ಕತ್ತಿಗಳನ್ನು ಒರೆಯಲ್ಲಿ ಇಟ್ಟು, ಇಬ್ಬರು ಗೆಳೆಯರಂತೆ ಒಬ್ಬರನ್ನೊಬ್ಬರು ತಬ್ಬಿಕೊಂಡರು. ಆ ರಾಜನ ಮಗಳನ್ನು ಅಜಿತನು ಮದುವೆ ಮಾಡಿ ಕೊಂಡನು.
ಅದು ವರೆಗೆ ಜನರಲ್ಲಿ ಒಕ್ಕಪ್ಟೆಂಬದು ಇರಲಿಲ್ಲ. ಅಜಿತನು ತನ್ನ ಗ್ರಾಮಗಳೊಳಗೆ ಪರಸ್ಪರ ಸ್ನೇಹವುಂಟಾಗುವಂತೆ ಮಾಡಿ, ಸುತ್ತುಮುತ್ತಲಿನ ಇತರ ಸೀಮೆಗಳಲ್ಲಿ ಯವನದೇಶವೇ ಶ್ರೇಷ್ಠವಾಗುವ ಹಾಗೆ ಅನೇಕ ಸತ್ಕಾರ್ಯಗಳನ್ನು ಮಾಡಿದನು. ಜನರೆಲ್ಲರೂ ಆತನಲ್ಲಿ ಸಂಪೂರ್ಣ ವಿಶ್ವಾಸವುಳ್ಳವರಾಗಿದ್ದರು, ತಮಗೆ ಸುಖಜೀವನವನ್ನೂ ಸ್ವಾತಂತ್ರವನ್ನೂ ಅಜಿತನು ದಯಪಾಲಿಸಿದನೆಂದು ಆತನನ್ನು ಕೊಂಡಾಡಿ, ಅವನ ಮರಣಾನಂತರವೂ ಅವನನ್ನು ಅಧಿಕವಾಗಿ ಗೌರವಿಸ ಹತ್ತಿದರು. ಅವನು ತೀರಿಕೊಂಡ ಇಪ್ಪತ್ತು ವರುಷಗಳ ಮೇಲೆ ಆತನ ಮೂಳೆಗಳು ಸಮುದ್ರದಾಚೆ ಅಂಜನವೆಂಬ ದ್ವೀಪದಲ್ಲಿ ದೊರೆತವಂತೆ ! ಅವು ಸಾಮಾನ್ಯರಾದ ಮನುಷ್ಯರು ಎಲುಬುಗಳಿಗಿಂತ ಗಟ್ಟಿಮುಟ್ಟಾಗಿದ್ದು ವಂತೆ ! ಆ ಅಸ್ಥಿಗಳನ್ನು ಬಹು ಸಂಭ್ರಮದಿಂದ ತಂದು, ಅರಮನೆಯ ಬಳಿ ಹುಗಿದು, ಅಲ್ಲಿ ಆತನ ನೆನಪಿಗಾಗಿ ಒಂದು ದೇವಾಲಯವನ್ನು ಕಟ್ಟಿಸಿದರು, ಪ್ರಾಯಶಃ ಆರು ನೂರು ವರುಷಗಳ ವರೆಗೆ ಲೋಕೈಕವೀರನಾದ ಅಜಿತನ ಹೆಸರನ್ನು ಜನಗಳು ಮರೆಯಲಿಲ್ಲ.
ಆದರೆ ಅಜಿತನ ಮೂಳೆಗಳು ಅಂಜನ ದ್ವೀಪದಲ್ಲಿ ಸಿಕ್ಕಿದುದಕ್ಕೆ ಕಾರಣವೇನು? ಆತನು ಯವನದೇಶದಲ್ಲಿ ಯೇ ಸಾಯದೆ, ಅಂಜನ ದ್ವೀಪದಲ್ಲಿ ಹೇಗೆ ಸತ್ತನು? ಹೋದಹೋದಲ್ಲಿ ಆತನಿಗೆ ಜಯಲಕ್ಷ್ಮಿಯು ಹೂ ಮಾಲೆಯನ್ನು ಹಾಕಿದುದರಿಂದ, ಕೊನೆಗೆ ಆತನ ತಲೆ ಕೊಂಚ ತಿರುಗಿತು, ಆಗ ಅವನು ದೇವರ ನಿಯಮಗಳನ್ನು ಮೀರಿ, ಅನ್ಯಾಯಮಾರ್ಗಕ್ಕೆ ಕಾಲೂರಿದನು, ತನಗೆ ಮಿತ್ರನೂ ಮಾವನೂ ಆದ ಚಂಪಾವತಿಯ ರಾಜ ನನ್ನು ಕರೆದುಕೊಂಡು, ಸುರಂಗ ಮಾರ್ಗವಾಗಿ ಪಾತಾಳ ಲೋಕಕ್ಕೆ ಹೋಗಿ, ಅಲ್ಲಿಯ ರಾಜನ ಮಗಳಾದ ಒಬ್ಬ ನಾಗಕನ್ನಿಕೆಯನ್ನು-ರಾವ