ವಿಷಯಕ್ಕೆ ಹೋಗು

ಪುಟ:ಅನುಭವಸಾರವು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&

  1. ಒಮ್ಮೆ ಗಣಪತಿಗೆ ಮತ್ತೊಮ್ಮೆ ಸೇನಾಧಿಪಂ | ಗೊಮ್ಮೆ ವೀರೇಶ್ವರನಿಗೆ

ನಂದೀಶ್ ರ೦ | ಗೊಮ್ಮೆ ನಾನೊಲಿದುನತನಸ್ಸೆಂ। ಅಂದಿಂದುಮುಂದೆ ಬಿಡದೆಂದೆಂದುನಿಜಭಕ್ತಿ ಯಿಂದೀಶನೊಡನೆ ಬೆರೆ ದು ಸುಖವಿರ್ಪಗಣ / ವೃಂದವಂಕರ್ತುನತನಸ್ಸೆಂ | ಇದಕೆ ಮೇಲಿಲ ವೆಂಬುದುತಾನದಾನಸುಖ | ವದನೊಮ್ಮೆ ತನ್ನ ನರಿ ದೊಡೊಲಿದೀವಾತ್ಮ, ಪದವೆನ್ನಮಾನಸದೊಳರ್ಕ್ಕೆ! ೨ನೇ ಸೂತ್ರ-ಪ್ರಕರಣಸ್ಥಿತಿ ನಿರೂಪಣ. ಸಕಲವೇದಾಂತಸಾರವನತಿಳಿವಂತೆ ಸಾ| ಧಕರಿಗೀಪ್ರಕರಣದೊಳೊಲಿದೊರೆವೆನು | ೧ ಶ್ರುತಿಯನೇಸ್ಕರಿಸಿ ಹೇಳ್ತಿಶಯದ ಋಷಿವಾಕ್ಯ ಸ್ಮೃತಿಯೆನಿಸಿ ಲೋಕದೊಳು ಸೇವ್ಯವೆನಿಸಲಾ | ಶ್ರುತಿಯೇಪ್ರಮಾಣವಖಿಳಗ್ಗೆ |

  • *-- --

೫ 6 ಒಂದು ಸಾರಿ ಗಣೇಶನಿಗೂ, ಒಂದು ಸಾರಿ ಷಣ್ಮುಖನಿಗೂ, ಒಂದು ಸಾರಿ ವೀರ ಭದ್ರನಿಗೂ, ಹಾಗೆಯೇ ಒಂದು ಸಾರಿ ನಂದೀಶ್ವರನಿಗೂ ನಾನು ಪ್ರೀತಿಪೂರ್ವಕ ವಾಗಿ ನಮಸ್ಕರಿಸುತ್ತೇನೆ. ಪೂರ್ವದಲ್ಲಿಯೂ ಈಗಲೂ ಇನ್ನು ಮೇಲೆಯ ಯಾವಾಗಲೂ ಎಡೆಬಿಡದೆ ನಿಷ್ಕಪಟವಾದ ಭಕ್ತಿಯ ಮೂಲಕ, ಶಿವನ ಸಂಗಡ ಐಕ್ಯವಾಗಿ ಸೇರಿ ಸುಟದಲ್ಲಿರುವ ಶಿವಭಕ್ತರ ಸಮೂಹಕ್ಕೆ ನಮಸ್ಕರಿಸುತ್ತೇನೆ. ೬ ಯಾವ ಪರವಸ್ತುವು ತನ್ನನ್ನು ಒಂದು ವೇಳೆ ತಿಳಿದವರಿಗೆ ಇದಕ್ಕಿಂತಲೂ ಉತ್ತಮ ವಾದದ್ದಿಲ್ಲವೆನಿಸುವ ಸುಖವನ್ನು ದಯೆಯಿಂದ ಕೊಡುತ್ತದೋ ಆ ಪರವಸ್ತು ನನ್ನ ಹೃದಯದಲ್ಲಿ ನೆಲೆಗೊಂಡಿರಲಿ. ೨ನೇ ಸೂತ್ರ, ಪ್ರಕರಣಸ್ಥಿತಿ ನಿರೂಪಣೆ. ಈ ವೇದಾಂತ ಪ್ರಕರಣದಲ್ಲಿ ಎಲ್ಲಾ ಉಪನಿಷತ್ತುಗಳ ಮುಖ್ಯಾಂಶಗಳನ್ನು ಅಭ್ಯಾಸಿಗಳಾದವರಿಗೆ ಬೋಧೆಗೆ ಬರುವ ಹಾಗೆ ಪ್ರೀತಿಯಿಂ ಹೇಳುತ್ತೇನೆ. ೧ ವೇದವನ್ನೇ ಸ್ಮರಣೆಗೆ ತಂದು ಹೇಳಲ್ಪಟ್ಟಿರುವ ಋಷಿಗಳ ವಚನವು ಸ್ಮೃತಿಯೆಂದು ಪ್ರಸಿದ್ದವಾಗಿ ಎಲ್ಲರಿಂದಲೂ ಪರಿಗ್ರಹಿಸಲ್ಪಡುವದಕ್ಕೆ ಯೋಗ್ಯವಾಗಿರುವದರಿಂದ ಆ ವೇದವೇ ಸರ್ವರಿಗೂ ನಂಬತಕ್ಕ ಪ್ರಮಾಣವಾಗಿದೆ.