ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ,



"ದೀನಜಾನ ಸಬದೀನ ಎಕದುರಾಯೋ ದುಸಹ ದುಖ
ಸೋ ಅಬಹಮಕೋ ದಿನ, ಕಛನಹಿ ರಾಜ್ಯೋಬೀರಬರ
ಪೀಥಲ ಸೋಮಜಲಿನ ಗಯಿ, ತಾನಸೇನಸೋ ರಾಗ
ಹಸಿಬೋ ರಮಿಬೋ ಬೋಲಿಬೋ, ಗಯೋಬೀರಬಲನಾಥ ||೨||

ಬೀರಬಲನ ಮರಣದ ವಾರ್ತೆಯು ಫಾಲ್ಗುಣ ಶುಕ್ಲ ದ್ವಿತೀಯಾ ಗುರು ವಾರ ದಿವಸ ಬಂದುಮುಟ್ಟಿತು. ಮುಂದೆ ಶುಕ್ಲಪಕ್ಷ ಸಪ್ತಮಿಯ ದಿವಸ ಕೊಕಾ ಮತ್ತು ಹಕೀಮ ಇವರಿಬ್ಬರು ಮೋರೆಯನ್ನು ಒಣಗಿಸಿಕೊಂಡು ಲಜ್ಜಿತರಾಗಿ ಬಾದಶಹನಿಗೆ ಬಂದು ಬೆಟ್ಟಿಯಾದರು. ಆಗ ಬಾದಸಹನು ಬ ಹುಕೃದ್ಧನಾಗಿ ಕೆಲವು ದಿವಸ ಅವರನ್ನು ದರಬಾರಕ್ಕೆ ಕರಿಸದೆ ಬಿಟ್ಟುಬಿ ಟ್ಟಿದ್ದನು.
ಬಾದಶಹನ ಅಪ್ಪಣೆಯ ಮೇರೆಗೆ ರಾಜಾ ಮಾನಸಿಂಹನು ಖೈಬರಘ ಟ್ಟದಲ್ಲಿದ್ದ ಪಠಾಣರೊಡನೆ ಹೋರಾಡುತ್ತಿರಲು, ತೋಡರ ಮಲ್ಲನು “ ಸ್ವಾ ತಬುನೇರೆ ” ಎಂಬ ಸ್ಥಳವನ್ನು ಕೈವಶಮಾಡಿಕೊಂಡು ಹಿಂದಿರುಗಿ ಬಂದು ಖೈಬರ ಘಟ್ಟದಲ್ಲಿ ಯುದ್ಧ ಮಾಡುತ್ತಿದ್ದ ಮಾನಸಿಂಹನ ಸಹಾಯಕ್ಕೆ ಬಂದ ನು, ಎರಡೂ ಕಡೆಯಿಂದ ಬರುವ ಶರವೃಷ್ಟಿಗಳನ್ನು ತಾಳಲಾರದೇ ಪಠಾ ಣರು ಕೈಸೆರೆಸಿಕ್ಕರು ಅವರನ್ನು ತುರ್ಕಸ್ಥಾನಕ್ಕೆ ಕಳಿಸಿ ಗುಲಾಮರಂತೇ ವಿಕ್ರಯಿಸಿ ಬಿಟ್ಟರು.
ಈಪ್ರಕಾರ ಬಾದಶಹನು ಇಂಥ ಅನನ್ವಿತ ಕೃತ್ಯಕ್ಕೆ ಹಿಂದೆ ಎಂದೂ ಅಪ್ಪಣೆಕೊಟ್ಟಿದ್ದಿಲ್ಲ, ಆದರೆ ಬೀರಬಲನ ಮರಣದ ಸೇಡು ತೀರಿಸಿಕೊಳ್ಳಬೇ ಕೆಂದು ಈಪ್ರಕಾರ ಅಪ್ಪಣೆಯನ್ನು ಕೊಟ್ಟನು, ಇದರಹೊರ್ತು ಅನ್ಯಥಾ ಕಾರಣವಿದ್ದಿಲ್ಲ.

ವೇಷಧಾರಿಯಾದ ಬೀರಬಲ,

ಅಕಬರ ಬಾದಶಹನಿಗೆ ಸಂತೋಷವಾಗಬೇಕೆಂದು ಕೆಲವು ಜನರು ಬೀರಬಲನು ಸತ್ತಿಲ್ಲವೆಂತಲೂ, ಕಾಳಗದಲ್ಲಿ ಫಾಯಪಟ್ಟು ಬದುಕಿಕೊಂಡಿ ರುವನೆಂತಲೂ, ಅನೃತ ವರ್ತಮಾನವನ್ನು ಹುಟ್ಟಿಸಿದ್ದರು. ಮತ್ತೆ ಕೆಲವರು ಅವನನ್ನು ಹುಡುಕಿಕೊಂಡು ಬರುವೆವೆಂತಲೂ ವಚನವನ್ನು ಕೊಟ್ಟಿದ್ದರು. ಒಬ್ಬ ಮೋಸಗಾರನು ತಾನೇ ಬೀರಬಲನೆಂದು ಪ್ರಕಟವಾಗಿದ್ದನು.
ಬೀರಬಲನು ಸ್ವರ್ಗಸ್ಥನಾಗಿ ಎರಡು ವರುಷಗಳಾದಮೇಲೆ ಸೀಧೇ ಎಂಬ ಗ್ರಾಮದಲ್ಲಿ ಇದ್ದ ಒಬ್ಬ ಬ್ರಾಹ್ಮಣನು ತಾನೇ ಬೀರಬಲನೆಂದೂ, ಪಠಾಣರ ಸಂಗಡ ಕಾಳಗಮಾಡುವಾಗ ಫಾಯಹೊಂದಿ ಬಿದ್ದಿರುವಾಗ ಒಬ್ಬ .