ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೦
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.

ಸಬೇಕೆಂದು ತಿಳಿದು ಮನುಷ್ಯವರ್ಗವನ್ನು ನಿರ್ಮಿಸಿದನು. ಆ ಮೇಲೆ ಮನುಷ್ಯನಿಗೆ ಅವಶ್ಯವಾಗಿ ಬೇಕಾಗಿರುವ ರೂಪ, ಧನ, ಬುದ್ಧಿ,ಸಾಮರ್ಥ್ಯ ಎಂಬವುಗಳನ್ನು ನಿರ್ಮಿಸಿ, ಅವುಗಳನ್ನು ಪ್ರತ್ಯೆ ಪ್ರತ್ಯೇಕವಾಗಿ ಇಟ್ಟು, ಈ ನಾಲ್ಕು ಪದಾರ್ಥಗಳಲ್ಲಿ ನಿಮ್ಮ ನಿಮ್ಮ ಮನಸ್ಸಿಗೆಬಂದ ಪದಾರ್ಥಗಳನ್ನು ತೆಗೆದು ಕೊಳ್ಳಿರಿ ? ಎಂದು ಆಜ್ಞೆಯಿತ್ತನು. ನಾನು ಮಟ್ಟ ಮೊದಲು ಹೋಗಿ ಬುದ್ಧಿಯನ್ನು ತೆಗೆದು ಕೊಂಡೆನು; ಆ ಮೇಲೆ ಎರಡನೇ ಪದಾರ್ಥಗಳನ್ನು ತೆಗೆದುಕೊಳ್ಳಬೇಕೆಂದು ಹೋಗುವಷ್ಟರಲ್ಲಿಯೇ ನೀವೆಲ್ಲರೂ ನಿಮ್ಮ ನಿಮ್ಮ ಮನಸ್ಸಿಗೆ ಬಂದ ಉಳಿದ ಪದಾರ್ಥಗಳನ್ನು ತೆಗೆದು ಕೊಂಡು ಬಿಟ್ಟಿದ್ದರಿಂದ ನನಗೆ ಬುದ್ಧಿಯ ಹೊರತು ಅನ್ಯಪದಾರ್ಥಗಳು ಸಿಕ್ಕಲೇ ಇಲ್ಲ ಇದರಿಂದ ನನ್ನ ದೇಹವು ಕೃಷ್ಣವರ್ಣವುಳ್ಳದ್ದಾಯಿತು ” ಎಂದು ಹೇಳಿದನು.
ಬೀರಬಲನ ಸಮಯೋಚಿತವಾದ ಸಂಭಾಷಣೆಯಿಂದ ಬಾದಶಹನು ಹರುಷ ನಿರ್ಭರವಾದನು. ಆವನು ಮನಸ್ಸಿನಲ್ಲಿ ಯೋಚಿಸಿದ್ದೇನಂದರೆ "ಬೀರಬಲನು ನಮ್ಮನ್ನು ಕೇವಲ ರೂಪಧಾರಿಗಳಾದ ಮೂರ್ತಿಗಳನ್ನಾಗಿ ಮಾಡಿ ಬುದ್ಧಿಹೀನರೆಂದು ಹೇಳಿ ತಾನು ಬುದ್ಧಿವಂತನೆಂದು ಹೇಳಿಕೊಂಡಂತಾಯಿತು ” ಬೀರಬಲನು ಹೇಳಿದ ಯುಕ್ತಿ ಯುಕ್ತವಾದ ಮಾತುಗಳಿಂದ ಸಭಿಕರೆಲ್ಲರೂ ಪ್ರಸನ್ನರಾಗಿ, ತಾವು ನಿಷ್ಕಾರಣವಾಗಿ ಬೀರಬಲನನ್ನು ಪರಿಹಾಸ ಮಾಡಿದೆವೆಂದು ಲಜ್ಜಿತರಾಗಿ ಕುಳಿತು ಕೊಂಡರು. ಅವರೆಲ್ಲರನ್ನು ಬೀರಬಲನು ತನ್ನ ಚಾತುರ್ಯದಿಂದ ವಶಪಡಿಸಿಕೊಂಡನು.

-(೧೨. ನ್ಯಾಯ ದ ಗ೦ಟೆ .)-

ಅಕಬರ ಬಾದಶಹನ ಮನಸ್ಸಿನಲ್ಲಿ, ತನ್ನ ರಾಜ್ಯದಲ್ಲಿ ಭಿಕ್ಷುಕನಿಂದ ಮೊದಲುಮಾಡಿ ಆಗರ್ಭ ಶ್ರೀಮಂತನವರೆಗೂ ಸರಿಯಾದ ನ್ಯಾಯ ಸಿಗಬೇಕೆಂಬ ಅಪೇಕ್ಷೆಯಿತ್ತು, ಅದಕ್ಕೊಸುಗವಾಗಿ ಅವನು ಮಧ್ಯವಸತಿಯಲ್ಲಿ ಒಂದು ಎತ್ತರವಾದ ಸ್ತಂಭವನ್ನು ನಿರ್ಮಿಸಿ, ಅದಕ್ಕೆ ಒಂದು ಕಬ್ಬಿಣದವಂಕಿಯನ್ನು ಕೂಡಿಸಿ, ಅದರೊಳಗೆ ಒಂದು ಹಗ್ಗವನ್ನು ಹಾಕಿ ಕೆಳಗೆ ಬಿಟ್ಟು ಅದರ ಎರಡನೇ ತುದಿಗೆ ಒಂದು ಗಂಟೆಯನ್ನು ಕಟ್ಟಿ ತನ್ನ ಮಹಲಿನೊಳಗೆ ಒಯ್ದಿದ್ದನು. ಯಾರಾದರೂ ನ್ಯಾಯವಿಮರ್ಶೆಗೋಸುಗ ಬಂದು ಆ ಹಗ್ಗವನ್ನು ಜಗ್ಗಿದಕೂಡಲೆ ಬಾದಶಹನು ಹೊರಗೆ ಬಂದು ವಿಚಾರಣೆಯನ್ನು ಮಾಡುತ್ತಿದ್ದನು. ಅದಕ್ಕೆ ಪ್ರಾತಃಕಾಲ ಮತ್ತು ಸಾಯಂಕಾಲದ ಒಂದೆರಡುತಾ