ಸಾಧುಪುರುಷನು ತನ್ನನ್ನು ಬದುಕಿಸಿದನೆಂತಲೂ ಹೇಳುತ್ತಿದ್ದನು. ಬೀರ
ಬಲ್ಲ ಮತ್ತು ಆ ಬ್ರಾಹ್ಮಣನ ರೂಪದಲ್ಲಿ ಸಾಮ್ಯತೆಯಿತ್ತು, ಮತ್ತು ಅವನು
ಬೀರಬಲನು ಮಾಡಿದ ಕೆಲಸಗಳನ್ನೆಲ್ಲ ಅರಿತುಕೊಂಡದ್ದರಿಂದ ಹಿಂದಿನ ಎಲ್ಲ
ಕೃತಿಗಳನ್ನು ಜನರಿಗೆ ನಂಬಿಗೆಯಾಗುವಂತೆ ಹೇಳುತ್ತಿದ್ದನು. ಈ ಎಲ್ಲಾ
ಕಾರಣಗಳಿಂದ ಬೀರಬಲನು ಜೀವಂತನಾಗಿರುವನೆಂದು ಜನರೊಳಗೆಲ್ಲ ಪ್ರ
ಚಾರವಾಯಿತು. ಈ ರ್ವತಮಾನವು ಬಾದಶಹನ ಕಿವಿಯವರೆಗೆ ಹೋಗಲು
ಅವನು ಆ ಬ್ರಾಹ್ಮಣನನ್ನು ಕರೆಯಿಸಿಕೊಂಡನು. ಅವನು ಮಾರ್ಗದಲ್ಲಿ ಬ
ರುತ್ತಿರುವಾಗ ಯಾವದೋ ಒಂದು ವ್ಯಾಧಿಯಿಂದ ಪರಲೋಕವನ್ನ್ನೈದಿದನು
ಈ ಸಂಗತಿಯು " ಅಕಬರನಾಮಾ" ಎಂಬ ಗ್ರಂಥದಲ್ಲಿ ಬರೆದಿದೆ.
ಇದರಂತೆಯೇ ಮುಂತಖಬುಲ ತವಾರೀಖ” ಎಂಬ ಗ್ರಂಥದಲ್ಲಿಯೂ ಈ
ಸಂಗತಿಯನ್ನು ಈಪ್ರಕಾರ ಬರೆದಿದ್ದಾನೆ; " ಹಿಜರಿ ನನ್ ೯೯೬-ನೇ ವ
ರುಷ ಅಂದರೆ (ಸಂವತ್ ೧೬೪೪) ನೇದರಲ್ಲಿ ಬೀರಬಲನು ಕಾಳಗದಲ್ಲಿ ಘಾ
ಯಹೊಂದಿ ವ್ಯಾಧಿಯಿಂದಬಳಲುತ್ತ ನಗರಕೋಟದ ಹತ್ತಿರಬಂದು ಸನ್ಯಾಸಿ
ನಿಯ ವೇಷಧಾರಣೆ ಮಾಡಿಕೊಂಡು ವಾಸವಾಗಿದ್ದಾನೆ” ಎಂದು ಹುಟ್ಟಿದ
ವರ್ತಮಾನವನ್ನು ಕೇಳಿ, ಬಾದಶಹನು ಯೋಚಿಸಿದ್ದೇನಂದರೆ - " ಕಾಳಗ
ದಲ್ಲಿ ಪರಾಜಿತನಾದ್ದರಿಂದ ಮುಖತೋರಿಸಲಿಕ್ಕೆ ನಾಚಿಕೆಪಟ್ಟು, ಅಲ್ಲಿ ವಾಸ
ವಾಗಿದ್ದರೂ ಆಗಿರಬಹುದು ” ಎಂದು ನಿಶ್ಚಯಿಸಿ, ನಗರಕೋಟಕ್ಕೆ ಒಬ್ಬ
ಮನುಷ್ಯನನ್ನು ಕಳಿಸಿ ನಿಜಸಂಗತಿಯನ್ನು ತಿಳಿದುಕೊಳ್ಳಬೇಕೆಂದು ಯೋ
ಚಿಸಿದನು, ಆದರೆ ಅದು ಅನೃತವಾದ ವರ್ತಮಾನವೆಂದು ಒಬ್ಬ ನಂಬಿಗಸ್ತ
ಮನುಷ್ಯನ ಮುಖದಿಂದ ತಿಳಿದುಬಂತು. ಮತ್ತೊಂದುಸಾರೆ ಬೀರಬಲನು
ತನಗೆ ಜಹಾಗೀರಿಯಾಗಿ ಕೊಟ್ಟ ಕಾಲಿಂಜರವೆಂಬಲ್ಲಿ ಅಡಗಿಕೊಂಡು ಕುಳಿ
ತುಕೊಂಡಿದ್ದಾನೆಂದು ವರ್ತಮಾನಹುಟ್ಟಿತು ಆಗ ಕಾಲಿಂಜರದಲ್ಲಿದ್ದ ಕಿಲ್ಲೆ
ದಾರನಿಗೆ “ ಪ್ರಚ್ಛನ್ನನಾಗಿದ್ದ ಬೀರಬಲನನ್ನು ಕಳುಹಿಕೊಡಬೇಕೆಂದು "
ಆಜ್ಞಾಪತ್ರವನ್ನು ಬರೆದನು ಆ ಕಿಲ್ಲೆದಾರನು ಒಬ್ಬಯಾತ್ರಿಕನನ್ನು ಬೀ
ರಬಲನೆಂದು ತಿಳಿದು ತನ್ನ ಬಳಿಯಲ್ಲಿ ಇಟ್ಟುಕೊಂಡಿದ್ದನು. ಬಾದಶಹನ
ಆಜ್ಞಾಪತ್ರವು ಬಂದು ತಲ್ಪಿದಕೂಡಲೆ ಬಾದಶಹನು ತನಗೆ ಏನುಶಾಸನವ
ನ್ನು ಮಾಡುವರೋ ಎಂಬ ಭೀತಿಯಿಂದ ಅವನನ್ನು ಕೊಂದು ಬಾದಶಹನಿಗೆ
"ನಮ್ಮಲ್ಲಿ ಬೀರಬಲನಿದ್ದದ್ದು ನಿಜ, ಆದರೆ ಈಗ ಕೆಲವು ದಿವಸಗಳ ಹಿಂದೆ,
ಅವನು ಅಕಸ್ಮಾತ್ತಾಗಿ ಮರಣಹೊಂದಿದನು. ” ಎಂದು ರಿಪೋರ್ಟೆನ್ನು ಬ
ರೆದು ಬಾದಶಹನ ಸನ್ನಿಧಿಗೆ ಕಳುಹಿಸಿದನು. ಇದನ್ನು ಕೇಳಿದಮೇಲೆ ಬಾದ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೩೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೦
ಪೂರ್ವಜನ್ಮದ ವೃತ್ತಾಂತ,