ಪುಟ:ಅನುಭವಸಾರವು.djvu/೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಶಿವಭಕ್ತಿಯು ಎಲ್ಲಾ ಕಡೆಯೂ ವೃದ್ದಿಯಲ್ಲಿದೆ. ಹಿಮಾಚಲದ ದಕ್ಷಿಣ ಸೀಮೆಯಲ್ಲಿ ಮಾತ್ರ ಜೈನ ಬೌದ್ಧಾದಿಗಳ ಪ್ರಾಬಲ್ಯದಿಂದ ಶಿವಮತವು ಕ್ಷೀಣದಶೆಯಲ್ಲಿದೆ. ಆದುದರಿಂದ ನೀನೇ ಅವತರಿಸಿ, ನಿನ್ನ ಮತವನ್ನು ಉದ್ಧರಿಸಬೇಕೆಂದು ಪ್ರಾರ್ಥಿಸಿದನೆಂತಲೂ ಆಗ ಶಿವನು ತನ ವಾಹನವಾದ ನಿಜಧರ್ಮ ಸ್ವರೂಪನಾದ ವೃಷಭನಿಗೆ- ನೀನು ಭೂಲೋಕದಲ್ಲಿ ಮಧುವರ ಸನೆಂಬ ಅಲಿಗಿ ಬ್ರಾಹ್ಮಣನಿಗೆ ಮಗನಾಗಿ ಅವತರಿಸಿ, ಮಹಿಮೆಯಿಂದ ನಾಸಿಕ ಮತಗಳನ್ನು ನಾಶಗೊಳಿಸೆಂದು ಆಜ್ಞಾಪಿಸಿ, ಹಸ್ತಸ್ಪರ್ಶ, ವಾಗ್ಧರ್ಶ, ನೇತ್ರಸ್ಪರ್ಶ ಮೊದಲಾದ ಶಕ್ತಿಗಳ ನ್ಯೂ ಕೆಲವು ಗಾಧೀಶ್ವರರನ್ನೂ ಸಾಹಾಯ್ಯಕ್ಕಾಗಿ ಕೊಟ್ಟು ಕಳುಹಿಸಿದನೆಂತಲೂ ಬಸವ ನ ಚರಿತ್ರೆಯಲ್ಲಿ ಹೇಳಲ್ಪಟ್ಟಿದೆ. ಇದರಿಂದ ಬಸವನ ಅವತಾರಕ್ಕಿಂತ ಪೂರ್ವದಲ್ಲಿಯೂ ಲಿಂಗಾ ಯತ (ವೀರಶೈವ ಮತವು ಇತ್ತು ಎಂಬ ಅರ್ಥವೂ ಹಿಂದೂ ವೇದಾಗಮಾದಿಗಳನ್ನು ತಿರಸ್ಕರಿಸುವ ಜೈನ, ಬೌದ್ಧ ಮುಂತಾದ ಮತಗಳನ್ನು ನಿಗ್ರಹಿಸಿ, ಶಿವಭಕ್ತಿಯ ಪ್ರತಿಬಂಧವ ನ್ನು ತಪ್ಪಿಸುವಂತೆ ಬಸವನ ಅವತಾರವಾಯಿತೆಂಬ ಅರ್ಥವೂ ಸ್ಪಷ್ಟವಾಗುವುದರಿಂದ ಬಸವನು ಮಹಿಮೆಯಿಂದ ಶಿವಮತವನ್ನು ಉದ್ದರಿಸಿದ ಮಹಾ ಪುರುಷನೇ ಹೊರತು, ಮತಾಚಾ ರ್ಯನೂ ಅಲ್ಲ, ಮತಸ್ಥಾಪಕನೂ ಅಲ್ಲ. ಬಸವನು ಶಿವಭಕ್ತಿಯಲ್ಲಿ ಹೆಸರುಗೊಂಡವನಾದುದೆ ರಿಂದ ಕೆಲವರು ವೀರಶೈವ ಕವಿಗಳು ಬಸವನನ್ನು ಉದ್ದೇಶಿಸಿ ಹೊಗಳಿದ್ದಾರೆ. ಮತ್ತು ಸಿದ್ದಾಂ ತೈಕನಿಷ್ಠರಾದ ವೀರಶೈವ ಕವಿಗಳು ರೇಣುಕಾಚಾರ್ಯ, ನೀಲಕಂಠಶಿವಾಚಾರ್ಯ, ಮಂಚ ಇಪಂಡಿತ, ಮಾಯಿದೇವ, ಮಲ್ಲಿಕಾರ್ಜುನಪಂಡಿತ ಮೊದಲಾದ ಮತಪ್ರವರ್ತಕರನ್ನು ಹೊಗ ಳಿದ್ದಾರೆ. ಇಷ್ಟು ಮಾತ್ರದಿಂದ ನಿಜಗುಣ ಕವಿಯು ಬಸವನಿಗಿಂತ ಪೂರ್ವದಲ್ಲಿದ್ದನೆಂದು ನಿರ್ಣಯಿಸುವುದಕ್ಕಾಗುವುದಿಲ್ಲ. ನಿಜಗುಣ ಕವಿಯ ಗ್ರಂಥಗಳಲ್ಲಿ ಹೊಸಗನ್ನಡ ಮಾತುಗಳ ಸರಣಿಯೇ ವಿಶೇಷವಾಗಿ ಕಂಡುಬರುವುದರಿಂದ ಈ ಕವಿಯು ೧೬ ನೇ ಶತಮಾನಕ್ಕೂ ೧೮ ನೇ ಶತಮಾನಕ್ಕೂ ಮಧ್ಯಕಾಲದಲ್ಲಿದ್ದನೆಂದು ತೋರುತ್ತದೆ. ೧೬ ನೇ ಶತಮಾನದಲ್ಲಿದ್ದ ಯಳಂದೂರು ಷಡಕ್ಷರ ಕವಿಯು ರಾಜಶೇಖರವೆಂಬ ಕರ್ತಾಟಕ ಚಂದ್ರ ಗ್ರಂಥದ ಪೀಠಿಕೆ ಯಲ್ಲಿ . . . . . . . . “ ನಿಜಗುಣ ಯೋಗಿಯ ನಿರುಪಮ ನಿಜಗುಣ ಯೋಗಿಯ ನದಾಬ್ಬಕಾನನಪ್ಪೆಂ! ಎಂದು ನಿರೂಪಿಸಿದ್ದಾನೆ.

ಗ್ರಂಥಮುದ್ರಣ ಕಾರಣವು.

ಮೈಸೂರು ವೆಸ್ಲಿಯನ್ ಮಿಷನಿಗೆ ಸೇರಿದ ಘನ ಪಾದ್ರಿಗಳಾದ ತಾಮ್ಪನ್ ಬೋಧಕ ರು ೧೯೦೧ನೆ ಇಸವಿಯಲ್ಲಿ ನನ್ನಲ್ಲಿ ಕನ್ನಡ ಮುದ್ರಾಮಂಜೂಷ, ಸಂಸ್ಕೃತ ಪಂಚತಂತ್ರ