ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.


೬ ನಿಜವಾದ ಮೈಗಳ್ಳ.

ಒಂದುಸಾರೆ ಬಾದಶಹನು ಡಿಲ್ಲಿಯೊಳಗಿದ್ದ ಎಲ್ಲ ಮೈಗಳ್ಳರನ್ನು ಕೂ ಡಿಸಿ, ಇವರಿಗೆ " ನನ್ನ ಬೊಕ್ಕಸದೊಳಗಿಂದ ಊಟ ಉಡಿಗೆಗಳನ್ನು ಕೊಡ ಬೇಕು ಮತ್ತು ಇಂಥ ಅನ್ಯಜನ ರಾರಾದರೂ ಬಂದರೆ ಅವರನ್ನು ಸಹಾ ಪೋಷಣೆ ಮಾಡತಕ್ಕದ್ದು” ಎಂದು ಕಟ್ಟಪ್ಪಣೆ ಮಾಡಿದನು ಆಗ ಈವಾರ್ತೆ ಯನ್ನು ಕೇಳಿದವರೆಲ್ಲರೂ ನಾನೂ ಮೈಗಳ್ಳ ನೀನೂ ಮೈಗಳ ಎಂದು ಆನ್ನು ತ, ದಿಲ್ಲಿಯಲ್ಲಿ ಬಂದು ಕೂಡಹತ್ತಿದರು ಇದನ್ನು ಕಂಡು ಬಾದಶಹನಿಗೆ ಅತ್ಯಾಶ್ಚರ್ಯವಾಯಿತು ಆಗ ಬಾದಶಹನು ಬೀರಬಲನನ್ನು ಕರೆದು ಇವರಲ್ಲಿ ನಿಜವಾದ ಮೈಗಳ್ಳರು ಎಷ್ಟು ಮಂದಿ ಇರುವರೆಂಬದನ್ನು ಹುಡಿಕಿ ತೆಗೆ” ಎಂದು ಅಪ್ಪಣೆ ಮಾಡಿದನು ಆಗ ಬೀರಬಲನು ಪಟ್ಟಣದ ಬಹಿರ್ಭಾಗದಲ್ಲಿ ಒಂ ದುಹುಲ್ಲಿನ ಚಪ್ಪರವನ್ನು ಹಾಕಿಸಿ ಮೈಗಳ್ಳರೆಲ್ಲರೂ ಆಚಪ್ಪರದಲ್ಲಿ ಹೋಗಿ ಇರಬೇಕು ಎಂದು ಅಪ್ಪಣೆಮಾಡಿದನು ಮುಂದೆ ಕೆಲವು ದಿವಸಗಳಾದಮೇಲೆ ರಾತ್ರಿಯಲ್ಲಿ ಅವರೆಲ್ಲರೂ ಮಲಗಿಕೊಂಡಿರುವಸಮಯದಲ್ಲಿ ಆಚಪ್ಪರಕ್ಕೆ ಬೆಂಕಿಯನ್ನು ಹಚ್ಚಿಸಿ ಬಿಟ್ಟನು ಆಗ ಮೈಗಳ್ಳರೆಂದು ಕೂಡಿಕೊಂಡಿದ್ದ ಎಷ್ಟೋ ಜನರು ಗಾಬರಿಯಾಗಿ ತಮ್ಮ ತಮ್ಮ ಜೀವವನ್ನುಳಿಸಿಕೊಳ್ಳಬೇಕೆಂದು ಸಿ ಕ್ಕಸಿಕ್ಕ ಕಡೆಗೆ ಓಡಿಹೋದರು ಅಲ್ಲಿ ನಿಜವಾದ ಮೈಗಳ್ಳರು ಇಬ್ಬರೇ ಉಳಿದ ರು ಅವರನ್ನು ಕರೆದುಕೊಂಡು ಬಾದಶಹನಬಳಿಗೆ ಬಂದನು. ಬೀರಬಲನ ಈ ಚಾತುರ್ಯದಿಂದ ಬಾದಶಹನು ಸಂತುಷ್ಟನಾದನು.

೮ ಕಡುಲೋಭಿಯಾದ ಮನುಷ್ಯ.

ದಿಲ್ಲಿಯಲ್ಲಿ ಒಬ್ಬ ಕಡುಲೋಭಿಯಾದ ಮನುಷ್ಯನಿದ್ದನು. ಒಬ್ಬ ಕವಿ ಯು ಆ ಮನುಷ್ಯನ ಸ್ತುತಿಯುಕ್ತವಾದ ಒಂದು ಕವಿತೆಯನ್ನು ರಚಿಸಿ ಕೊಂಡು ಆ ಲೋಭಿಯಾದ ಮನುಷ್ಯನ ಮನೆಗೆ ಬಂದನು. ಆಗ ಲೋಭಿಯು ತನ್ನ ಮನಸ್ಸಿನಲ್ಲಿ ತಿಳಿದುಕೊಂಡದ್ದೇನಂದರೆ ಈ ಮನುಷ್ಯನು ನನ್ನನ್ನು ಪ್ರಸನ್ನೀಕರಿಸಿಕೊಂಡು ಏನಾದರೂ ಪಾರಿತೋಷಕವನ್ನು ಹೊಂದ ಬೇಕೆಂಬ ಆಸೆಯಿಂದ ಬಂದಂತೆ ಕಾಣುತ್ತದೆ, ಇರಲಿ ನಾನು ನನ್ನ ಸ್ತುತಿಪ ರವಾದ ಕವನವನ್ನು ಕೇಳಿ ಸಂತೋಷಯುಕ್ತನಾದ ಮೇಲೆ ಬರಿಯ ಮಾತಿ ನಿಂದಲೇ ಇವನನ್ನು ತೃಪ್ತಿಗೊಳಿಸಿ ಹಿಂದಿರುಗಿ ಕಳುಹಿಸಿಬಿಟ್ಟರಾಯಿತು ಎಂದು ಯೋಚಿಸಿಕೊಂಡು, ಆ ಕವಿಯನ್ನು ಒಳ್ಳೆ ಮರ್ಯಾದೆಯಿಂದ ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡು, ಬಂದಕಾರ್ಯವೇನೆಂದು ಪ್ರಶ್ನೆ ಮಾಡಿದನು ಆಗ ಕವಿಯು ತಾನುಮಾಡಿದ ಕವಿತ್ವವನ್ನು ಹೇಳಿದನು ಆಗ ಲೋಭಿಯು "