ಅನ್ವೇಷಣ ಮಾಡಲಿಕ್ಕೇ ಬೇಕು ” ಎಂದನು.
ಆಗ ತೋಡರ ಮಲ್ಲನು ಅನ್ನುತ್ತಾನೆ, ಮಂತ್ರಿವರ್ಯನೇ ! ತಮಗೆ
ಅಂತಃಪುರದಲ್ಲಿ ಪ್ರವೇಶಮಾಡಲಿಕ್ಕೆ ಆತಂಕವಿಲ್ಲವಷ್ಟೇ ! ಅಂದಮೇಲೆ
ನಿಮಗೆ ಸಾಧ್ಯವಾದಷ್ಟು ಅನ್ಯರಿಂದ ಸಾಧಿಸಲಾಗುವದಿಲ್ಲ,, ಅದಕ್ಕೆ ಬೀರ
ಬಲನು. “ ನೀವು ಹೇಳುವದಕ್ಕಿಂತ ಪೂರ್ವದಲ್ಲಿಯೇ ನಾನು ಶೋಧಮಾಡಿ
ನೋಡಿದ್ದೇನೆ, ನನಗೆ ಬಾದಶಹನ ಇರುವಿಕೆಯು ಅವಗತವಾಗದೆ ಹೋದ್ರ
ರಿಂದ, ನಾನು ನಿಮ್ಮೆಲ್ಲರ ಮುಂದೆ ಈ ಮಾತನ್ನು ತೆಗೆದೆನು,, ಎಂದುತ್ತರ
ಕೊಟ್ಟನು. ಆಗ ಗಂಗಕವಿಯು ಅನ್ನುತ್ತಾನೆ, ಅಮಾತ್ಯವರ್ಯರೇ ನನಗೆ
ಬಾದಶಹನ ದರ್ಶನವು ಇಷ್ಟರಮಟ್ಟಿಗೆ ಅತ್ಯವಶ್ಯಕ ವಿರುವದೆಂಬ ಸಂಗತಿಯನ್ನು ನೀವು ಅರಿತಿರುವಿರಷ್ಟೇ ? ನಾನು ಪ್ರಯಾಸವಟ್ಟು ನಿನ್ನೆ ಬಾದ
ಶಹನನ್ನು ದೂರಿಂದಲೇ ನೋಡಿದೆನು, ಎಂದನು ಆಗ ಸಭಾಸದರೆಲ್ಲರೂ
ಒಂದೇಧ್ವನಿಯಿಂದ ಕವಿರಾಜ ! ತಾವು ಬಾದಶಹರವರನ್ನು ಎಲ್ಲಿನೋಡಿದರಿ ? ” ಎಂದು ಪ್ರಶ್ನೆ ಮಾಡಿದರು ಆಗ ಗಂಗಕವಿಯು, ದಿಲರಾಮ ಬೇಗಮ್ಮಳ ಅಂತಃಪುರದಲ್ಲಿ,, ಎಂದುತ್ತರಕೊಟ್ಟೆನು. ಆಗ ಬೀರಬಲನು ಅನ್ನು
ತ್ತಾನೆ, “ ಬೇಗಮ್ಮ ಜನರ ಮೋಹ ಪಾಠದಿಂದ ಬಂಧಿಸಲ್ಪಟ್ಟ ಬಾದಶಹ
ನನ್ನು ಹೊರಗೆ ಕರೆತರುವದಕ್ಕೆ ಏನು ಹಂಚಿಕೆಯನ್ನು ಮಾಡಬೇಕು ?,
ಎಂದನು ಆಗ ಪುನಃ ಗಂಗಕವಿಯು ಅನ್ನುತ್ತಾನೆ ! " ನಾನಂತೂ ನನ್ನ
ಪ್ರಾಣವನ್ನು ಸಂಕಟಕ್ಕೆ ಗುರಿಮಾಡಿ ಬಾದಾಶಹನನ್ನಂತೂ ಗೊತ್ತು ಹಚ್ಚಿ
ಕೊಟ್ಟಿದ್ದೇನೆ ಆದರೆ ಅವನನ್ನು ಹೊರಗೆ ತೆಗೆಯುವದು ಮಾತ್ರ ಕಠಿಣವು,
ಎಂದನು.
ಬೀರಬಲ ಕವಿರಾಜ ! ಬಾದಶಹನನ್ನು ಓಲಗಕ್ಕೆ ಕರೆತರುವ ಕೆಲಸವು
ನಿಮ್ಮಿಂದಲೇ ಸಾಧ್ಯವಾಗುವದಲ್ಲದೆ ಅನ್ಯರಿಂದಾಗಲಾರದು.
ತೋಡರಮಲ್ಲ-ತಾವು ಈ ಅಮರಕೀರ್ತಿಯನ್ನು ತಮ್ಮ ಪಾಲಿಗೆ ತೆಗೆದು ಕೊಳ್ಳಬೇಕು, ಸಾವಿರಾರು ಜನರ ಮೇಲೆ ಉಪಕಾರಮಾಡಿದಂತಾ ಗುತ್ತದೆ. ಆದ್ದರಿಂದ ತಾವೇ ಈ ಕಾರ್ಯವನ್ನು ಕೈಗೊಳ್ಳಬೇಕು. ವಿಲಂಬವು ಹಿತಕರವಲ್ಲ.
ಗಂಗಕವಿ- ನೀವೆಲ್ಲರೂ ನನ್ನ ಪ್ರಾಣವನ್ನು ತೆಗೆದುಕೊಳ್ಳಬೇಕೆನ್ನು ವಿರೋ ?
ಖಾನಖಾನ-ಕವಿರಾಜ ! ಇದರಲ್ಲಿ ಜೀವದಮೇಲಿನ ಪ್ರಸಂಗವೇನಿರುವದು ಬಂದವೇಳೆ ಬಾದಶಹನಿಗೆ ಕೋಪವು ಬಂದರೆ ನಿಮ್ಮನ್ನು ಕಂಡಮಾ