ಪುಟ:ಅಜಿತ ಕುಮಾರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦

ಚಕ್ರವ್ಯೂಹದ ಪುರುಷಾಮೃಗ.

ರಿಂದ ಅರಚಿಕೊಂಡು ಓಡತೊಡಗಿತು. ಅಜಿತನೂ ಎಡಗೈಯಿಂದ ನೂಲನ್ನು ಬಿಡುತ್ತ ಅದನ್ನು ಬೆನ್ನಟ್ಟಿದನು, ಪುರುಷಾಮೃಗವು ಕೂಗುತ್ತ ಮುಂದಿನಿಂದಲೂ, ಅಜಿತನು ಹೊಡೆಯುತ್ತ ಹಿಂದಿನಿಂದಲೂ ಎಷ್ಟೋ ಗುಹೆಗಳನ್ನೂ ಬಂಡೆಗಳನ್ನೂ ದಾಟಿಕೊಂಡು ಹೋದರು. ಕೊನೆಗೆ ಅದು ಓಡಲಾರದೆ ತೊಪ್ಪನೆ ಬಿತ್ತು, ಆಗ ಅಜಿತನು ಅದರ ಕೊಂಬುಗಳನ್ನು ಹಿಡಿದು, ತಲೆಯನ್ನು ಹಿಂದಕ್ಕೆ ಆನಿಸಿ, ಕುತ್ತಿಗೆಯನ್ನು ಕೊಯ್ದು ಬಿಟ್ಟನು, ಪುರುಷಾಮೃಗವು ಮಡಿದುಬಿತ್ತು.

ಅಲ್ಲಿಂದ ಅಜಿತನು ಎದ್ದು ಬಳಲಿಕೆಯಿಂದ, ಮೆಲ್ಲಮೆಲ್ಲನೆ, ಕುಂಟುತ್ತ, ನೂಲಿನ ಸಹಾಯದಿಂದ ಕೋಟೆಯ ಬಾಗಿಲಿಗೆ ಬಂದನು. ಅಲ್ಲಿ ಅರಿಂದಮೆಯು ಆತುರದಿಂದ ಅವನನ್ನು ಕಾದುಕೊಂಡಿದ್ದಳು.

ಅಜಿತನು ಆಕೆಯನ್ನು ಕಂಡು, “ಎಲ್ಲವೂ ಸರಿಯಾಯಿತು' ಎಂದು ಹೇಳಿ, ಕತ್ತಿಯ ನೆತ್ತರನ್ನು ತೋರಿಸಿದನು, ಅರಿಂದಮೆಯು ಮಾತ ನಾಡಬಾರದೆಂದು ಸನ್ನೆಯಿಂದಲೇ ತಿಳಿಸಿ, ಆತನನ್ನು ಸೆರೆಮನೆಗೆ ಕರೆದುಕೊಂಡು ಹೋದಳು. ಪಹರೆಯವರಿಗೆ ಮುಂಚಿತವಾಗಿಯೇ ಚೆನ್ನಾಗಿ ಕುಡಿಸಿ ಬಿಟ್ಟಿದ್ದುದರಿಂದ, ಅವರೆಲ್ಲ ರೂ ಗೊರಕೆ ಹೊಡೆಯುತ್ತಿದ್ದರು. ಮೆಲ್ಲನೆ ಬಾಗಿಲು ತೆರೆದು ಯವನದೇಶದಿಂದ ಬಂದಿದ್ದ ವರನ್ನು ಹೊರಕ್ಕೆ ಬಿಟ್ಟಳು. ಅವರು ಸಂತೋಷದಿಂದ ಸಮುದ್ರತೀರಕ್ಕೆ ಹೋಗಿ, ಅಲ್ಲಿ ಮೊದಲೇ ಸಿದ್ಧವಾಗಿದ್ದ ಹಡಗನ್ನು ಹತ್ತಿ ಕೊಂಡು, ಹಾಯಿಗಳನ್ನು ಬಿಚ್ಚಿಬಿಟ್ಟರು. ಕತ್ತಲೆಯಾಗಿದ್ದು ದರಿಂದ ಶತಬಲಿಯ ದೋಣಿಗಳು ಅನೇಕವಿದ್ದರೂ ಈ ಹಡಗು ಹೋದುದು ಅವರಿಗೆ ಗೊತ್ತೇ ಆಗಲಿಲ್ಲ. ಅವರು ಬೆಳಕು ಹರಿಯುವುದರೊಳಗೆ ಒಂದು ದ್ವೀಪವನ್ನು ಸೇರಿದರು, ಅಲ್ಲಿ ಅಜಿತನು ಅರಿಂದಮೆಯನ್ನು ಮದುವೆಮಾಡಿಕೊಂಡನು.