ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೪೨


ಎಂದು ತಮ್ಮಡಿಯಲ್ಲಿ ಪ್ರಾರ್ಥನೆ ಮಾಡಲಿಕ್ಕೆ ಬಂದದೆ ಎಂದು ಹೇಳಿದನು.

ಕೂಡಲೆ ಬಾದಶಹನು. "ಬೀರಬಲ ನಿನ್ನ ಹೇಳಿಕೆಯು ನಿಜವೆಂಬಂತೆ ತೋರುತ್ತದೆ, ಈ ಎತ್ತಿನ ನಿಜವಾದ ಕಷ್ಟವನ್ನು ದೂರಮಾಡಲಿಕ್ಕೆ ಬೇಕು. ಆದ್ದರಿಂದ ಈ ಎತ್ತಿನ ಒಡೆಯನು ಯಾವನೆಂಬುದನ್ನು ಗೊತ್ತು ಹಚ್ಚಿಕೊಂಡು ನನ್ನೆಡೆಗೆ ಕರೆದುಕೊಂಡು ಬಾ” ಎಂದು ಅಪ್ಪಣೆಮಾಡಿದನು.

ಕೂಡಲೆ ಆ ಎತ್ತಿನಹಿಂದೆ ನಾಲ್ಕಾರು ಜನ ಜವಾನರನ್ನು ಕಳುಹಿಸಿಕೊಟ್ಟನು, ಆ ಎತ್ತು ನೆಟ್ಟಗೆ ತನ್ನ ಯಜಮಾನನ ಮನೆಯ ಮುಂದೆ ಹೋಗಿ ನಿಂತುಕೊಳ್ಳಲು, ಸಿಪಾಯಿಗಳು ಅವನನ್ನು ಹಿಡಿದುಕೊಂಡು ಬಂದು ಬಾದಶಹನ ಎದುರಿಗೆ ನಿಲ್ಲಿಸಿದರು.

ಆಗ ಬೀರಬಲನು- ಯಾಕೆ ಸೆಟ್ಟರೇ ಈ ಎತ್ತು ನಿಮ್ಮದೋ !

ಸೆಟ್ಟಿ-ಅಹುದು ನನ್ನದಾಗಿದೆ.

ಬೀರಬಲ -ಇದು ನಿಮ್ಮದಾಗಿದ್ದರೆ ಇದನ್ನು ಹೀಗೆ ಯಾಕೆ ಬಿಟ್ಟಿರುವಿರಿ.

ಸೆಟ್ಟಿ-ಮಹಾರಾಜ ? ಈಗ ಇದು ಮುಪ್ಪಿನವಾಗಿದ್ದು, ಇದರಿಂದ ಯಾವ ಕೆಲಸವೂ ಆಗುವದಿಲ್ಲ, ಅದರಿಂದ ಇದನ್ನು ಬಿಟ್ಟುಬಿಟ್ಟಿದ್ದೇನೆ.

ಬೀರಬಲ-ನಿಮ್ಮ ಮನೆಯೊಳಗೆ ಯಾವನಾದರೂ ಒಬ್ಬ ಮನುಷ್ಯನು ವೃದ್ಧನಾಗಿ ಅವನ ಕಡೆಯಿಂದ ಏನೂ ಕಾರ್ಯವು ಆಗದಿದ್ದರೆ, ಅವನನ್ನಾದರೂ ಹೀಗೇ ಬಿಟ್ಟು ಬಿಡುತ್ತೀರಲ್ಲವೇ.

ಸೆಟ್ಟಿ- ಮನೆಯೊಳಗಿನ ಮನುಷ್ಯನನ್ನು ಹ್ಯಾಗೆ ಬಿಡುವದಕ್ಕೆ ಬಂದೀತು.

ಬೀರಬಲ- ಅಂದಮೇಲೆ ಈ ಮೂಕಪ್ರಾಣಿಯನ್ನು ಹ್ಯಾಗೆ ಬಿಟ್ಟಿ ನೋಡು. ಇದು ತನ್ನ ಪ್ರಾಯದಕಾಲದಲ್ಲಿ ಎಂಥ ಎಂಥ ಕೆಲಸಗಳನ್ನು ಮಾಡಿತು. ಹಸಿವೆ ನೀರಡಿಕೆಗಳ ಪರಿವೆಯಿಲ್ಲ ನಿನ್ನ ಮನೆಯಲ್ಲಿ ದುಡಿಯಲಿಲ್ಲವೇ ? ನಿನಗೆ ಪರರಸುಖದುಃಖಗಳ ಪರಿವೆ ಇಲ್ಲವೆಂಬಂತೆ ಕಾಣುತ್ತದೆ ನೀನು ಬಹಳೇ ನಿರ್ದಯನಾದ ಮನುಷ್ಯನೆಂಬಂತೆ ಕಂಡುಬರುತ್ತದೆ, ಈಗ ಈ ಎತ್ತು ಸರಕಾರದ ಪಶುರಕ್ಷಣ ಗೃಹಕ್ಕೆ ಕಳಿಸಿಕೊಡುತ್ತೇನೆ ಇದರ ಹೊಟ್ಟೆಯ ಖರ್ಚಿನ ಸಲುವಾಗಿ ವರುಷಕ್ಕೆ ಐದುನೂರು ರೂಪಾಯಿಗಳು ಬೇಕಾಗುತ್ತವೆ ಅದನ್ನು ನೀನೇ ಕೊಡಬೇಕು.

ಸೆಟ್ಟಿ-(ಆಶ್ಚರ್ಯದಿಂದ) ಇನ್ನು ಎಷ್ಟು ವರುಷ ಈ ಎತ್ತು ಒದುಕಬಹುದು ? ಇದರಹೊಟ್ಟೆಯ ಖರ್ಚಿಗೆ ವರುಷಕ್ಕೆ ಐದುನೂರು ರೂಪಾಯಿಗಳೆಂದರೆ ಬಹಳವಾಯಿತು; ನಾನೇ ಇದನ್ನು ಮನೆಗೆ ಒಯ್ದು ಪಾಲಿಸುತ್ತೇನೆ.