ಒಂದಾನೊಂದು ಸಮಯದಲ್ಲಿ ಬೀರಬಲನು ಬಾದಶಹನ ದರುಶನಕ್ಕೆ ಬರಹತ್ತಿದ್ದನು. ಆಗ ಅವನನ್ನು ನೋಡಿ ಬಾದಶಹನು " ಬೀರಬಲ್ಲ ! ಕೇಳು ನನಗೆ ನಿನ್ನೊಡನೆ ಈಗ ಮಾತನಾಡಲು ಅವಕಾಶವಿಲ್ಲ ” ಎಂದನು ಅದಕ್ಕೆ ಬೀರಬಲನು “ ನಾನೇ ಮಾತನಾಡಿಸಿಕೊಳ್ಳುತ್ತೇನೆ ನೀವು ಹೆದರಬೇಡಿರಿ ! ಎಂದನು. ಈ ಉತ್ತರವನ್ನು ಕೇಳಿ ಬಾದಶಹನು ಬಿದ್ದು ಬಿದ್ದು ನಕ್ಕನು.
ಒಂದಾನೊಂದು ಸಮಯದಲ್ಲಿ ಬಾದಶಹನು ಬೀರಬಲನನ್ನು ಕುರಿತು ನೀನು ಎಂದಾದರೂ ದೋಣಿಯಲ್ಲಿ ಕುಳಿತಾಗ ಅದು ಮುಳುಗಹತ್ತಿದರೆ ಆ ಸಮಯದಲ್ಲಿ " ನಾವಕೀರಕ್ಷಾ ಎಂಬ ಗ್ರಂಥವನ್ನು ತೆರೆದು, ಅದರಲ್ಲಿರುವ ಉಪಾಯಗಳಂತೆ ವರ್ತಿಸಿದರೆ ದೋಣಿಯು ಎಂದೂ ಮುಳುಗಲಾರದು,, ಎಂದು ಹೇಳಿದನು. ಅದಕ್ಕೆ ಬೀರಬಲನು, ನಿಜವದೆ; ಆ ಸಮಯದಲ್ಲಿ ಗ್ರಂಥವನ್ನು ನೋಡಲಿಕ್ಕೆ ಸಂಧಿಯು ದೊರೆತರೂ ದೊರೆಯಬಹುದು ಎಂದನು.ಈ ಉತ್ತರವನ್ನು ಕೇಳಿ ಬಾದಕಹನು ನಗಹತ್ತಿದನು.
ಒಂದು ದಿವಸ ಬಾದಶಹನು ವಿನೋದಮಾಡಬೇಕೆಂದು ಬೀರಬಲನಿಗೆ ಸುಗಂಧದೆಣ್ಣೆಗೆ ಪ್ರತಿಯಾಗಿ ಮೂತ್ರವನ್ನು ಹಚ್ಚಿ ಹಾಸ್ಯ ಮಾಡಹತ್ತಿದನು ಬೀರಬಲನು ಕೈಯನ್ನು ಅವಘ್ರಾಣಿಸಿ ನಾಚಿಕೆಯಿಂದ ತಲೆಬಗ್ಗಿಸಿದನು, ಏನೂ ಮಾತಾಡಲಿಲ್ಲ ತನ್ನ ಕೆಲಸದಲ್ಲಿಯೇ ತೊಡಗಿದನು, ಮುಂದೆ ಕೆಲವು ದಿವಸಗಳ ಮೇಲೆ ಬಾದಶಹನಿಗೆ ಶಿರೋವೇದನೆಯುಂಟಾಯಿತು, ಆಗ ಬಿರ ಬಲನು. ಹುಜೂರ ? ನನ್ನ ಬಳಿಯಲ್ಲಿ ಒಂದುಪ್ರಕಾರದ ನಶ್ಯವಿರುವದು ಅದನ್ನು ಅವಘ್ರಾಣಿಸಿದ ಉತ್ತರಕ್ಷಣದಲ್ಲಿಯೇ ಶಿರೋವೇದನೆಯು ನಿಂತುಹೋಗುವದು ಎಂದು ಹೇಳಿದನು. ಅದಕ್ಕೆ ಬಾದಶಹನು ಶೀಘ್ರವಾಗಿ ತಂದುಕೊಡು ! ಎಂದು ಅಪ್ಪಣೆಮಾಡಿದನು. ಆಗ ಬೀರಬಲನು ಶುಷ್ಕವಾಗಿರುವ ಮಲವನ್ನು ತಂದು ಸಣ್ಣಾಗಿ ಅರೆದು, ಒಂದು ಬೆಳ್ಳಿಯ ಡಬ್ಬಿಯಲ್ಲಿ ತುಂಬಿಕೊಂಡು ಒಯ್ದು ಬಾದಶಹನಿಗೆ ಕೊಟ್ಟನು ಬಾದಶಹನು ಅದನ್ನು ಅವಘ್ರಾಣಿಸಿ ಕೆಟ್ಟ ಮೋರೆಯನ್ನು ಮಾಡಿ ಇದು ಯಾವ ಪದಾರ್ಥದಿಂದ ಮಾಡಿದ ನಶ್ಯವು ಎಂದು ಕೇಳಿದನು. ಅದಕ್ಕೆ ಬೀರಬಲನು ಕೈಜೋಡಿಸಿ,- ಹುಜೂರ ? ಹಿಂದಕ್ಕೆ ತಾವು ನನಗೆ ಸುಗಂಧ ತೈಲವನ್ನು ಹಚ್ಚಿದ್ದಿಲ್ಲವೇ ! ಆ ಪದಾರ್ಥದ ಅರ್ಕದಿಂದ ಈ ನಶ್ಯವು ಸಿದ್ಧವಾಗಿದೆ ಎಂದು ಉತ್ತರಕೊಟ್ಟನು. ಈ ಮಾ