ಪುಟ:ಅನುಭವಸಾರವು.djvu/೧೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Fଟ୍ - ೧೦ ೧೧ - ೨) & ಪರಮಾತ್ಮ ನಿಮ್ಮ ಪದಸರಸಿಜಾಮೋದವದು | ಪೊರೆದೆನೊಳಿರ್ದ್ದ ದುರಿತದುರ್ವಾಸನೆಯ / ನೊರಸಲಾನಿಂದು ಶುಚಿಯಾದೆ 6 ೬ ಎನ್ನ ತನುಮುಖ್ಯವೆಲ್ಲ ನಿಮ್ಮ ಪದಸೋಂಕಿ] ನಿಂ ನಿಶ್ಚಲವಾಯು - ಪುಪ್ಪಾದಿರುವೆ, ಯಂ॰ ನೆರೆದು ಲವಣವೆನಿಸಂತೆ || v ಮಂಗಳಾತ್ನ ಕನಿನ್ನ ಸಂಗದಿಂದೆನ್ನ ಕರ| ಅಂಗಳಂವರವೆ ಮುಸುಕ ದಾರವಿಯತುರ ಗಂಗಳಿಗೆ ತಿಮಿರಭಯವೆಂತು ! ೯ ಬೆಲ್ಲ ಮಂಕೂಡಿ ಬೇವೆಲ್ಲ ವಿನಿದಪ್ಪಂದ) ದಲ್ಲಿ ನಿನ್ನೊಲುಮೆವೆರೆದೆನ್ನ ಮತಿಮರವೆ ಯಿಲ್ಲದಾಯಿತ್ತು ಸುಖರೂಪಿ ಕೇಶವಂಚಕ ಪಂಚಕೋಶನವಗುಣ ನಷ್ಟ ಪಾಶಾಷ್ಟಕ ಪ್ರಕೃತಿಯ ಪೈಪುರಿಯಳಿದ ವೀಕ ನಿಮ್ಮನುಭಾವದೊಳೆನ್ನಾ | ಶ್ರೀಗುರುವೆ ನಿನ್ನ ವಚನಾಗಮಪಯೋನಿಧಿಯು ನೀಗಳಾನೆಯ್ತಿ ಸು ಖಸುಧಾರಸವನುಪ{ ಭೋಗಿಸು, ಮೃತಮಯನಾದೆ | ೬ ಎಲೈ ಪರಬ್ರಹ್ಮಸ್ವರೂಪನೇ, ನಿಮ್ಮ ಪಾದಕಮಲದ ಪರಿಮಳವು ವ್ಯಾಪಿಸಿ ನನ್ನಲ್ಲಿ ಇದ್ದಂಥಾ ಪಾಪದ ದುರ್ವಾಸನೆಯನ್ನು ತೊಡೆಯಲಾಗಿ ನಾನು ಶುದ್ಧನಾದೆನು. ೭ ನನ್ನ ದೇಹ, ಇಂದ್ರಿಯ ಮೊದಲಾದವುಗಳೆಲ್ಲಾ ನಿಮ್ಮ ಪಾದಸ್ಪರ್ಶದಿಂದ ಹೂವು ಮುಂತಾದ ವಸ್ತುವು ಉಪ್ಪಿನ ಗಣಿಯನ್ನು ಸೇರಿ ಉಸ್ಸೆನಿಸಿದ ಹಾಗೆ ನಿರ್ಮಲವಾ ದವು. ೮ ಎಲೈ ಮಂಗಳಸ್ವರೂಪನೇ, ನಿನ್ನ ಸಂಬಂಧದಿಂದ ನನ್ನ ಇಂದ್ರಿಯಗಳಿಗೆ ಅಜ್ಞಾನವು ಆವರಿಸುವದಿಲ್ಲ. `ಸೂರಿನ ಕುದುರೆಗಳಿಗೆ ಕತ್ತಲೆಯ ಬಾಧೆಯುಂಟಾದೀತೇ ? ೯ ಎಲೈ ಆನಂದಸ್ವರೂಪನೇ, ಬೇವು ಬೆಲ್ಲದೊಡನೆ ಸೇರಿ ಸಿಹಿಯಾದ ಹಾಗೆ ನಿಮ್ಮ ಪ್ರೀತಿಯಿಂದ ಕೂಡಿದ ನನ್ನ ಬುದ್ದಿಯು ಅಜ್ಞಾನಶೂನ್ಯವಾದದ್ದಾಯಿತು. - ನನ್ನ ಅವಿದ್ಯೆ, ಅಸ್ಮಿತೆ, ರಾಗ, ದ್ವೇಷ, ಅಭಿನಿವೇಶ ಎಂಬ ಪಂಚಕ್ಷೇಶಗಳೂ; ಅನ್ನ ಮಯಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶ ಎಂಬ ಪಂಚಕೋಶಗಳೂ: ಹಿಂದೆ ಹೇಳಿದ ಒಂಚ ತ್ತು ಗುಣಗಳೂ; ಎಂಟು ಪಾಶಗಳೂ ಎಂಟು ಪ್ರಕೃತಿಗಳೂ ಎಂಟು ಪುರಿಗಳೂ ನಿಮ್ಮ ಉಪದೇಶದಿಂದ ನಾಶಹೊಂದಿದವು. - ಎಲೈ ಗುರುವೇ, ನಿಮ್ಮ ವಚನರೂಪವಾದ ಆಗಮದ ಉಪನ್ಯಾಸವೆಂಬ ಕೀರಸ ಮುದ್ರವನ್ನು ನಾನು ಸೇರಿ, ಆನಂದವೆಂಬ ಅಮೃತರಸವನ್ನು ಅನುಭವಿಸುತ್ತಾ ಮೋ ಕಸ್ತರೂಪನಾದೆನು, - ೧೧.