ಪುಟ:ಅಜಿತ ಕುಮಾರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ನಾಗಕನ್ನೆಯರ ದರ್ಶನ.

ಆಚೆಗಡೆ, ಒಂದು ಗುಹೆಯೊಳಗೆ ಹಸುರಾದ ಪಾಚಿಯ ಮೇಲೆ ಕುಳಿತುಕೊಂಡು, ಆ ನಾಗಕನ್ಯಯರು ತಮ್ಮೊಳಗೆನೇ ಪಿಸುಗುಟ್ಟುತಿದ್ದರು. ಒಬ್ಬಳು ಈತನು ಗದಾಧರನಲ್ಲವೆಂದೂ, ಇನ್ನೊಬ್ಬಳು ಈತನು ಕಳ್ಳನಂತೆ ತೋರದೆ ಸಾಧುವಾದ ಯುವಕನಂತೆ ಕಾಣುವನೆಂದೂ ತಂತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತಿದ್ದರು.

ಆಗ ಅಜಿತನು ನಗುವಿನಿಂದ, “ಎಲೌ, ನಾಗಕನ್ಯೆಯರೇ, ನಾನು ಗದಾಧರನಲ್ಲ. ಆತನು ನರಿನಾಯಿಗಳ ಹೊಟ್ಟೆಯಲ್ಲಿ ಸುಖವಾಗಿ ನಿದ್ರೆ ಮಾಡುತಿದ್ದಾನೆ, ಆತನ ಕೈಯ ಗದೆಯ ಕರಡಿಯ ಚರ್ಮವೂ ಮಾತ್ರವೇ ನನ್ನ ಹತ್ತಿರ ಇವೆ,” ಎಂದು ಹೇಳಿದನು.

ಕೂಡಲೆ ಅವರು ಧೈರ್ಯದಿಂದ, ಆ ಕೊಳದಿಂದೀಚೆಗೆ ಬಂದು, ಕುರುಬರನ್ನು ಹಿಂದಕ್ಕೆ ಕರೆದರು, ಅಜಿತನು ತಾನು ಗದಾಧರನನ್ನು ಕೊಂದ ಸಂಗತಿಯನ್ನು ಬಿಚ್ಚಿ ಹೇಳಲು, ಅವರೆಲ್ಲರೂ ಸಂತೋಷದಿಂದ ಆತನ ಪಾದಗಳ ಮೇಲೆ ಬಿದ್ದು –––

ಚಿಂತಯೇಂ? ಕುರಿಮಂದ ಹುಲ್ಲನು ಸಂತತಂ ಸುಖವಾಗಿ ಮೇ |
ವಂತೆಯಾದುದು, ನಮ್ಮ ಗಾನವನಂತೂ ಮಾಡಲು ಕೇಳೋರಾರ್, ||
ಅಂತಕಾಂತಕ ಘೋರಪಾತಕಿಯಂತಕಾಲಯಕ್ಕೆದಿದಂ, |
ಅಂತು ಕಾಡುವ ಕೂಂಬಿನಾ ದನಿ ಮುಂತ ಕೇಳದು ಜೇಡನಾ ||

ಎಂದು ಹಾಡುವುದಕ್ಕೆ ತೊಡಗಿದರು.

ತರುವಾಯ ಕುರುಬರು ಹಣ್ಣುಹಂಪಲುಗಳನ್ನೂ ಕನ್ಯೆಯರು ಸವಿಜೇನನ್ನೂ ಅಜಿತನಿಗೆ ತಂದು ಕೊಟ್ಟರು. ಅಜಿತನು ಹಣ್ಣು ತಿಂದು, ಜೇನು ಕುಡಿದು, ತುಸ ಒರಗಿದನು, ನಾಗಕನ್ನಿಕೆಯರು ಅವನ ಸುತ್ತಲೂ ಕುಣಿದಾಡಿದರು. ಸ್ವಲ್ಪ ಹೊತ್ತಿನ ತರುವಾಯ ಅಜಿತನಿಗೆ ಎಚ್ಚರವಾಗಿ, ಅವನು ಹೊರಟನು. ಆಗ ಆತನು ಎಲ್ಲಿಗೂ ಹೋಗಕೂಡದೆಂದು ಆ ಸ್ತ್ರೀಯರು ಬಗೆಬಗೆಯಾಗಿ ಹಲುಬಿದರೂ ಅವನು ಯಾವು