ಅಜಿತ ಕುಮಾರ.
ಇಲ್ಲಿ ನೀತಿತಪ್ಪದೆ ಚೆನ್ನಾಗಿ ರಾಜ್ಯಭಾರ ಮಾಡುವೆನು. ಅದಕ್ಕೋಸ್ಕರ
ವಲ್ಲವೆ ಕಂಟಕಗಳನ್ನೆಲ್ಲಾ ನಿವಾರಿಸುತ್ತ ಬಂದೆನು ? ದಾರಕನೂ ಹೋ
ದನು ! ಕ್ವಾಲಕನೂ ಹೋದನು ! ಈತನೇ ಕೊನೆಯವನು !” ಎಂದು
ಹೇಳಿದನು.
ಆಗ ಒಬ್ಬ ವೃದ್ಧನು “ಅಯ್ಯಾ, ಶೂರನೆ ! ದಾರಕನನ್ನು ಕೊಂದು
ಹಾಕಿದೆಯಾ ? ಹಾಗಾದರೆ ನೀನೆಲ್ಲಿಗೆ ಹೋಗಬೇಕೆಂದಿರುವೆಯೊ ಆ
ಯವನದೇಶಕ್ಕೆ ಒಡೆಯನಾದ ತಾರಾಪತಿಯನ್ನು ನೋಡಿಕೊ ! ಆತನಿಗೂ
ದಾರಕನಿಗೂ ಏನೂ ಹತ್ತಿರದ ಸಂಬಂಧವಿರಬೇಕು ! ” ಎಂದು ಎಚ್ಚ
ರಿಸಿದನು.
ಇದನ್ನು ಕೇಳಿ ಅಜಿತನು, “ಹಾಹಾ ! ಸ್ವಂತ ಬಂಧುವನ್ನೇ
ಕೊಂದಂತಾಯಿತು ! ಆದರೆ ಅವನಿಗದು ತಕ್ಕದಾದ ದಂಡನೆಯೇ ಸರಿ !
ಅವನು ಮಹಾ ಪಾತಕಿ, ಲೋಕೋಪಕಾರಕ್ಕಾಗಿ ಕೊಂದೆನು. ಈಗ
ನನ್ನ ಗೋತ್ರಹತ್ಯದ ದೋಷವು ಹೇಗೆ ತಾನೆ ಪರಿಹಾರವಾದೀತು ?"
ಎಂದು ಕೇಳಿದನು.
ಆಗ ಆ ಮುದುಕನು ಇದಕ್ಕೆ ಪ್ರಾಯಶ್ಚಿತ್ತವನ್ನು ಮಾಡತಕ್ಕ
ವರು ಅಶ್ವಿನೀ ಕುಮಾರರೇ ಸರಿ.
ಅವರಿಗೆ ದೇವತೆಗಳ ರಹಸ್ಯಗಳೆಲ್ಲವೂ
ಗೊತ್ತು, ಧವಳಗಿರಿಯಲ್ಲಿಯ ಗಂಗಾತೀರವು ಅವರ ವಾಸಸ್ಥಾನ. ನೀನು
ಮೊದಲು ಅವರ ಬಳಿಗೆ ಹೋಗಿ ಪವಿತ್ರನಾಗಿ ಬಾ ; ಆಮೇಲೆ ನಮ್ಮನ್ನಾ
ಳುವೆಯಂತೆ" ಎಂದು ಹೇಳಿದನು.
ಅಜಿತನು ಅದಕ್ಕೊಪ್ಪಿಕೊಂಡು ಜನಗಳು ತನ್ನನ್ನು ರಾಜನಾಗಿ
ಸ್ವೀಕರಿಸುವುದೆಂಬ ನಂಬಿಗೆಯನ್ನು ಪಡೆದುಕೊಂಡು, ಧವಳಗಿರಿಗೆ ಹೊರಟು
ಹೋದನು.