ಹಿಡಿಸಲಾರದಷ್ಟು ನಗೆಯು ಬಂತು ಫಕ್ಕನೆ ನಕ್ಕನು ಮಳೆಯು ಬರಹತ್ತಿತು ಆ ಮರುದಿವಸವೇ ಬಾದಕಶಹನು ಬೀರಬಲನನ್ನು ಶೋಧಮಾಡಿ, ನಿನ್ನೆ ಮಳೆಯಾಗಲಿಕ್ಕೆ ಕಾರಣವೇನೆಂದು ಕೇಳಿದನು. ಆಗ ಬೀರಬಲನು ಆದ್ಯೋಪಾಂತ ಸಂಗತಿಯನ್ನೆಲ್ಲ ತಿಳಿಸಲು, ನಕ್ಕು ನಕ್ಕು ಬಾದಶಹನ ಹೊಟ್ಟೆಯುಬ್ಬಿತು.
ಒಂದು ದಿವಸ ಬಾದಶಹನು ಬೀರಬಲನಿಗೆ-
ಕಿಸಕಾರಣ ಯಹ ನಾಚೆ ಗದಹಾ |
ಯಾವ ಕಾರಣದಿಂದ ಕತ್ತೆಯು ಈ ಪರಿ ಕುಣಿದಾಡುತ್ತದೆ ? ಎಂದು ಕೇಳಿದನು. ಬೀರಬಲನು ತತಕ್ಷಣದಲ್ಲಿಯೇ,
"(ಆಗನಾಥನ ಪೀಛೇ ಪರಹಾ | ಇಸಕಾರಣ ಯಹನಾಚೈ ಗದಹಾ ||
ಮುಂದೆ ಕಟ್ಟುವವರಿಲ್ಲ ಹಿಂದೆ ಕಾಯುವವರಿಲ್ಲ; ಎಂಬ ಸಂತೋಷದಿಂದ ಕುಣಿದಾಡುತ್ತದೆ. ಎಂದು ಉತ್ತರ ಕೊಟ್ಟನು.
ಅಕಬರನು ನಗಹತ್ತಿದನು.
ಒಂದು ದಿವಸ ಅಕಬರ ಬೀರಬಲರಿಬ್ಬರೂ ಕೂಡಿಕೊಂಡು ಮೃಗಯಾವಿಹಾರಕ್ಕೆ ಹೋಗಿದ್ದರು. ಉಷ್ಣಕಾಲವಾದ್ದರಿಂದ ಮೈಯಲ್ಲಿ ಬೆವರೊಡೆಯಿತು. ಆಗ ಬಾದಶಹನು ತನ್ನ ಮೈಮೇಲಿನ ಬಟ್ಟೆಗಳನ್ನು ತೆಗೆದು ಬೀರಬಲನ ಭುಜದಮೇಲೆ ಹಾಕಿದನು. ಆಗ ಬೀರಬಲನು ಕೃಪಾಳುವೇ? ನಾನು ಒಂದು ಕತ್ತೆಯ, ಭಾರವನ್ನು ಹೇಗೆ ಸಹಿಸಲಿ ! ಎಂದು ಗಟ್ಟಿಯಾಗಿ ಕೂಗಿದನು.
ಬಾದಶಹನು ಪ್ರತಿದಿವಸ ರಾತ್ರಿ ಸಮಯದಲ್ಲಿ ಪ್ರಚ್ಛನ್ನನು ವೇಷವನ್ನು ಧಾರಣ ಮಾಡಿಕೊಂಡು ನಗರದಲ್ಲಿ ಸಂಚಾರಾರ್ಥವಾಗಿ ಹೊರಹೊರಡುತ್ತಿದ್ದನು. ಆ ಸಮಯದಲ್ಲಿ ದುಃಖಗಳು ಕಂಡು ಬಂದರೆ ಮರುದಿವಸ ಅವರನ್ನು ಕರೆಯಿಸಿಕೊಂಡು ಅವರ ದುಃಖವನ್ನು ದೂರಮಾಡುತ್ತಿದ್ದನು. ಹೀಗಿರಲು ಒಂದು ದಿವಸ ಅವನು ಭಿಕ್ಷುಕನ ವೇಷವನ್ನು ಧಾರಣಮಾಡಿಕೊಂಡು ರಾತ್ರಿಯಲ್ಲಿ ಹೊರಬಿದ್ದನು. ಆ ಸಮಯದಲ್ಲಿ ಒಬ್ಬ ವರ್ತಕನ ಹೆಂಡತಿಯು ತನ್ನ ಮನೆಯ ಬಾಗಿಲಮುಂದೆ ಕುಳಿತು ಕೊಂಡು ರೋದನ ಮಾಡುತ್ತಿದ್ದಳು. ಅಲ್ಲಿಗೆ ಬಾದಶಹನು ಹೋಗಿ ತಾಯಿ ಒಂದು ತುಣಿಕುರೊಟ್ಟಿ