ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೨
ಪೂರ್ವಜನ್ಮದ ವೃತ್ತಾಂತ.


ಹೈಜೋಬಿರುಲಾವುಲಹಾಯೋ ॥ ೪ |

ನ್ಯಾಯಪರಾಯಣತೆಯು.

ರಾಜಾ ಬೀರಬಲನು ನ್ಯಾಯ ವಿಮರ್ಶೆ ಮಾಡುವದರಲ್ಲಿ ಅದ್ವಿತೀಯ ನಾಗಿದ್ದನು ಅವನುತನ್ನ ಬುದ್ಧಿ ಬಲದಿಂದ ಅಕಬರಬಾದಶಹನ ಮೇಲೆ ವರ್ಚಸ್ಸ ನ್ನುಂಟು ಮಾಡಿದ್ದನು ಒಂದೊಂದು ಸಮಯದಲ್ಲಿ ಬಾದಶಹನು ಇವನ ನ್ಯಾಯ ವಿಮರ್ಶೆಯಜಾಣತನವನ್ನು ಕಂಡು ಬೆರಗಾಗಿ ಹೋಗುತ್ತಿದ್ದನು.
"ಅಕಬರ ನಾಮಾ ” ಎಂಬ ಗ್ರಂಥದಲ್ಲಿ ಹೀಗೆ ಉಲ್ಲೇಖವಿರುವದು, ಎಂತೆಂದರೆ "ಜಲೂನಿ ಸನ್ ೨೭ (ಸಂವತ್ ೧೬೩೮) ನೇದರಲ್ಲಿ ನೂತನ ವರುಷಾರಂಭದ ಉತ್ಸವದಲ್ಲಿ ಬಾದಶಹನು ತನ್ನ ಮುತ್ಸದ್ಧಿಗಳನ್ನು ಕುರಿ ತು “ ರಾಜಾ ಮತ್ತು ಪ್ರಜೆಗಳಿಗೆ ಹಿತನಾಗುವಂಥ ಒಂದೊಂದು ಸಂಗತಿ ಯನ್ನು ನಿವೇದಿಸಿರಿ ” ಎಂದು ಅಪ್ಪಣೆಯನ್ನಿತ್ತನು ಆ ಸಮಯದಲ್ಲಿ ರಾಜಾ ಬೀರಬಲನು ನಿವೇದಿಸಿದ್ದೇನಂದರೆ " ನ್ಯಾಯ ವಿಮರ್ಶೆ ಮಾಡತಕ್ಕ ಮನು ಷ್ಯನು ಯಾವಾಗಲೂ ಪ್ರಜೆಗಳಲ್ಲಿ ಕೂಡಿಕೊಂಡು ಹೋಗತಕ್ಕದ್ದು; ಅಂ ದರೆ- ಪ್ರಜೆಗಳು ತಮಗೆ ಉಂಟಾಗುವ ಸುಖದುಃಖಗಳನ್ನು ನಿರ್ಭಯದಿಂದ ಹೇಳಿಬಿಡುವರು” ಎಂದು ಹೇಳಿದ ಬೀರಬಲನ ಯುಕ್ತ ಯುಕ್ತವಾದ ಮಾ ತುಗಳಿಂದ ಬಾದಶಹನು ಪ್ರಸನ್ನನಾಗಿ ಆ ಕೆಲಸವನ್ನು ಬೀರಬಲನಿಗೆ ಒಪ್ಪಿ ಸಿದನು, ಮುಂದೆ ಎರಡು ವರುಷಗಳಾದ ಮೇಲೆ " ಕಾಸಮಖಾ, ಹಕೀಮು ಹಮಾಮ, ಮತ್ತು ಶಮಶೇರಖಾ, ಕೊತವಾಲ, ಅಬುಲಫಜಲ್ ಮೊದಲಾದ ಕಾರಭಾರಿಗಳನ್ನು ಬೀರಬಲನ ಆಂಕಿತರನ್ನಾಗಿ ಮಾಡಿ ಅವರಿಗೆ ಆಜ್ಞಾಪಿ ನಿದ್ದೇನೆಂದರೆ. " ಶಪಥ ಮತ್ತು ಸಾಕ್ಷಿಗಳಮೇಲೆ ವಿಶ್ವಾಸವನ್ನಿಡದ ಕುಕಾ ಗ್ರಬುದ್ಧಿಯಿಂದಲೂ ಅನುಭವದಿಂದಲೂ ನ್ಯಾಯ ವಿಮರ್ಶೆಯನ್ನು ಮಾಡಿರಿ ಮತ್ತು ಅಭಿಯೋಗಿಗಳ ವಿಚಾರಣೆ ಮಾಡುವದರಲ್ಲಿ ಅಧಿಕ ಕಾಲಹರಣ ಮಾಡಬೇಡಿರಿ:-

ನ ಡಾ ವ ಳಿ .

ಬೀರಬಲನ ಸ್ವಭಾವವು ಬಹಳ ಉತ್ತಮವಾದದ್ದಿ ತ್ತು ಜನರನ್ನು ಒಲಿ ಸಿಕೊಳ್ಳುವದರಲ್ಲಿ ಯಂತೂ ಅಪ್ರತಿಮನಾಗಿದ್ದನು ಇವನು ಬಾದಶಹನ ದರ ಬಾರದಲ್ಲಿ ಉಚ್ಚಪದವಿಯನ್ನು ಹೊಂದಿ ಸದ್ವ್ಯವಹಾರದಿಂದ ವರ್ತಿಸಿ ಪ್ರ ಚೆಗಳಿಗೆಲ್ಲರಿಗೂ ಮಹದುಪಕಾರವನ್ನು ಮಾಡಿದನ್ನು ಸಮಯೋಚಿತವಾ ಸಂಭಾಷಣೆಗಳನ್ನು ಮಾಡುವವರಲ್ಲಿ ಇವನ ಹೆಸರು ಪ್ರಥಮದಲ್ಲಿತ್ತು ಬ್ರಾ ಹ್ಮಣರಿಗೆ ಎಷ್ಟೋಗ್ರಾಮಗಳಲ್ಲಿ " ಚೌಥಾಯಿ ” ಎಂಬ ಹಕ್ಕನ್ನು ಕೊಡಿ "