ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೪
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.

ಏನಂದರೆ;- "ಬೀರಬಲ ! ರಮಜಾನ ತಿಂಗಳು ಸಂತೋಷದಿಂದ ಹೋಗುವದೋ, ಅಥವಾ ಅಸಂತೋಷದಿಂದ ಹೋಗುವದೋ ” ಎಂದು ಕೇಳಿದಕ್ಕೆ ಬೀರಬಲನು " ಸಂತೋಷದಿಂದ ” ಎಂದುತ್ತರವಿತ್ತನು. ಅದಕ್ಕೆ ಬಾದಶಹನು ಪುನಃ ಅದು ಹ್ಯಾಗೆ ! ಎಂದು ಕೇಳಿದನು. ಆಗ ಬೀರಬಲನು; “ ಅದು ಸಂತೋಷದಿಂದ ಹೋಗದಿದ್ದರೆ ಪ್ರತಿವರುಷ ಅದು ಕರೆಯಿಸಿಕೊಳ್ಳದೆ ಯಾಕೆಬರುತ್ತಿತ್ತು” ಎಂದು ಉತ್ತರಕೊಟ್ಟನು ಬಾದಶಹನು ಪ್ರಸನ್ನನಾದನು.

-(೨೪. ಹನ್ನೆರಡರಲ್ಲಿ ನಾಲ್ಕು ಹೋದರೆ ಎಷ್ಟು ? -

ಒಂದು ದಿವಸ ಬಾದಶಹನು ಬೀರಬಲನಿಗೆ;- " ಹನ್ನೆರಡರಲ್ಲಿ ನಾಲ್ಕು ಹೋದರೆ ಎಷ್ಟು ಉಳಿಯಿತು ” ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಬೀರಬಲನು- “ ಏನೂ ಉಳಿಯಲಿಲ್ಲ ” ಎಂದು ಉತ್ತರಕೊಟ್ಟನು. ಅದುಹ್ಯಾಗೆ ? ಎಂದು ಬಾದಶಹನು ಪುನಃ ಪ್ರಶ್ನೆ ಮಾಡಿದನು ಆಗ ಬೀರಬಲನು ಸರಕಾರ ಹನ್ನೆರಡು ತಿಂಗಳುಗಳಲ್ಲಿ ವರ್ಷಾಕಾಡದ ನಾಲ್ಕು ತಿಂಗಳು ಹೋದರೆ ಉಳಿದತಿಂಗಳುಗಳಲ್ಲಿ ಏನು ಅರ್ಥವಿರುವರು ಎಂದು ಉತ್ತರ ಕೊಡಲು, ಬಾದಶಹನು ಪರಮ ಸಂತೋಷಪಟ್ಟನು.

-೨೫- ಕಾಳಿಕಾದೇವತೆಗೆ ಮಾಡಿದಚೇಷ್ಟೇ.

ಒಂದುದಿವಸ ಕಾಳಿಕಾದೇವತೆಯು ಬೀರಬಲನನ್ನು ಹೆದರಿಸಬೇಕೆಂದು ಸಹಸ್ರ ಶಿರಗಳನ್ನು ಧಾರಣಮಾಡಿಕೊಂಡು ದರ್ಶನಕೊಟ್ಟಳು, ದೇವಿಯ ಈಪ್ರಕಾರದ ರೂಪವನ್ನು ನೋಡಿ ಬೀರಬಲನು ನಗುತ್ತ ನಮಸ್ಕಾರ ಮಾಡಿ ಖಿನ್ನನಾಗಿ ಕುಳಿತುಕೊಂಡನು. ದೇವಿಯು, ಬೀರಬಲನು ಹೆದರದೇ ಇದ್ದದ್ದನ್ನೂ ನಗುತ್ತ ನಮಸ್ಕಾರಮಾಡಿದ್ದನ್ನೂ ಆಮೇಲೆ ಖಿನ್ನನಾಗಿ ಕುಳಿತುಕೊಂಡದ್ದನ್ನೂ ನೋಡಿ ವಿಚಾರಗ್ರಸ್ತಳಾಗಿ ಸ್ವಲ್ಪ ಹೊತ್ತಿನಮೇಲೆ ಬೀರಬಲನಿಗೆ “ ಭಕ್ತಾಗ್ರಣಿಯೇ ! ನೀನು ಮೊದಲು ನಕ್ಕದ್ದುಯಾಕೆ, ಆ ಮೇಲೆ ಉದಾಸೀನನಾದದ್ದು ಯಾಕೆ ?” ಎಂದು ಪ್ರಶ್ನೆ ಮಾಡಿದಳು, ಬೀರಬಲನು ಬದ್ಧಾಂಜಲಿಯಾಗಿ ವಿಜ್ಞಾಪನೆಮಾಡಿಕೊಂಡನು. ಏನಂದರೆ- " ಜಗಜ್ಜನನೀ ! ನಿನ್ನ ದರುಶನವು ಲಭಿಸಿದ್ದರಿಂದ ಹರುಷಿತನಾಗಿ ಮೊದಲು ನಕ್ಕೆನು, ಆಮೇಲೆ ಖಿನ್ನತೆಯುಂಟಾದ ಕಾರಣವನ್ನು ಮಾತ್ರ ನಾನು ಹೇಳಲಾರೆನು ನನ್ನ ಅಪರಾಧವನ್ನು ಕ್ಷಮಿಸಬೇಕು” ಎಂದನು. ಅದರ ಕಾರಣವನ್ನು ಹೇಳಲಿಕ್ಕೇಬೇಕೆಂದು ದೇವಿಯು ಅತಿ ಆಗ್ರಹಮಾಡಿದ್ದರಿಂದ ಬೀರುಲನು- “ ಎಲೈ ಜಗನ್ಮಾತೆಯೇ ! ನೀನು ಎಲ್ಲರ ಮನಸ್ಸಿನಲ್ಲಿದ್ದದ್ದನ್ನು ತಿಳಿ