ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೬೪



ಅನ್ವೇಷಣ ಮಾಡಲಿಕ್ಕೇ ಬೇಕು ” ಎಂದನು.

ಆಗ ತೋಡರ ಮಲ್ಲನು ಅನ್ನುತ್ತಾನೆ, ಮಂತ್ರಿವರ್ಯನೇ ! ತಮಗೆ ಅಂತಃಪುರದಲ್ಲಿ ಪ್ರವೇಶಮಾಡಲಿಕ್ಕೆ ಆತಂಕವಿಲ್ಲವಷ್ಟೇ ! ಅಂದಮೇಲೆ ನಿಮಗೆ ಸಾಧ್ಯವಾದಷ್ಟು ಅನ್ಯರಿಂದ ಸಾಧಿಸಲಾಗುವದಿಲ್ಲ,, ಅದಕ್ಕೆ ಬೀರ ಬಲನು. “ ನೀವು ಹೇಳುವದಕ್ಕಿಂತ ಪೂರ್ವದಲ್ಲಿಯೇ ನಾನು ಶೋಧಮಾಡಿ ನೋಡಿದ್ದೇನೆ, ನನಗೆ ಬಾದಶಹನ ಇರುವಿಕೆಯು ಅವಗತವಾಗದೆ ಹೋದ್ರ ರಿಂದ, ನಾನು ನಿಮ್ಮೆಲ್ಲರ ಮುಂದೆ ಈ ಮಾತನ್ನು ತೆಗೆದೆನು,, ಎಂದುತ್ತರ ಕೊಟ್ಟನು. ಆಗ ಗಂಗಕವಿಯು ಅನ್ನುತ್ತಾನೆ, ಅಮಾತ್ಯವರ್ಯರೇ ನನಗೆ ಬಾದಶಹನ ದರ್ಶನವು ಇಷ್ಟರಮಟ್ಟಿಗೆ ಅತ್ಯವಶ್ಯಕ ವಿರುವದೆಂಬ ಸಂಗತಿಯನ್ನು ನೀವು ಅರಿತಿರುವಿರಷ್ಟೇ ? ನಾನು ಪ್ರಯಾಸವಟ್ಟು ನಿನ್ನೆ ಬಾದ ಶಹನನ್ನು ದೂರಿಂದಲೇ ನೋಡಿದೆನು, ಎಂದನು ಆಗ ಸಭಾಸದರೆಲ್ಲರೂ ಒಂದೇಧ್ವನಿಯಿಂದ ಕವಿರಾಜ ! ತಾವು ಬಾದಶಹರವರನ್ನು ಎಲ್ಲಿನೋಡಿದರಿ ? ” ಎಂದು ಪ್ರಶ್ನೆ ಮಾಡಿದರು ಆಗ ಗಂಗಕವಿಯು, ದಿಲರಾಮ ಬೇಗಮ್ಮಳ ಅಂತಃಪುರದಲ್ಲಿ,, ಎಂದುತ್ತರಕೊಟ್ಟೆನು. ಆಗ ಬೀರಬಲನು ಅನ್ನು ತ್ತಾನೆ, “ ಬೇಗಮ್ಮ ಜನರ ಮೋಹ ಪಾಠದಿಂದ ಬಂಧಿಸಲ್ಪಟ್ಟ ಬಾದಶಹ ನನ್ನು ಹೊರಗೆ ಕರೆತರುವದಕ್ಕೆ ಏನು ಹಂಚಿಕೆಯನ್ನು ಮಾಡಬೇಕು ?, ಎಂದನು ಆಗ ಪುನಃ ಗಂಗಕವಿಯು ಅನ್ನುತ್ತಾನೆ ! " ನಾನಂತೂ ನನ್ನ ಪ್ರಾಣವನ್ನು ಸಂಕಟಕ್ಕೆ ಗುರಿಮಾಡಿ ಬಾದಾಶಹನನ್ನಂತೂ ಗೊತ್ತು ಹಚ್ಚಿ ಕೊಟ್ಟಿದ್ದೇನೆ ಆದರೆ ಅವನನ್ನು ಹೊರಗೆ ತೆಗೆಯುವದು ಮಾತ್ರ ಕಠಿಣವು, ಎಂದನು.
ಬೀರಬಲ ಕವಿರಾಜ ! ಬಾದಶಹನನ್ನು ಓಲಗಕ್ಕೆ ಕರೆತರುವ ಕೆಲಸವು ನಿಮ್ಮಿಂದಲೇ ಸಾಧ್ಯವಾಗುವದಲ್ಲದೆ ಅನ್ಯರಿಂದಾಗಲಾರದು.

ತೋಡರಮಲ್ಲ-ತಾವು ಈ ಅಮರಕೀರ್ತಿಯನ್ನು ತಮ್ಮ ಪಾಲಿಗೆ ತೆಗೆದು ಕೊಳ್ಳಬೇಕು, ಸಾವಿರಾರು ಜನರ ಮೇಲೆ ಉಪಕಾರಮಾಡಿದಂತಾ ಗುತ್ತದೆ. ಆದ್ದರಿಂದ ತಾವೇ ಈ ಕಾರ್ಯವನ್ನು ಕೈಗೊಳ್ಳಬೇಕು. ವಿಲಂಬವು ಹಿತಕರವಲ್ಲ.

ಗಂಗಕವಿ- ನೀವೆಲ್ಲರೂ ನನ್ನ ಪ್ರಾಣವನ್ನು ತೆಗೆದುಕೊಳ್ಳಬೇಕೆನ್ನು ವಿರೋ ?

ಖಾನಖಾನ-ಕವಿರಾಜ ! ಇದರಲ್ಲಿ ಜೀವದಮೇಲಿನ ಪ್ರಸಂಗವೇನಿರುವದು ಬಂದವೇಳೆ ಬಾದಶಹನಿಗೆ ಕೋಪವು ಬಂದರೆ ನಿಮ್ಮನ್ನು ಕಂಡಮಾ