ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೩)
ಪೂರ್ವಜನ್ಮದ ವೃತ್ತಾಂತ.
೧೬

"ಮುಂತ ಖಬುಲ್" ಎಂಬ ಗ್ರಂಥದಲ್ಲಿ ಹೀಗೆ ಬರೆದಿರುವದಲ್ಲಾ;- ಬಾದಸಹನಿಗೆ ಬೀರಬಲನ ಹೊರತು ಯುದ್ಧದಲ್ಲಿ ಎಷ್ಟೋಜನ ಸರದಾರರು ಸತ್ತು ಹೋಗಿದ್ದರೂ ಸಹ ಅವನಿಗೆ ಅಮ್ಮ ವ್ಯಸನವಾಗಿದ್ದಿಲ್ಲ; ಆದರೆ ಬೀರ ಬಲನ ಮರಣದಿಂದ ಬಾದಶಹನಿಗೆ ಹೇಳಕೂಡದಷ್ಟು ವ್ಯಸನವಾಯಿತು, ಅವನು ಒಂದೊಂದುಸರತಿ “ ಬೀರಬಲನ ಕವವನ್ನು ಯಾವನಾದರೂ ಸರ ದಾರನು ಆ ಇಕ್ಕಟ್ಟಾದ ಘಟ್ಟದೊಳಗಿಂದ ಹೊರಗೆ ತೆಗೆದುಕೊಂಡು ಬಂದು ನನಗೆ ಹೇಳಿಕಳುಹಿಸಿದ್ದರೆ ನಾನು ಅವನ ದಹನ ಕ್ರಿಯೆಯನ್ನು ಯಥಾವಿ ಧಿಯಾಗಿ ನೆರವೇರಿಸಿ, ಅವನ ಋಣದೊಳಗಿಂದ ಅಲ್ಪ ಸ್ವಲ್ಪ ಮಟ್ಟಿಗೆ ಬಿಡು ಗಡೆಯಾಗುತ್ತಿದ್ದೆನಲ್ಲಾ ” ಎಂದು ಹಂಬಲಿಸುತ್ತಿದ್ದನು. ಒಂದೊಂದು ಸರತಿ ಬೀರಬಲನು ಯಾವತ್ತು ಸಂಸಾರ ಬಂಧನದೊಳಗಿಂದ ಪಾರಾಗಿ ಜೀವನ್ಮು ಕನಾಗಿ ಹೋದನು. ಅವನ ಕೀರ್ತಿಯು ಈ ನರವಾದ ಜಗತ್ತಿನಲ್ಲಿ ಅಜ ರಾಮರಣವಾಗಿ ನಿಂತುಕೊಂಡದೆ, ಎಂದು ಸಂತೋಷಪಡುತ್ತಿದ್ದನು.
ಗುಜರಾಥದ ಸುಭೇದಾರನಾದ ಖಾನಖಾನನಿಗೆ ಬರೆದ ಆಜ್ಞಾಪತ್ರ ದಲ್ಲಿ ಬೀರಬಲನ ಮೃತ್ಯುವಿನ ವಿಷಯದಲ್ಲಿ ಅಕರಬಾದಹನು ಬರೆದ ಆಸೆ ಯವನ್ನು ( ಅಬುಲ್ ಫಜಲನು ” ತನ್ನ “ ಆಬುಲ್‌ಜಲ್ ಮನಕಿಯಾತ್ ಎಂಬ ಗ್ರಂಥದಲ್ಲಿ ಸಾದ್ಯಂತವಾಗಿ ಬರೆದು ಇಟ್ಟಿದ್ದಾನೆ. ಅದರ ಸಾರಾಂಶ ವೇನಂದರೆ;-
"ಆ ದಿವಸ ಮೇಲಿಂದಮೇಲೆ ಜಯವಾದ ವರ್ತಮಾನಗಳೇ ಬರಹ ತ್ತಿದ್ದವು. ಅಷ್ಟರಲ್ಲಿ ಸ್ವಾತ ಮತ್ತು ಬಾಜೋರ ಎಂಬ ಸ್ಥಲಗಳನ್ನು ಜಯಿ ಸಲಿಕ್ಕೆ ಕಳುಹಿಸಿದ ಸೈನ್ಯವು ಬಹಳವಾಶವಾಗಿ ಆ ಪ್ರಾಂತಗಳು ಕೈವಶವಾ ಗುವ ಸುಸಮಯವು ಸಮೀಪಿಸಿತು, ಪಠಾಣ ಸೈನ್ಯವು ಸರ್ವತದ ಕಂದರಗ ಳಲ್ಲಿ ಹೊಗಿ ಜೀವ ಉಳಿಸಿಕೊಳ್ಳುವ ಹವ್ಯಾಸದಲ್ಲಿದ್ದರು. ಸೈನ್ಯದ ನಾಯ ಕನು (ಅಫಸರ) ಒಡಂಬಡಿಕೆಯನ್ನು ಮಾಡಿಕೊಳ್ಳಬೇಕೆಂದು ಯೋಚಿಸು ತಿದ್ದನು. ಆದರೆ ಈ ಅಕಬರ ಬಾದಕಹನು ಕಳುಹಿಸಿಕೊಟ್ಟ ಈ ನಾಲ್ಕು ಜನ ಸರದಾರರು ಮಿಲಿತರಾದ ಸಮಯವು ಕುಮುಹೂರ್ತವಾಗಿತ್ತು, ಅದ ರಿಂದ ಬಾದಕಹನ ಸೈನ್ಯವು ಪರಾಜಿತವಾಗಿ ಹಿಂದಿರುಗಿಬಂತು, ಈ ಯುದ್ಧ ದಲ್ಲಿ ನಮ್ಮ ಸಭಾರತವೂ, ನಮ್ಮ ದರಬಾರದ ಆಧಾರಸ್ತಂಭವೂ, ಬುದಿ ವಂತನಾದ ಮಂತ್ರಿಯೂ ಆದ ನನ್ನ ಪರಮಮಿತ್ರನಾದ ಬೀರಬಲನು ನಕ್ಷ ರವಾದ ಜಗತ್ತನ್ನು ತ್ಯಾಗಮಾಡಿ ಪರಲೋಕಕ್ಕೆ ಹೊರಟುಹೋದನು. ನನ್ನ ಸಂತೋಷವೆಲ್ಲ ಲಯವಾಗಿ ರಸಾತಳಕ್ಕೆ ಹೋಯಿತು ಈ ಸಂಸಾರವು