ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೩೧


ಯಾಡಿಸಿಕೊಳ್ಳುತ್ತ ಕುಳಿತಿದ್ದನು ಅದನ್ನು ಒಬ್ಬ ಬೋದದಾರನು ಕಂಡು ಅನ್ನುತ್ತಾನೆ; ಎಂಥಾ ಉತ್ತಮವಾದ ಹೊಟ್ಟೆಯಿರುವುದು? ” ಬೀರಬಲನು ಅನ್ನುತ್ತಾನೆ; -ನೀನೂ ಇಟ್ಟುಕೊ ನಾನು ನೋಡುತ್ತೇನೆ” ಆಗ ಚೋಪದಾರನು ನಕ್ಕು- ಇದಾದರೂ ನಮ್ಮದೇ ಅದೆ ನಾನೇ ಹಾಗೆ ಮಾಡಿಟ್ಟುಕೊಳ್ಳುವ ಕಾರಣವಿಲ್ಲ” ಎಂದನು ಬಿರುಬಲನು ನಗುತ್ತ ಎದ್ದು ಹೋದನು.

೫ ತಾವು ಬಾದಶಹರು ಹ್ಯಾಗಾಗುತ್ತಿದ್ದೀರಿ

ಅಕಬರ ಬಾದಶಹನು ಅನ್ನುತ್ತಾನೆ; ಈ ಅರಸುತನವು ಬಾದ ಸಾಹಿತ್ಯವು ಎಂದೂ ನಷ್ಟವಾಗದಿದ್ದರೆ ಎಂಥಾ ಉತ್ತಮವಾಗುತ್ತಿತು? ? ಬೀರಬಲನು ಅನ್ನುತ್ತಾನೆ; ಹಾಗಾಗಿದ್ದರೆ ತಮಗೆ ಬಾದಶಹರಾಗುವ ಸಂಧಿಯು ಹ್ಯಾಗೆ ದೊರೆಯುತ್ತಿತ್ತು? ”

೬ ಕೂರ ಮತ್ತು ಅಂಜುಗುಳಿ.

ಒಂದು ದಿವಸ ಬಾದಶಹನು ಬೀರಬಲನಿಗೆ ಹೇಳಿದ್ದೇನಂದರೆ - ಒಬ್ಬ ಕೂರನನ್ನೂ ಮತ್ತು ಒಳ್ಳ ಅಂಜುಗುಳಿಯನ್ನೂ ಈ ಪಟ್ಟಣದಲ್ಲಿ ಹು ಡಿಕಿಕೊಂಡು ಕರೆದುಕೊಂಡು ಬಾ' ಎಂದು ಅಪ್ಪಣೆಯನ್ನಿತ್ತನು ಕೂಡಲೆ ಬೀರಬಲನು ಪೇಟೆಯೊಳಗೆ ಹೋಗಿ ಒಬ್ಬಸ್ತ್ರೀಯನ್ನು ಕರೆದುಕೊಂಡುಬಂ ದನು ಆಗ ಬಾದಶಹನು ಕೇಳುತ್ತಾನೆ? ನಾನು ಇಬ್ಬರನ್ನು ಕರೆದುಕೊಂ ಡು ಬಾ, ಎದು ಹೇಳಿದ್ದು ನೀನು ಒಬ್ಬಳನ್ನೇ ಯಾಕೆ ಕರಿದುಕೊಂಡು ಬಂದಿ ?
ಬೀರಬಲನು ಅನ್ನುತ್ತಾನೆ;-ಪೃಥ್ವಿನಾಥ ! ಈ ಸ್ತ್ರೀಯು ಕೂ ರಳ, ಮತ್ತು ಅಂಜುಗುಳಿಯೂ ಆಗಿದ್ದಾಳೆ.
ಬಾದಶಹ-ಅದು ಹ್ಯಾಗೆ ?
ಬೀರಬಲ ವರ್ಷಾಕಾಲದ ಅಂಧಕಾರಯುಕ್ತವಾದ ಅರ್ಧರಾತ್ರಿಯ ಸಮ ಯದಲ್ಲಿ ಇವಳು ಹೆದರದೆ ತನ್ನ ಪ್ರಾಣದಾಸೆಯನ್ನುಳಿದು ನಗರ ರಕ್ಷ ಕರ ಕಾವಲಿನೊಳಗಿಂದ ತಪ್ಪಿಸಿಕೊಳ್ಳುತ್ತ ತನ್ನ ಪ್ರಿಯನ ಮನೆಗೆ ಹೋಗುತ್ತಿರುವಳು; ಅಂದಮೇಲೆ ಇವಳಂಥರಳು ದೊರಕುವದೆಲ್ಲಿ ಮತ್ತು ತನ್ನ ಮನೆಯಲ್ಲಿದ್ದಾಗ ರಾತ್ರಿಯಲ್ಲಿ ಮೂಷಕಗಳ ಓಡಾಟದ ಸಪ್ಪಳವನ್ನು ಕೇಳಿದ ಕೂಡಲೆ ಭೀತಿಗ್ರಸ್ತಳಾಗಿ ನಡುಗ ಹತ್ತುವಳು ಅಂದಮೇಲೆ ಇವಳಂಥ ಭೀರುವು ಎಲ್ಲಿಯಾದರೂ ದೊರಕುವಳೇ