ಪುಟ:ಅನುಭವಸಾರವು.djvu/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಪೀಠಿಕೆ.
ಗ್ರಂಥವಿಷಯಕ ವಿಚಾರವು.

ಯೋಗ, ಸಾಂಖ್ಯ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸೆ, ಉತ್ತರಮಿಮಾಂಸ ಯೆಂಬಷಡರ್ಶನಗಳೊಳಗೆ ವ್ಯಾಸಮುನಿಯಿಂದ ರಚಿಸಲ್ಪಟ್ಟ ಉತ್ತರ ಮೀಮಾಂಸೆಗೆ ವೇದಾಂ ತವೆಂಬ ಉಪನಿಷತ್ತುಗಳೇ ಮೂಲವ, ಈ ವೇದಾಂತ ಸೂತ್ರಗಳಿಗೆ ಕ್ರಿಸ್ತಶಕ ಎಂಟನೆ ಯ ಶತಮಾನದಲ್ಲಿ ನೀಲಕಂಠಶಿವಾಚಾರರು ಶಕ್ತಿವಿಶಿಷ್ಟಾದ್ವೈತಪರವಾದ ವೀರಶೈವ ಭಾಷ್ಯ ವನ್ನು ಮಾಡಿದರು. ಅದೇ ಕಾಲದಲ್ಲಿದ್ದ ಶಂಕರಾಚಾರರು ಅವೇ ಸೂತ್ರಗಳಿಗೆ ಅಧ್ವೈತಪರವಾದ ಭಾಷ್ಯವನ್ನು ರಚಿಸಿದರು. ಇದಕ್ಕೆ ಶಂಕರ ಭಾಷ್ಯವೆಂದು ಪ್ರಸಿದ್ದಿ. ಇದು ಸಂಸ್ಕೃತ ಭಾಷೆಯಲ್ಲಿ ರಚಿಸಲ್ಪಟ್ಟಿರುವುದರಿಂದಲೂ ಬಹು ಪ್ರೌಢವಾಗಿರುವುದರಿಂದಲೂ ಶಂಕ ರಾಚಾರಮತಸ್ಥರಲ್ಲಿ ಕೆಲವರು ವಿದ್ವಾಂಸರು, ಪಂಚದಶಿ, ಬೃಹದ್ವಾಸುದೇವಮನನ, ಲಘು ವಾಸುದೇವಮನನ, ಬ್ರಹ್ಮಾನಂದೀಯ ಮುಂತಾದ ಅನೇಕ ಅದ್ವೈತ ಪ್ರಕರಣ ಗ್ರಂಥಗಳ ನ್ನು ಸುಲಭ ಶೈಲಿಯಿಂದ ರಚಿಸಿದರು. ಅನಂತರ ದ್ರಾವಿಡ, ಆಂಧ್ರ, ಮಲಯಾಳ, ಮಹಾರಾಷ್ಟ ಮೊದಲಾದ ದೇಶಗಳಲ್ಲಿರುವ ಅದ್ವೈತ ಮತಾವಲಂಬಿಗಳಾದ ಸಂಸ್ಕೃತ ಪಂಡಿತರು ಅದ್ವೈತ ಮತಪ್ರಕರಣವನ್ನು ತಂತಮ್ಮ ದೇಶ ಭಾಷೆಗಳಲ್ಲಿ ಗದ್ಯರೂಪವಾಗಿಯೂ ಪದ್ಯರೂಪ ವಾಗಿಯೂ ರಚಿಸಿ ಪ್ರಚಾರಕ್ಕೆ ತಂದರು. ಹೀಗಿರುವಲ್ಲಿ ನಿಜಗುಣಶಿವಯೋಗಿಯೆಂಬ ಕವಿ ಯು ಸಂಸ್ಕೃತ ಭಾಷೆಯನ್ನರಿಯದ ಕನ್ನಡಿಗರಿಗೆ ಅದ್ವೈತ ಮತ ತತ್ವವನ್ನು ತಿಳಿಸಬೇಕೆಂಬ ಅಪೇಕ್ಷೆಯಿಂದ ಕನ್ನಡ ಭಾಷೆಯಲ್ಲಿ ಪದ್ಯರೂಪವಾಗಿ ಕೈವಲ್ಯಪದ್ಧತಿ ಅನುಭವಬೋಧೆ ಅನುಭವಸಾರ, ಅನುಭವಗೀತೆ ಎಂಬ ನಾಲ್ಕು ಗ್ರಂಥಗಳನ್ನು ರಚಿಸಿದಮೇಲೆ ಗದ್ಯರೂಪವಾ ದ ಪರಮಾರ ಪ್ರಕಾಶಿಕೆಯೆಂಬ ಯೋಗಶಾಸ್ತ್ರವನ್ನೂ ವೇದಾಗಮಪುರಾಣಸಾರವಾದ ವಿವೇ ಕಚಿಂತಾಮಣಿಯೆಂಬ ಗ್ರಂಥವನ್ನೂ ತ್ರಿಸದೀರೂಪವಾದ ತ್ರಿಷಷ್ಟಿವುರಾತನ ಸ್ತೋತ್ರವನ್ನೂ ರಚಿಸಿದನು. ಈಗ ಪ್ರಸಿದ್ಧವಾಗಿರುವ ದ್ವೈತ, ಅದ್ವೈತ, ವಿಶಿಷ್ಟಾದ್ವತ, ಶಕ್ತಿವಿಶಿಷ್ಟಾದ್ವತ (ವೀರಶೈವ) ಎಂಬ ನಾಲ್ಕು ಮತಗಳೊಳಗೆ ಅದ್ವೈತ ಶಕ್ತಿವಿಶಿಷ್ಟಾದ್ವೈತ ಮತಪ್ರಕರಣ ಗಳು ಮಾತ್ರ ಎಲ್ಲಾ ಹಿಂದೂ ಭಾಷೆಗಳಿಂದಲೂ ವಿವರಿಸಲ್ಪಟ್ಟಿವೆ.