ಕಳಿಸಿಕೊಟ್ಟ ದಿನವು ಸಫರ, ತಿಂಗಳ ೧೦ನೇ ತಾರೀಖು ಎಂದು ಬರೆದದೆ.
ಆದಿಸವು ಚಂಡೂ ಪಂಚಾಂಗದ ಅನುಸಾರವಾಗಿ ಮಾಘಶುಕ್ಲ ದ್ವಾದಶೀ
ಶುಕ್ರವಾರವೇ ಆಗುತ್ತದೆ.
ರಾಜಾ ಬೀರಬಲನು ಸ್ವಾತ ಮೈದಾನಕ್ಕೆ ತಲುಪಿ ಪಠಾಣರನ್ನು
ಒಳಿತಾಗಿ ಹಣ್ಣಿಗೆ ತಂದನು ಅವರಿಗೆ ಸ್ಥಳವನ್ನು ಕೈವಶಮಾಡಿಕೊಂಡು,
ಅವರನ್ನು ಅಲ್ಲಿಂದ ಓಡಿಸಿದನು ಅವರನ್ನು ಕೇವಲ ಕೈಶಸ್ತ್ರಗಳಿಂದಲೇ ಪರಾ
ಜಿತರನ್ನಾಗಿ ಮಾಡಿದನು ಆಗ ಪಠಾಣರ ಸೈನ್ಯದಲ್ಲಿ ಘಟ್ಟದ ಮಾರ್ಗಗಳ
ನ್ನು ಕಾಯ್ದುಕೊಂಡು ಇದ್ದ ಕೆಲವು ಸೈನಿಕರು ಮಾತ್ರ ಉಳಿದಿದ್ದರು ಅವ
ರನ್ನು ಕೈವಶ ಮಾಡಿಕೊಳ್ಳುವುದು ಅತಿದುವರವಾದದ್ದೆಂದು ಯೋಚಿಸಿ ಜೈ
ನಖಾನು ಮತ್ತೆ ಕೆಲವು ಸೈನ್ಯವನ್ನು ಸಹಾಯಕ್ಕೆ ಕಳುಹಿಸಬೇಕೆಂದು
ಪತ್ರವನ್ನು ಬರೆದನು ಬಾದಕಹನು ಬೀರಬಲನನ್ನು ಕಳುಹಿಸಿಕೊಟ್ಟ ಒಂಭ
ತು ದಿವಸದ ಮೇಲೆ ಪುನಃ ಹಮ ಅಬುಲ್ಲತಹನನ್ನು ಕಳಿಸಿಕೊಟ್ಟನು
ಬೀರಬಲ್ಲ ಮತ್ತು ಕೋಕಾ ಇವರಿಬ್ಬರ ನಡುವೆ ಬಹುದಿವಸದಿಂದ ದೀರ್ಘ
ವಾದ ದ್ವೇಷವಿತ್ತು ಅದರಂತೆ ಹಕೀಮ ಮತ್ತು ರಾಜಾ ಬೀರಬಲ್ಲ ಇವರ
ನಡುವೆಯೂ ಅಸೂಯೆಯು ಇತ್ತು. ರಾಜಾ ಬೀರಬಲನ ಮೇಲೆ ಬಾದ
ಕಹನು ದಿನದಿನಕ್ಕೆ ಹೆಚ್ಚು ಹೆಚ್ಚು ಪ್ರೀತಿ ಮಾಡ ಹತ್ತಿದಂತೆ ಕೋ
ಕಾ ಮತ್ತು ಹಕೀಮ ಇವರಿ ವರ ಮನಸ್ಸಿನಲ್ಲಿ ಅಸೂಯಾಗ್ನಿಯು ಪ್ರಬ
ಲವಾಗಹತ್ತಿತು ಈಪ್ರಕಾರ ಒಬ್ಬರನ್ನೊಬ್ಬರು ದೇಪಿಸುತ್ತಿದ್ದ ಈ ಮೂ
ವರು ಸರದಾರರು ಒಂದೇ ಕೆಲಸದಮೇಲೆ ನಿಯಮಿಸಲ್ಪಡಲು ತೀನತೇರಾ
ನೌ, ಅಥರಾ ” ಎಂಬ ಸಾವತಿಯಂತೆ ಅಯಿತು.
ಬೀರಬಲ್ಲನ ಮರಣದ ವಾರ್ತೆಯನ್ನು ತಿಳಿದು ಬಾದಶಹನು ದುಃಖಪಟ್ಟದ್ದು,
" ಅಕಬರನಾಮಾ ” ಎಂಬ ಗ್ರಂಥದಲ್ಲಿ ಬರೆದದ್ದೇನಂದರೆ;- "ಬಾದ
ಕಹನಿಗೆ ಬೀರಬಲನ ಮರಣವಾರ್ತೆಯು ತಿಳಿದಕೂಡಲೆ ಬಹು ಖೇದವಾಯಿ
ತು ಬಾದಕಹನು ಎರಡು ದಿವಸ ಅನ್ನವನ್ನು ಸಹಾಮುಟ್ಟಲಿಲ್ಲ ಒಂದುಮೂಲೆಯಲ್ಲಿ ಕುಳಿತು ಶೋಕಮಾಡಹತ್ತಿದನು ಕಡೆಗೆ ಅವನ ತಾಯಿಯೂ, ದರಬಾರದ ಮುತ್ಸದ್ದಿಗಳೂ ಬಹು ಪರಿಯಾಗಿ ಹೇಳಿಕೊಂಡದ್ದರಿಂದ ಎರಡು
ದಿವಸದಮೇಲೆ ಎದ್ದು ಭೋಜನ ಮಾಡಿ ಬೀರಬಲನನ್ನು ಕೊಂದ ಮನುಷ್ಯ
ನಿಗೆ ನಾನೇ ಯೋಗ್ಯ ಪ್ರಾಯಶ್ಚಿತ್ತವನ್ನುಂಟು ಮಾಡುತ್ತೇ ನೆಂದು
ತಿಜ್ಞೆಯನ್ನು ಮಾಡಿ ಅಫಗಾನಿಸ್ತಾನಕ್ಕೆ ಹೊರಡಲನುವಾದನು ಆದರೆ ಕು
ಭಚಿಂತಕರಾದ ಕೆಲವು ಸರದಾರರು ಅವನನ್ನು ಹೋಗಗೊಡಲಿಲ್ಲ.
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೩೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೬
ಪೂರ್ವಜನ್ಮದ ವೃತ್ತಾಂತ