ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೬)
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೪೧

ಸುಗಳನ್ನು ನಿಯಮಿಸಿದ್ದನು.

ಜ್ಯೇಷ್ಠಮಾಸದಲ್ಲಿ ಒಂದುದಿವಸ ಒಳ್ಳೆಬಿಸಿಲು ಬಿದ್ದಿತ್ತು, ಶೆಕೆಯು ಅಧಿಕವಾಗಿತ್ತು, ಬಾದಶಹನು ಅಂತಃಪುರದಲ್ಲಿ ಮಲಗಿಕೊಂಡಿದ್ದನು. ಇಬ್ಬರು ಪರಿಚಾರಿಕೆಯರು ಎಡಬಲದಲ್ಲಿ ನಿಂತುಕೊಂಡು ಬೀಸಣಿಕೆಯಿಂದ ಗಾಳಿಯನ್ನು ಬೀಸುತ್ತಿದ್ದರು, ಇಬ್ಬರು ಸೇವಕರು ಚರಣಸೇವೆಯನ್ನು ಮಾಡುತ್ತ ಕುಳಿತುಕೊಂಡಿದ್ದರು. ಅಪ್ಪರಲ್ಲಿ ಗಂಟೆಯು ಬಾರಿಸಿತು ಕೂಡಲೇ ಬಾದಶಹನು ಎಚ್ಚತ್ತು ಹೊರಗೆ ಯಾರು ಬಂದಿರುವರು ನೋಡಿಕೊಂಡು ಬಾ ? ಎಂದು ಹೇಳಿ ಕಳುಹಿಸಿಕೊಟ್ಟನು. ಆ ಸೇವಕನು ಹೊರಗೆ ಹೋಗಿ ಬಂದು, ಒಂದು ಎತ್ತು ಗಂಟೆಯ ಹಗ್ಗವನ್ನು ತನ್ನ ಕೋಡಿಗೆ ಸಿಕ್ಕಿಸಿಕೊಂಡು ಜಗ್ಗಾಡಿದ್ದರಿಂದ ಗಂಟೆಯು ಬಾರಿಸಿತು ಎಂದು ಹೇಳಿದನು. ಬಾದಶಹನು ಮತ್ತೆ ಶಯನಮಾಡಿದನು. ಸ್ವಲ್ಪ ಹೊತ್ತಿನಲ್ಲಿ ಪುನಃ ಗಂಟೆಯ ಸಪ್ಪಳವುಂಟಾಯಿತು ಮತ್ತೆ ಸೇವಕನನ್ನು ಕಳುಹಿಸಿಕೊಟ್ಟನು. ಆಗಲೂ ಸಹ ಮೊದಲಿನಂತೆ ಅ ಗೂಳಿಯೇ ಹಗ್ಗವನ್ನು ಜಗ್ಗಿತೆಂದು ಹೇಳಿದನು. ಅದಕ್ಕೆ ಬಾದಶಹನು ಯೋಚಿಸುತ್ತ ಕುಳಿತುಕೊಂಡಿರುವಾಗಲೇ ಪುನಃ ಗಂಟೆಯು ಬಾರಿಸಿತು, ಆಗ ಬಾದಶಹನು ಅಂದದ್ದೇನಂದರೆ; "ಗಂಟೆಯನ್ನು ಬಾರಿಸಿದವನು ಮನುಷ್ಯನೇ ಆಗಲಿ, ಎತ್ತೇ ಆಗಲಿ ಕರೆದುಕೊಂಡು ಬಾ ?” ಎಂದು ಅಪ್ಪಣೆ ಮಾಡಿದನು ಸೇವಕರು ಒಡುತ್ತ ಹೋಗಿ ಹಗ್ಗದಿಂದ ಬಂಧನಮಾಡಿ ಎತ್ತನ್ನು ಹಿಡಿದುಕೊಂಡು ಬಂದು ಬಾದಶಹನ ಎದುರಿಗೆ ತಂದು ನಿಲ್ಲಿಸಿದರು. ಆಗ ಬಾದಶಹನು ಸಭಿಕರನ್ನು ಕುರಿತು “ಈ ಎತ್ತಿನ ಪ್ರಾರ್ಥನೆಯು ಏನಿರುವದೆಂಬದನ್ನು ವಿಚಾರಿಸರಿ” ಎಂದು ಅಪ್ಪಣೆಮಾಡಿದನು. ಎತ್ತಿನ ಪ್ರಾರ್ಥನೆಯನ್ನು ಹ್ಯಾಗೆ ಕೇಳಿ ತಿಳಿಯಬೇಕೆಂಬ ಯೋಚನೆಯಿಂದ ಯೆಲ್ಲರೂ ಸ್ತಂಭಿತರಾಗಿ ಕುಳಿತುಕೊಂಡಿದ್ದರು. ಅಷ್ಟರಲ್ಲಿ ಬೀರಬಲನು ಓಲಗಕ್ಕೆ ಬರಲು ಬಾದಶಹನು ಈ ಎತ್ತಿನ ಸಂದೇಶವೇನಿರುವದೆಂಬದನ್ನು ತಿಳಿದುಕೊಂಡು ಹೇಳು ಎಂದು ಅಪ್ಪಣೆಮಾಡಿದನು. ಬೀರಬಲನು ಆ ಎತ್ತಿನ ಹತ್ತರ ಹೋಗಿ ಅದರ ಮೈ ಮೇಲೆ ಕೈಯಾಡಿಸಿ ಹೇಳಿದ್ದೇನಂದರೆ, " ಜಹಾಪನಾ, ಈ ಎತ್ತು ತಮ್ಮ ಸನ್ನಿಧಿಯಲ್ಲಿ ಅರಿಕೆಮಾಡಿಕೊಳ್ಳುವದೇನಂದರೆ;- ನಾನು ಪ್ರಾಯಸ್ಥನಿದ್ದಾಗ್ಗೆ ಒಡೆಯನ ಹೇಳಿಕೆಯಂತೆ ಎಲ್ಲ ಕಾರ್ಯವನ್ನು ಜರಗಿಸುತ್ತಿದ್ದೆನು, ಆದರೆ ಈಗ ನಿರ್ಬಲತೆಯು ನನ್ನನ್ನು ಆವರಿಸಿಕೊಂಡಿರುವದರಿಂದ ಯಾವಕೆಲಸವೂ ನನ್ನಿಂದ ಸಾಗದಹಾಗಾಯಿತು, ಅದರಿಂದ ನನ್ನ ಸ್ವಾಮಿಯು ಕೋಪಿತನಾಗಿ ನನ್ನನ್ನು ಮನೆಬಿಡಿಸಿ ಹೊರಗೆ ಹಾಕಿದ್ದಾನೆ,"