ಪುಟ:ಅನುಭವಸಾರವು.djvu/೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
ಗ್ರಂಥಕರ್ತನ ವಿಷಯವು.

ನಿಜಗುಣಾರ್ಯನೆಂಬ ಲಿಂಗಧಾರಿ ಬ್ರಾಹ್ಮಣನು ಮೈಸೂರು ಸೀಮೆಯ ದಕ್ಷಿಣದೇಶದ ಲ್ಲಿ ವಾಸಮಾಡುತ್ತಾ ಇದ್ದನು. ಈತನು ಸಂಸ್ಕೃತ ಭಾಷೆ ಕರ್ಣಾಟಕ ಭಾಷೆ ಈ ಎರಡರ ಲ್ಲಿಯೂ ಗಟ್ಟಿಗನಾಗಿ ಗೃಹಸ್ಥಾಶ್ರಮದಲ್ಲಿರುವಾಗಲೇ ಶಂಭುಲಿಂಗಸ್ವಾಮಿ ಎಂಬ ಗುರುವಿನಿಂ ದ ಜ್ಞಾನೋಪದೇಶವಂ ಪಡೆದು, ಚಿತ್ರ ಪರಿಪಾಕದಿಂದ ಸಂಸಾರ ವ್ಯಾಪಾರಗಳಲ್ಲಿ ವೈರಾಗ್ಯ ವುಳ್ಳವನಾಗಿ, ಕೊಳ್ಳೇಗಾಲದ ತಾಲ್ಲೂಕು ಚಿಲಕುವಾಡಿ ಗ್ರಾಮದ ಸವಿಾಪದಲ್ಲಿರುವ ಒಂದು ಗುಡ್ಡದಲ್ಲಿದ್ದು, ಯೋಗಾಭ್ಯಾಸವನ್ನು ಮಾಡಿ, ಬಹು ಜ್ಞಾನಿಯೆಂದು ಹೆಸರುವಾಸಿ ಹೊಂದಿ, ಅಲ್ಲಿಯೇ ದೇಹವನ್ನು ಬಿಟ್ಟನು. ಆಗಲಿಂದಲೂ ಆ ಬೆಟ್ಟಕ್ಕೆ ನಿಜಗುಣರ ಬೆಟ್ಟವೆಂದೂ ಶಂಭುಲಿಂಗನ ಬೆಟ್ಟವೆಂದೂ ಆತನಿಗೆ ನಿಜಗುಣಶಿವಯೋಗಿ ಎಂದೂ ಪ್ರಸಿದ್ಧಿಯುಂಟಾಯಿ ತು. ಆ ಗುಡ್ಡದಲ್ಲಿ ಶಂಭುಲಿಂಗನ ಗುಡಿಯೊಂದುಂಟು. ನಿಜಗುಣಾರನಿಗೆ ವೇದ, ವೇದಾಂತ, ಆಗಮ, ಪುರಾಣ, ಸಂಗೀತ, ತರ್ಕ, ವ್ಯಾಕರಣ, ಯೋಗ ಮುಂತಾದ ವಿದ್ಯೆಗಳಲ್ಲಿಯೂ ಅನೇಕ ಮತಸಿದ್ದಾಂತಗಳಲ್ಲಿಯೂ ಪೂರ್ಣ ಪಾಂಡಿತ್ಯವಿತ್ತೆಂಬ ಅರ್ಥವು ಆತನಿಂದ ರಚಿಸಲ್ಪಟ್ಟ ವಿವೇಕಚಿಂತಾಮಣಿಯಿಂದ ವ್ಯಕ್ತವಾಗುತ್ತದೆ. ಈತನು ಸಂಸ್ಕೃತದಲ್ಲಿ ಯಾವ ಗ್ರಂಥ ಗಳನ್ನು ರಚಿಸಿದ್ದಾನೆಯೋ ಗೊತ್ತಿಲ್ಲ. ನಿಜಗುಣಸಿದ್ದ ಕಾಲವು ಈತನ ಗ್ರಂಥಗಳಿಂದ ತಿಳಿದು ಬರುವದಿಲ್ಲ. ಆದರೆ, ಕ್ರೀಸ್ತಶಕ ೧೪ ನೇ ಶತಮಾನದಲ್ಲಿ ಪಾಲ್ಕುರಿಕೆ ಸೋಮಾರಾಧ್ಯ, ಹಂಪಿಹರೀಶ್ವರ ಮೊದಲಾದ ಕವಿಗಳು ತಮ್ಮ ಗ್ರಂಥಗಳಲ್ಲಿ ಬಸವನನ್ನು ಸ್ತುತಿಸಿದ್ದಾರೆ. ನಿಜ ಗುಣಕವಿಯಿಂದ ಮಾಡಲ್ಪಟ್ಟಿರುವ ಕೈವಲ್ಯನದ್ದತಿ ಮುಂತಾದ ಗ್ರಂಥಗಳಲ್ಲಿ ಬಸವನ ಹೆಸ ರೇ ಇಲ್ಲ. ಈ ಕಾರಣದಿ-ದ ನಿಜಗುಣನು ಬಸವನ ಅವತಾರಕ್ಕಿಂತ ಪೂರ್ವ, ಅಂದರೆ ೧೨ ನೇ ಶತಮಾನದಲ್ಲಿ ಇದ್ದನೆಂದು ಕೆಲವರು ಊಹಿಸಿ ಹೇಳುತ್ತಾರೆ. ಈ ಊಹೆಯ ನಂಬಿಕೆಗಾಸ್ತ್ರ ದವಾದುದಲ್ಲ. ಯಾಕಂದರೆ ಈಗಿನ ಲಿಂಗಧಾರಿಗಳಲ್ಲಿ ಕೆಲವರು ಬಸವನನ್ನು ಮತಾಚಾರ ನೆಂದು ತಿಳಿದಿದ್ದಾರೆ, ಕೆಲವರು ಮತಸ್ಥಾಪಕನೆಂದು ಹೇಳುತ್ತಾರೆ, ರೇಣುಕ ಮುಂತಾದವ ರೇ.ವೀರಶೈವ ಮತದ ಆಚಾರ್ಯರು, ನೀಲಕಂಠಶಿವಾಚಾರ್ಯರೇ ಭಾಷ್ಯಮೂಲಕವಾಗಿ ಮತಸ್ಥಾಪನೆಯನ್ನು ಮಾಡಿದರು, ಬಸವನು ಆಚಾರ್ಯವಂಶೀಯನಾದರೂ ಆಗಿದ್ದರೆ ಮತಾಚಾರ್ಯನೆಂದು ಹೇಳಬಹುದಾಗಿತ್ತು, ಮತ್ತು ಬಸವನು ಮತಸ್ಥಾಪನೆಗಾಗಿ ಯಾವ ಸಿದ್ಧಾಂತ ಗ್ರಂಥವನ್ನೂ ರಚಿಸಿಲ್ಲವಾದುದರಿಂದ ಮತಸ್ಥಾಪಕನೆಂದು ಹೇಳುವದಕ್ಕೆ ಆಸ್ಪದವಿ ಲ್ಲ. ನಾರದಮುನಿಯು ಕೈಲಾಸಕ್ಕೆ ಹೋಗಿ, ಶಿವನನ್ನು ನೋಡಲಾಗಿ, ಶಿವನು - ಎಲೈ, ನಾರ ದನೇ ! ಭೂಲೋಕದಲ್ಲಿ ಏನು ವಿಶೇಷವೆಂದು ಪ್ರಶ್ನೆ ಮಾಡಿದುದಕ್ಕೆ ನಾರದನು -ಸ್ವಾಮೀ!