ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೧೦)
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೭೩



“ ನೀನು ನಿನ್ನೆ ಹೇಳಿದ ಸಂಗತಿಗೂ, ಈದಿವಸ ಹೇಳುತ್ತಿರುವ ಸಂಗತಿಗೂ ಬಹಳೇ ಅಂತರವದೆ; ನೀನು ಬಹಳೇ ಮೋಸಗಾರಳಿದ್ದಂತೆ ಕಂಡುಬರುತ್ತದೆ, ಆದ್ದರಿಂದ ನಿನಗೆ ಯೋಗ್ಯ ಶಿಕ್ಷೆಯನ್ನು ಮಾಡುತ್ತೇನೆ” ಎಂದು ಹೇಳಿ ಒಬ್ಬ ಕರ್ಮಚಾರಿಗೆ ನೇತ್ರ ಸಂಕೇತ ಮಾಡಿದನು. ಕೂಡಲೆ ಅವನು ಆಯುಧ ಪಾಣಿಯಾಗಿ ಮುಂದೆ ಬಂದು ನಿಲ್ಲಲು, ವೇಶ್ಯೆಯು ಗಾಬರಿಯಾಗಿ ಅನ್ನುತ್ತಾಳೆ “ ನಾನು ಸತ್ಯವನ್ನೇ ಹೇಳುತ್ತೇನೆ, ನಾನು ಈ ಬಾಲಿಕೆಯನ್ನು ಮೂರು ವರುಷದ ಹಿಂದೆ ಕ್ರಯಕ್ಕೆ ತೆಗೆದುಕೊಂಡದ್ದು ನಿಜವು ಯಾವನೋ ಒಬ್ಬನು ಇವಳನ್ನು ನನಗೆ ಕೊಟ್ಟು ಹೊರಟು ಹೋಗಿರುವದು ಸತ್ಯವು ನನ್ನ ಅಪರಾಧವನ್ನು ಕ್ಷಮಿಸಬೇಕು ” ಎಂದು ಪ್ರಾರ್ಥನೆಮಾಡಿಕೊಂಡಳು. ವೇಶ್ಯೆಯು ಹೇಳಿದ ಸಂಗತಿಯನ್ನು ಕೇಳಿದಕೂಡಲೆ ಆ ಬಾಲಿಕೆಯ ಪಿತನು ಮುಂದೆ ಬಂದನು, ಬೀರಬಲನು ಆ ಬಾಲಿಕೆಯನ್ನು ಕುರಿತು ಇವನು ನಿನ್ನ ಪಿತನಲ್ಲವೇ ! ಎಂದು ಪ್ರಶ್ನೆ ಮಾಡಿದಳು, ಮೊದಲೇ ಆ ಬಾಲಿಕೆಯು ಗಾಬರಿಯಾಗಿದ್ದಳು ಸುಳ್ಳು ಹೇಳಿದರೆ ಶಿಕ್ಷೆಯಾಗುವದೆಂಬ ಅಂಜಿಕೆಯೂ ಹುಟ್ಟಿತು, ಅದರಿಂದ ಅವಳು ಅಹುದು, ಇವನೇ ನನ್ನ ಪಿತನು ? ಎಂದು ಸತ್ಯವನ್ನೇ ಹೇಳಿ ಬಿಟ್ಟಳು. ಆಮೇಲೆ ಎದುರಿಗೆ ನಿಂತುಕೊಂಡಿದ್ದ ತಂದೆಯನ್ನು ಆಲಿಂಗನೆ ಮಾಡಿಕೊಂಡಳು, ಬೀರಬಲನು ಆ ವಣ್ಯಾoಗನೆಯನ್ನು ಕುರಿತು ಅನ್ನುತ್ತಾನೆ “ನಿನ್ನ ಮೇಲೆ ಮೂರು ಅಪರಾಧಗಳುಂಟು; ಮೊದಲನೆದು ಅಜ್ಞಾನಿಯಾದ ಬಾಲಿಕೆಯನ್ನು ಮೋಸಗೊಳಿಸಿದ್ದು, ಎರಡನೇದು ದಾಸಿಯಂತೆ ಇವಳನ್ನು ಕ್ರಯಕ್ಕೆ ತೆಗೆದುಕೊ೦ಡದ್ದು, ಮೂರನೇದು ಸತ್ಯವನ್ನು ಮರೆಮಾಚಿ ಶಿಕ್ಷೆ ಯಾಗುವದೆಂಬ ನಂಬಿಕೆಯು ಹುಟ್ಟಿದಮೇಲೆ ಅಪರಾಧವನ್ನು ಸ್ವೀಕರಿಸಿದ್ದು ಹೀಗೆ ಮೂರು ಅಪರಾಧಗಳನ್ನು ಮಾಡಿದ್ದರಿಂದ ನಿನಗೆ ಕಠಿಣವಾದ ಕಾರಾ ಗೃಹವಾಸವು ತಪ್ಪದು ” ಎಂದು ಹೇಳಿದಕೂಡಲೆ ಸಿಪಾಯಿಗಳು ಒಂದು ಅವಳನ್ನು ಬಂಧನಮಾಡಿ ಕಾರಾಗೃಹಕ್ಕೆ ಎಳೆದೊಯ್ದರು. ಬೀರಬಲನು ಆ ವೃದ್ದ ಮನುಷ್ಯನಿಗೆ ಅನ್ನುತ್ತಾನೆ- ಈ ನಿನ್ನ ಪುತ್ರಿಯು ನಿನಗೆ ಸಿಕ್ಕಳು ಆದರೆ ಇವಳು ಇನ್ನು ಮುಂದೆ ನಿನ್ನ ಬಳಿಯಲ್ಲಿ ಸುಖಸಮಾಧಾನದಿಂದ ಇರಲಾರಳು, ಆದ್ದರಿಂದ ಇವಳನ್ನು ಯೋಗ್ಯನಾದ ಒಬ್ಬ ವರನಿಗೆಕೊಟ್ಟು ವಿವಾಹ ಮಾಡಿಕೊಡು ! ” ಎಂದು ಬುದ್ಧಿವಾದವನ್ನು ಹೇಳಿ ಮನೆಗೆ ಕಳುಹಿಸಿಕೊಟ್ಟನು.

-(೨೩. ಸಂತೋಷದಿಂದಲೋ ಅಥವಾ ಅಸಂತೋಷದಿಂದಲೋ.. ಒಂದುದಿನ ಅಕಬರ ಬಾದಶಹನು ಬೀರಬಲನಿಗೆ ಪ್ರಶ್ನೆ ಮಾಡಿದನು,