X ನೇತ್ರವತಿಯ ಸ್ಪಪ್ನ ಫಲ.
ಅರಿಂದಮೆಯು ಅಜಿತನ ಹೆಂಡತಿಯಾದರೂ ಯವನದೇಶಕ್ಕೆ ಬರಲೇ ಇಲ್ಲ, ಎಲ್ಲಿಯೋ ಒಂದು ಕಡೆ ಮಲಗಿದ್ದಾಗ ಅಜಿತನು ಬಿಟ್ಟು ಬಂದನೆಂದೂ, ಒಬ್ಬ ರಕ್ಕಸನು ಆಕೆಯನ್ನು ಎತ್ತಿಕೊಂಡು ಹೋದನೆಂದೂ ಕೆಲವರು ಹೇಳುವರು ; ಇನ್ನು ಕೆಲವರು ಆ ರಕ್ಕಸನು ಅಜಿತನನ್ನು ಓಡಿಸಿ, ಬಲಾತ್ಕಾರದಿಂದ ಅವಳನ್ನು ಸೆಳೆದುಕೊಂಡು ಹೋದನೆಂದು ಹೇಳುವರು, ಹೇಗೂ ಇರಲಿ ;-ಅಜಿತನು ಹಡಗು ಹತ್ತಿ ಬರುವಾಗ ವ್ಯಥೆಯಿಂದಲೊ ಇಲ್ಲವೆ ಅವಸರದಿಂದಲೊ ಕರಿಯ ಪತಾಕೆಯನ್ನು ತೆಗೆದು ಬಿಳಿಯ ಪತಾಕೆಯನ್ನು ಏರಿಸುವುದಕ್ಕೆ ಮರೆತುಬಿಟ್ಟನು ! ಪರ್ವತಶಿಖರ ದಲ್ಲಿ ಕಾದುಕೊಂಡಿದ್ದ ತಾರಾಪತಿಯು ಹಡಗಿನ ಮೇಲೆ ಬಿಳಿಯ ಬಾವಟೆಯನ್ನು ಕಾಣದೆ, ತನ್ನ ಮಗನು ಸತ್ತನೆಂದೆಣಿಸಿ ಸಮುದ್ರಕ್ಕೆ ಹಾರಿ, ಪ್ರಾಣವನ್ನು ಕಳೆದುಕೊಂಡನು.
ಅಜಿತನು ಪಟ್ಟಣವನ್ನು ಮುಟ್ಟಿದ ತರುವಾಯ ತಂದೆಯ ಮರಣ ವಾರ್ತೆಯನ್ನು ಕೇಳಿ, ತನ್ನ ಮರವೆಗಾಗಿ ಬಹಳ ಪಶ್ಚಾತ್ತಾಪ ಪಟ್ಟನು. ಆ ಮೇಲೆ ಯವನದೇಶಕ್ಕೆ ಆತನೇ ಅರಸನಾಗಿ ಪ್ರಜೆಗಳನ್ನು ಒಳ್ಳೆಯ ರೀತಿಯಿಂದ ನೋಡುತಿದ್ದನು, ಹಾವಳಿ ಮಾಡುತಿದ್ದ ಎಷ್ಟೋ ಮಂದಿ ರಾಕ್ಷಸರನ್ನು ನಾಶಮಾಡಿದನು, ಆ ಕಾಲದಲ್ಲಿ ಚಂಪಾವತಿಯೆಂಬ ಪಟ್ಟಣದಲ್ಲಿ ಅಜಿತನಂತೆಯೇ ಶೂರನಾಗಿದ್ದ ಒಬ್ಬ ರಾಜನು ಅವನ ಮೇಲೆ ಕತ್ತಿ ಕಟ್ಟಿ ಯುದ್ಧಕ್ಕೆ ನಿಂತ ಕೂಡಲೆ ಇಬ್ಬರೂ ವೀರರಾದುದರಿಂದ, ಇಬ್ಬರ ಮನಸ್ಸಿನಲ್ಲಿಯೂ ಹಗೆ ಹೋಗಿ, ಅಕ್ಕರೆ ಹುಟ್ಟಿತು. ತತ್‌ಕ್ಷಣವೆ