕಾರಣವೇನೆಂದು ಕೇಳಿದನು. ಆಗ ಬೀರಬಲನು ಆದ್ಯೋಪಾಂತ ಸಂಗತಿಯನ್ನೆಲ್ಲ ತಿಳಿಸಲು, ನಕ್ಕು ನಕ್ಕು ಬಾದಶಹನ ಹೊಟ್ಟೆಯುಬ್ಬಿತು.

-( ೨೨೧. ಕಿಸಕಾರಣ ಯಹ ನಾಚೈಗದಹಾ. )-

ಒಂದು ದಿವಸ ಬಾದಶಹನು ಬೀರಬಲನಿಗೆ-
ಕಿಸಕಾರಣ ಯಹ ನಾಚೆ ಗದಹಾ |
ಯಾವ ಕಾರಣದಿಂದ ಕತ್ತೆಯು ಈ ಪರಿ ಕುಣಿದಾಡುತ್ತದೆ ? ಎಂದು ಕೇಳಿದನು. ಬೀರಬಲನು ತತಕ್ಷಣದಲ್ಲಿಯೇ,
"(ಆಗನಾಥನ ಪೀಛೇ ಪರಹಾ | ಇಸಕಾರಣ ಯಹನಾಚೈ ಗದಹಾ ||
ಮುಂದೆ ಕಟ್ಟುವವರಿಲ್ಲ ಹಿಂದೆ ಕಾಯುವವರಿಲ್ಲ; ಎಂಬ ಸಂತೋಷದಿಂದ ಕುಣಿದಾಡುತ್ತದೆ. ಎಂದು ಉತ್ತರ ಕೊಟ್ಟನು. ಅಕಬರನು ನಗಹತ್ತಿದನು.

- (೨೨೨. ಕತ್ತೆಯ ಭಾರ.) -

ಒಂದು ದಿವಸ ಅಕಬರ ಬೀರಬಲರಿಬ್ಬರೂ ಕೂಡಿಕೊಂಡು ಮೃಗಯಾವಿಹಾರಕ್ಕೆ ಹೋಗಿದ್ದರು. ಉಷ್ಣಕಾಲವಾದ್ದರಿಂದ ಮೈಯಲ್ಲಿ ಬೆವರೊಡೆಯಿತು. ಆಗ ಬಾದಶಹನು ತನ್ನ ಮೈಮೇಲಿನ ಬಟ್ಟೆಗಳನ್ನು ತೆಗೆದು ಬೀರಬಲನ ಭುಜದಮೇಲೆ ಹಾಕಿದನು. ಆಗ ಬೀರಬಲನು ಕೃಪಾಳುವೇ? ನಾನು ಒಂದು ಕತ್ತೆಯ, ಭಾರವನ್ನು ಹೇಗೆ ಸಹಿಸಲಿ ! ಎಂದು ಗಟ್ಟಿಯಾಗಿ ಕೂಗಿದನು.

-(೨೨೩. ಅವರು ಮೂವರೂ ಅಳುತ್ತಿದ್ದರು.)

ಬಾದಶಹನು ಪ್ರತಿದಿವಸ ರಾತ್ರಿ ಸಮಯದಲ್ಲಿ ಪ್ರಚ್ಛನ್ನನು ವೇಷವನ್ನು ಧಾರಣ ಮಾಡಿಕೊಂಡು ನಗರದಲ್ಲಿ ಸಂಚಾರಾರ್ಥವಾಗಿ ಹೊರಹೊರಡುತ್ತಿದ್ದನು. ಆ ಸಮಯದಲ್ಲಿ ದುಃಖಗಳು ಕಂಡು ಬಂದರೆ ಮರುದಿವಸ ಅವರನ್ನು ಕರೆಯಿಸಿಕೊಂಡು ಅವರ ದುಃಖವನ್ನು ದೂರಮಾಡುತ್ತಿದ್ದನು. ಹೀಗಿರಲು ಒಂದು ದಿವಸ ಅವನು ಭಿಕ್ಷುಕನ ವೇಷವನ್ನು ಧಾರಣಮಾಡಿಕೊಂಡು ರಾತ್ರಿಯಲ್ಲಿ ಹೊರಬಿದ್ದನು. ಆ ಸಮಯದಲ್ಲಿ ಒಬ್ಬ ವರ್ತಕನ ಹೆಂಡತಿಯು ತನ್ನ ಮನೆಯ ಬಾಗಿಲಮುಂದೆ ಕುಳಿತು ಕೊಂಡು ರೋದನ ಮಾಡುತ್ತಿದ್ದಳು. ಅಲ್ಲಿಗೆ ಬಾದಶಹನು ಹೋಗಿ ತಾಯಿ ಒಂದು ತುಣಿಕುರೊಟ್ಟಿ