ನು ನಿಜಸಂಗತಿಯನ್ನೆಲ್ಲ ಹೇಳಿಬಿಟ್ಟನು. ಆಗ ದೇವಿಯು ಕುಪಿತನಾಗಿ "ಈ
ದಿವಸದಿಂದ ಲಾಲಾಜಾತಿಯ ಜನರಮನೆಯಲ್ಲಿ ನಾನು ವಾಸಮಾಡುವದಿಲ್ಲ”
ಎಂದು ಹೇಳಿ ಅಂತರ್ಧಾನವಾದಳು ಈ ಕಾರಣದಿಂದ " ಲಾಲಾ ” ಜನರು
ದರಿದ್ರರಾಗಿರುವರು ಎಂದು ಬೀರಬಲನು ಹೇಳಿದನು..
ಒಂದುಸಮಯದಲ್ಲಿ ಬಾದಶಹನು " ಬೀರಬಲ ! ನಿಮ್ಮ ಜನರು ಯಾವಾಗಲೂ ಅಸ್ವಚ್ಛತೆಯಿಂದ ಇರುವರು ನಮ್ಮ ಜನರು ಯಾವಾಗಲೂ ಸ್ಪಚ್ಛವಾಗಿರುವರು”ಎಂದನು. ಅದಕ್ಕೆ ಬೀರಬಲನು ಆದು ಹ್ಯಾಗೆ ಎಂದು ಪ್ರಶ್ನೆ ಮಾಡಿದನು ಈ ಪ್ರಶ್ನೆಗೆ ಬಾದಶಹನು ನಿಮ್ಮ ಜನರು ಮೂತ್ರವಿಸರ್ಜನೆ ಮಾಡಿ ಹಾಗೆಯೇ ದೋತರವನ್ನು ಬಿಟ್ಟು ಬಿಡುತ್ತಾರೆ, ನಮ್ಮ ಜನರು ಮೂತ್ರ ವಿಸರ್ಜನೆಯ ನಂತರ ಮಣ್ಣನ್ನು ಹಚ್ಚಿ ಶುದ್ಧ ಮಾಡುತ್ತಾರೆ; ಎಂದು ಉತ್ತರ ಹೇಳಿದನು. ಅದಕ್ಕೆ ಬೀರಬಲನು ಹಾಗಲ್ಲ ? ಇದಕ್ಕೆ ಬೇರೆ ಕಾರಣವುಂಟು, ಅದೇನಂದರೆ ಮೂತ್ರ ವಿಸರ್ಜನೆಯ ಕಾಲದಲ್ಲಿ ಅದರಮೇಲೆ ದೃಷ್ಟಿ ಬೀಳಲು, ಆಗ ನಿಮ್ಮ ಮನಸ್ಸಿನಲ್ಲಿ ( ಇದು ಕಕ್ಕನ ಮಗಳನ್ನೂ, ಮಾವನ ಮಗಳನ್ನೂ ಅಕ್ಕತಂಗಿಯರನ್ನೂ ಸಹ ಬಿಡಲಿಲ್ಲವೆಂದು ತಿಳಿದು ಅದರ ಮೋರೆಗೆ ಮಣ್ಣು ಹಚ್ಚುತ್ತೀರಿ” ಎಂದು ಹೇಳಿದನು. ಅದನ್ನು ಕೇಳಿ ಬಾದಶಹನು ಲಜ್ಜಿತನಾದನು.
ಒಂದುದಿವಸ ಸಭಾಸ್ಥಾನದಲ್ಲಿ ಅಕಬರನ ಜಾಮಾತನು ಬಂದನು, ಸಭಿಕರೆಲ್ಲರೂ ಚುಟಿಕೆಯನ್ನು ಬಾರಿಸಹತ್ತಿದರು. ಆದರೆ ಮಧುರೆಯ ಒಬ್ಬ ವರ್ತಕನು ತನ್ನ ಅಂಗುಲಿಯನ್ನು ತೋರಿಸಿದನು, ಹೀಗೇಕೆ ! ಎಂದು ಬಾದಶಹನು ಪ್ರಶ್ನೆ ಮಾಡಿದನು. ಆಗ ಆ ವರ್ತಕನು "ಈ ಜನರು ಚುಟಕೆಯನ್ನು ಬಾರಿಸಿದರು, ಇದರ ಕಾರಣವೇನಂದರೆ ಚುಟಿಕೆಬಾರಿಸುವಷ್ಟು ಸಮಯದಲ್ಲಿ ನಿಮ್ಮನ್ನು ನಾಶಮಾಡುತ್ತೇವೆ ” ಎಂಬ ಅಭಿಪ್ರಾಯದಿಂದ ಗರ್ಭಿತವಾದ್ದರಿಂದ ನಾನು ಒಂದು ಅಂಗುಲಿ ನಿರ್ದೆಶವನ್ನು ಮಾಡಿದೆನು, ಇದರ ಆಶಯವೇನಂದರೆ ನಿಮ್ಮಿಂದ ಒಂದಂಗುಲಿಯನ್ನು ಸಹ ಮಣಿಸುವದು ಆಗ ಲಿಕ್ಕಿಲ್ಲ ಒಂದು ಅಂಗುಲಿಯನ್ನು ತೋರಿಸಿದೆನು ಎಂದು ಕಥನಮಾಡಿದನು ಈ ಮಾತನ್ನು ಶ್ರವಣಮಾಡಿ ಬಾದಶಹನು ಪ್ರಸನ್ನನಾದನು ಸಭಾಸದರು ಲಜ್ಜಿತರಾದರು.