ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಕಬರ ಬೀರಬಲ ಚಾತುರ್ಯವಾದ ವಿನೊದ ಕಥೆಗಳು. ೬೫

ತ್ರದಿಂದಲೇ ಪ್ರಸನ್ನನಾಗಿ ಹೋಗುವನು ಈ ಕೆಲಸವು ಸಾಮಾನ್ಯ ವಾದದ್ದಲ್ಲ, ಇದರಿಂದ ತಮ್ಮ ಕೀರ್ತಿಯು ಜಗತ್ತಿನಲ್ಲೆಲ್ಲ ಪ್ರಸಿದ್ಧ ವಾಗುವದು.

ಗಂಗಕವಿ-ಬೇಗಮ್ಮರೆಲ್ಲರೂ ಬಾದಶಹನ ಮನಸ್ಸನ್ನು ಮೃದುವಾಣಿಗಳಿಂ ದ ಪ್ರಸನ್ನೀಕರಿಸಿಕೊಂಡು ಬಿಟ್ಟದ್ದಾರೆ; ವ್ಯರ್ಥವಾಗಿ ನನ್ನ ಸತೀ ಸುತರು ಪ್ರಾಣಕ್ಕೆ ಎರವಾದಾರು ಈಗ ನಾನು ಕೈಕೊಳ್ಳಬೇಕೆಂಬ ಕಾರ್ಯವು ಸಿಂಹನಕೂಡ ಸರಸವಾಡಿದಂತೆ ಇರುವದು. ಬೀರಬಲ_ ಬೇಗಮ್ಮ ಜನರ ಪಾಶದೊಳಗಿಂದ ಬಾದಶಹನು ಒಮ್ಮೆ ಸುರ ಕ್ಷಿತವಾಗಿ ದಾಟಿ ಬಂದಮೇಲೆ ಪುನಃ ಎಂದಿಗೂ ಮೋಸ ಹೋಗಲಾ ರನು, ಹೀಗೆನಾನು ನಿಶ್ಚಯವಾಗಿ ನಂಬಿದ್ದೇನೆ ಈಗಲಾದರೂ ಹ್ಯಾ ಗೆಮೋಸ ಹೋದನೋ ತಿಳಿಯದು. ರಾಜಾ ಮಾನಸಿಂಹ _ ಕವೀಶ್ಯರರೇ ! ನೀವೇ ಇಂಥಕಾರ್ಯ ದಲ್ಲಿ ಹಿಂದೆಮುಂ ದೆ ನೋಡಹತ್ತಿದರೆ ಹ್ಯಾಗಾದೀತು ? ಕವಿಗಳು ತಮ್ಮ ಕವಿತಾಶಕ್ತಿ ಯಿಂದ ಪರರಮನಸ್ಸನ್ನು ಹರಣಮಾಡಿಕೊಳ್ಳುವಷ್ಷು ಸಾಮಥ್ಯವು ಳ್ಳವರೆಂಬ ಕೀರ್ತಿಯು ಜಗತ್ತಿನಲ್ಲಿ ಪಸರಿಸಿರುವದು. ಎಷ್ಷೋ ಯು ದ್ಧಗಳಲ್ಲಿ ಕವಿಗಳ ವೀರರಸ ಪರಿಪ್ಲುತವಾದ ಪದ್ಯಗಳನ್ನು ಶ್ರವಣ ಮಾಡಿವೀರರು ಜಯಾಂಗನೆಯನ್ನು ಒಲಿಸಿಕೊಂಡಿರುವರೆಂಬ ಆಖ್ಯಾ ಯಿಕೆಗಳನ್ನು ಕೇಳಿದ್ದೇನೆ. ನೀವು ಈಗ ಹತಸಾಹಸಿಗಳಾದರೆ ಭಾರ ತವರ್ಷವೆಲ್ಲವೂ ದುಖಃಕ್ಕೆ ಗುರಿಯಾಗುವಪ್ರಸಂಗವು ಸಮೀಪಿಸಿರುವ ದೆಂದು ತಿಳಿಯಬೇಕಾಗುತ್ತದೆ, ಬೀರಬಲ _ ಕವಿರಾಜ ? ನೀವು ಈ ಪ್ರಕಾರ ಧೈರ್ಯ ಹೀನರಾದದ್ದನ್ನು ಕಂಡು ನನಗೂ ಪರಮಾಶ್ಚರ್ಯವಾಗುವದು ; ರಾಜ್ಯದ ದೈವತಿಯೇ ವಿಪರೀ ತವಾಗಿರುವದೋ ಏನೋ ಪರಮೇಶ್ವರನಿಗೇ ಗೊತ್ತು. ಗಂಗಕವಿ_ಬೀರಬಲ ? ನೀವು ಇನ್ನು ಮೇಲೆ ಮಾತಾಡಬೇಡಿರಿ; ಯಾಕಂ ದರೆ ನಿಮ್ಮ ವಾಕ್ಯಗಳು ಶ್ರವಣಪಥದಲ್ಲಿ ಪ್ರವೇಶಿಸಿದಕೂಡಲೆ ಮನಸ್ಸು ತಾತ್ಕಾಲಕ್ಕೇ ಉಲ್ಹಾಸಿತವಾಗುತ್ತದೆ ನಿಮ್ಮ ವಾಕ್ ಸಾಮಥ್ಯದಲ್ಲಿ ಏನು ಮೋಹಿನಿಯು ತುಂಬಿರುವದೋ ಜಗನ್ನಿಯಂತನೇ ಬಲ್ಲನು. ತೋಡರಮಲ್ಲ_ ಮೋಹಿನಿ ? ಮೋಹಿನಿ ? ಎಂದು ಅನ್ನುತ್ತ ಯಾಕೆಸುಮ್ಮ ನೇ ಕಾಲಹರಣ ಮಾಡುವಿರಿ ? ನಿಮ್ಮಲ್ಲಿ ಸಾಹಸವಿದ್ದರೇ ಈ ಕಾರ್ಯ ಕ್ಕೆ ಉದ್ಯುಕ್ತರಾಗಿರಿ, ಇಲ್ಲದಿದ್ದರೆ ಆಗುವದಿಲ್ಲವೆಂದು ಸ್ಪಷ್ಷವಾಗಿ