ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೭೭



ನ್ನ ಭುಜದಂಡವನ್ನು ಮುಂದೆ ಮಾಡಿದನು ವೈದ್ಯನು ಅದನ್ನು ಮುಟ್ಟಿದ ಕೂಡಲೆ ಗಾಬರಿಯಾಗಿ ಹೊರಗೆ ಕೈ ತೆಗೆದುಕೊಂಡನು ಇಷ್ಟಾದಮೇಲೆ ಬೀರಬಲನು ಅವನ ಭುಜದಂಡವನ್ನು ಹಿಡಿದುಕೊಂಡು ಹೊರಗೆ ಬಂದು ಇದು ಹಂಚಿಕೆಯ ಇಡಿಗಂಟು ವೈದ್ಯಸಾಹೇಬ ! ಬಿಸಮಿಲ್ಲಾಹ ಉಹಮಾ ನುರ್ರಹೀಮ ಎಂದು ಹೇಳಿದನು ವೈದ್ಯನು ನಾಚಿಕೆಯಿಂದ ತಲೆಬಗ್ಗಿಸಿದನು ಪುನರಪಿ ಬೀರಬಲನ ಹೆಸರನ್ನು ಎತ್ತಲಿಲ್ಲ.

-( ೨೮. ಎರಡು ಸಾವಿರ ಮೂರ್ಖರು.)-

ಒಂದು ಸಮಯದಲ್ಲಿ ಬೀರಬಲನು ತನ್ನ ಸ್ವದೇಶಕ್ಕೆ ಬಂದಿದ್ದನು ಮರಳಿ ದಿಲ್ಲಿಗೆ ಬರಬೇಕೆಂದು ಹೊರಡಲು ಎರಡುಸಾವಿರ ಜನ ಬ್ರಾಹ್ಮಣಕುಲದ ತರುಣರು ತಮಗೆ ಸೈನ್ಯದಲ್ಲಿ ಕೆಲಸವನ್ನು ಕೊಡಿಸಬೇಕೆಂದು ಬೀರಬಲನ ಬೆನ್ನು ಹತ್ತಿದನು ಅವರೆಲ್ಲರನ್ನೂ ದಂಡಿನಲ್ಲಿ ನಿಯಮಿಸಿಕೊಂಡು ದಿಲ್ಲಿಗೆ ಬಂದನು ಆದರೆ ಅವರಿಗೆ ವೇತನವನ್ನು ಹ್ಯಾಗೆ ಕೊಡಬೇಕು? ಎಂದು ಚಿಂತಿಸಿ ಸ್ವಸ್ಥ ಕುಳಿತುಕೊಂಡನು ಮುಂದೆ ಕೆಲವು ದಿವಸಗಳಾದ ಮೇಲೆ ಬಾದಶಹನು ಬೀರಬಲನನ್ನು ಕರೆಯಿಸಿಕೊಂಡು ನಿನ್ನ ದೇಹವು ಸೌಖ್ಯದಲ್ಲಿರುವದೋ ? ನನ್ನ ಸಲುವಾಗಿ ಯೇನು ತೆಗೆದುಕೊಂಡು ಬಂದಿರುವಿ? ಎಂದು ಕೇಳಿ ದನು ಆಗ ಬೀರಬಲನು ಸರಕಾರ ! ಎರಡು ಸಾವಿರ ಜನ ಮೂರ್ಖರನ್ನು ಕರೆತಂದಿರುವೆನು; ಎಂದು ಉತ್ತರಕೊಟ್ಟನು ಅದಕ್ಕೆ ಬಾದಶಹನು ಅವರು ಮೂರ್ಖರೆಂದು ಹ್ಯಾಗೆ ಹೇಳುವಿ? ಎಂದು ಕೇಳಿದನು ಬೀರಬಲನು. ಆ ಮನುಷ್ಯರಿಗೆ ಕಿಂಚಿತ್ತಾದರೂ ಜ್ಞಾನವಿದ್ದಂತೆ ಕಂಡು ಬರುವದಿಲ್ಲ ಯಾಕಂದರೆ, ತಮ್ಮಲ್ಲಿ ಚಾಕರಿಯು ದೊರೆಯದಿದ್ದ ಪಕ್ಷದಲ್ಲಿ ಸ್ವದೇಶಕ್ಕೆ ಮರಳಿ ಹೋಗುವಪರಿ ಹ್ಯಾಗೆ? ಎಂಬದನ್ನು ಸಹಾ ಯೋಚಿಸದೆ ನನ್ನೊಡನೆ ಹೊರಟು ಬಂದಿದ್ದಾರೆ ಅದರಿಂದ ಅವರಿಗೆ ನಾನು ಮೂರ್ಖರೆಂದು ತಿಳಿದು ಕೊಂಡಿದ್ದೇನೆ ಎಂದು ಉತ್ತರಕೊಟ್ಟನು. ಆಗ ಬಾದಶಹನು ನಕ್ಕು ಒಳ್ಳೇದು ಅವರಿಗೆ ಸೈನ್ಯದಲ್ಲಿ ನಿಯಮಿಸಿಕೊಂಡು ಪ್ರತಿಮಾಸಕ್ಕೆ ಸರಕಾರದ ಖಜಾನೆಯೊಳಗಿಂದ ವೇತನವನ್ನು ಸಲ್ಲಿಸುತ್ತ ಹೋಗು ! ಎಂದು ಅಪ್ಪಣೆ ಮಾಡಿದನು ಬೀರಬಲನು ಬಾದಶಹನ ಅಪ್ಪಣೆಯಂತೆ ಮಾಡಿದನು.

- (೨೨೯. ಬೀರಬಲನ ದಾಸಿ. )-

ಒಂದು ಸಮಯದಲ್ಲಿ ಬಾದಶಹನ ಮನಸ್ಸಿನಲ್ಲಿ ಬೀರಬಲನ ಗೃಹದ ಪರಿಚಾರಿಕೆಯರನ್ನು ಪರೀಕ್ಷಿಸಿ ನೋಡಬೇಕೆಂಬ ಕುತೂಹಲವು ಜನಿಸಿತು ಕೂಡಲೆ ಅವನು ಬೀರಬಲನ ಗೃಹದೆಡೆಗೆ ಬಂದನು ಆಗ ಒಬ್ಬ ದಾಸಿಯ