ಪುಟ:ಅಜಿತ ಕುಮಾರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಲ್ಲಯುದ್ಧ,

ಕಳದಲ್ಲಿದ್ದ ಮಳಲು ಇವರ ತುಳಿತದಿಂದ ಹೆಂಟೆಕಟ್ಟಿತು. ಆದರೂ ಕಾದಾ
ಟವು ಮುಗಿಯಲಿಲ್ಲ. ಕತ್ತಲೆಯಲ್ಲಿ ಅವರ ಕಣ್ಣುಗಳು ಚುಕ್ಕೆಗಳಂತ
ಮಿಣುಕುತಿದ್ದುವು ; ಎದೆಗಳು ತಿದಿಯಂತೆ ಬುಸುಗುಟ್ಟುತ್ತಿದ್ದುವು; ಉಸಿರು
ಮುಗಿಲುಗಳಂತೆ ಮೇಲಕ್ಕೆ ಹೋಗುತಿತ್ತು. ಒಬ್ಬನಾದರೂ ಒಂದು ಹೆಜ್ಜೆ
ಕೂಡ ಬಿಟ್ಟು ಕೊಡಲಿಲ್ಲ ! ನೋಡುತಿದ್ದ ಜನರು ಉಣ್ಣುವುದನ್ನೂ ಕುಡಿ
ಯುವುದನ್ನೂ ಮರೆತು, ನಿಂತಲ್ಲಿಯೇ ನಿಂತಿದ್ದರು !

ಕೊನೆಗೆ ಕ್ರೂರಾಕ್ಷನಿಗೆ ಸಿಟ್ಟು ಬಂದು, ಅಜಿತನ ಕೊರಳನ್ನು ಅವುಕಿ
ಹಿಡಿದು, ನಾಯಿಯು ಇಲಿಯನ್ನು ಕೊಡಹುವಂತೆ ಕೊಡಹಿದನು. ಆದರೆ
ಅಜಿತನ ನೆಲದಿಂದ ಅಡಿ ತಪ್ಪಲಿಲ್ಲ.

ಈ ಸಂದರ್ಭದಲ್ಲಿ ಅಜಿತನು ಅವನ ನಡುವನ್ನು ಬಿಗಿಯಾಗಿ
ಹಿಡಿದುಕೊಂಡು, ತನ್ನ ಸೊಂಟವನ್ನು ಅವನ ತೊಡೆಗಳ ನಡುವೆ ತುರುಕಿ
ಒಂದು ಸಾರಿ ಹಿಗ್ಗಿ ಬಿಟ್ಟನು. ಆಗ ಅಜಿತನ ಕೈಯನ್ನು ಹಿಡಿದು
ಕೊಂಡಿದ್ದ ಕ್ರೂರಾಕ್ಷನು ದೊಪ್ಪನೆ ನೆಲದ ಮೇಲೆ ಅಂಗಾತ ಬಿದ್ದು
ಹೋದನು. ತತ್‌ಕ್ಷಣವೇ ಅಜಿತನು ಅವನ ಮೇಲೆ ಸಿಡಿದು, “ಶರಣಾ
ಗತನಾಗು, ಇಲ್ಲವಾದರೆ ಕೊಂದುಬಿಡುತ್ತೇನೆ” ಎಂದು ಆರ್ಭಟಿಸಿದನು
ಆದರೆ ಕ್ರೂರಾಕ್ಷನ ಬಾಯಿಂದ ಹೇಗೆ ತಾನೆ ಮಾತು ಹೊರಡುವುದು
ಬಿದ್ದ ಪೆಟ್ಟಿನಿಂದಲೂ, ತಿಂದ ಅನ್ನದಿಂದಲೂ, ಕುಡಿದ ಸೋಮರಸ
ದಿಂದಲೂ ಅವನ ಹೊಟ್ಟೆಯು ಬಿರಿದುಹೋಗಿ, ಅವನ ಹೃದಯದಿಂದ ಪ್ರಾಣ
ವಾಯುವು ಹಾರಿಹೋಗಿತ್ತು.

ಆ ಮೇಲೆ ಅಜಿತನು ಮನೆಯ ಹೆಬ್ಬಾಗಿಲನ್ನು ತೆರೆದು, ಹೊರಗಿದ್ದ
ಜನಗಳನ್ನು ಒಳಕ್ಕೆ ಬಿಟ್ಟನು. ಅವರೆಲ್ಲರೂ ಏಕಕಂಠದಿಂದ “ನೀನು
ಕ್ರೂರಾಕ್ಷನನ್ನು ಧ್ವಂಸಮಾಡಿದೆ, ಆದ್ದರಿಂದ ಇನ್ನು ನಮ್ಮ ರಾಜನಾ
ಗಿ ಸುಖವಾಗಿ ಆಳಿಕೊಂಡಿರು” ಎಂದು ಪ್ರಾರ್ಥಿಸಿದರು.

ಅದಕ್ಕೆ ಅಜಿತನು ಆಗಲಿ! ನಾನೇ ನಿಮ್ಮ ರಾಜನಾಗುವೆನಂತೆ