ಪುಟ:ಅನುಭವಸಾರವು.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬ ಬಾಧೆಗೊಳಿಸುವ ಪೂರ್ವಸಾಧನಗಳನಿಲ್ಲಿ 1 ಬೋಧಿಪುದನುಳಿದೆನ ವುಮುನ್ನವೇಮರಸ | ದೀಧರೆಯೊಳೆಪ್ಪುತಿಹವಾಗಿ! v ಇಲ್ಲಿ ಪ್ರಯೋಜನಂಸಲ್ಲಲಿತದಾ ಸುಖ ವಿಲ್ಲಿ ಜೀವೇಶರೇಕತ್ರವದು ವಿಷಯ / ವಿಲ್ಲಿ ಸಚಿ ವ್ಯನಧಿಕಾರಿ | ೯ ಪ್ರತಿಪಾದ್ಯವಾಬ್ರಹ್ಮ ಪ್ರತಿಪಾದಕವಿದಿಲ್ಲಿ ಪ್ರತಿಪಾದಕವನು ಪ್ರತಿಪಾ ಗ್ಯದೊಡನೆಸಂ ಗತಿಗೆ ಸಂಬಂಧವದುತಾನೆ | ೧೦ ಇಲ್ಲಿ ಸಂಧಿಸಮಾಸಪಲ್ಲ ಟಂ ಮೊದಲಾದ | ವೆಕ್ತಿ ಮಂನೋಡದಿರಿ ನೀ ರ್ವೆರೆದಪಾಲ 1 ನೊಲ್ಲ ದೇಂ ಹಂಸೆಬಿಡುವುದೇ। ಇದರೊಳರ್ಥವೆಲೇಸುಪದಬಂಧಮೋಳಾ ಸು| ಮೊದಲಾದವಿಲ್ಲ ದಿರೆ ತೋಡವನುಳಿದು ಕ | ಡಿದಕಾಂತೆಯಂತೆ ಸೋಗಸಕ್ಕುಂ | ೧೦ m ೮,೯ ಬಾಹ್ಯಾಂತರ ವ್ಯಾಪಾರಗಳಿಂದ ದೇಹಕ್ಕೆ ಕಷ್ಟವನ್ನುಂಟುಮಾಡತಕ್ಕ ಕರ್ಮ, ಯೋಗ ಮೊದಲಾದ ಜ್ಞಾನಸಾಧನಗಳಾದ ಉಪಾಯಗಳು ಮೊದಲೇ ಈ ಲೋಕ ದಲ್ಲಿ ಪ್ರಸಿದ್ಧವಾಗಿರುವದರಿಂದ ಅವುಗಳನ್ನು ಇಲ್ಲಿ ಹೇಳಲಿಲ್ಲ. ಅನುಭವಸಾರವೆಂಬ ಈ ವೇದಾಂತ ಶಾಸ್ತ್ರದಲ್ಲಿ ಮನೋಹರವಾದ ಆತ್ಮಾನಂದವೇ ಪ್ರಯೋಜನವು, ಜೀವೇಶ್ವರರ ಸ್ವರೂಪೈಕ್ಯವೆಂಬ ಅದ್ಭತವೇ ವಿಷಯವು, ಶಮಾ ದಿಗುಣ ಸಂಪನ್ನನಾದ ಶಿಷ್ಯನೇ ಅಧಿಕಾರಿ, ಪ್ರತಿಪಾದ್ಯವೇ ಪರಮಾತ್ಮ, ಪ್ರತಿಪಾದ ಕವೇ ಅನುಭವಸಾರವೆಂಬ ಈ ಪ್ರಕರಣವು, ಇದರ ಅರ್ಥವನ್ನು ಬ್ರಹ್ಮದಲ್ಲಿ ಅನ್ವಯಿ ಸುವದೇ ಸಂಬಂಧವೆಂದು ತಿಳಿಯಬೇಕು. ಈ ಗ್ರಂಧದಲ್ಲಿ ಅಧಿಕಾರಿ, ಸಂಬಂಧ, ವಿಷಯ, ಪ್ರಯೋಜನ ಎಂಬ ಅನುಬಂಧ ಚತುಷ್ಟಯವಿರುವದರಿಂದ ಇದು ಶಾಸ್ತ್ರ ವೆಂದು ಶಿಷ್ಟರಿಂದ ಪರಿಗ್ರಹಿಸಲ್ಪಡುವದಕ್ಕೆ ಯೋಗ್ಯವಾದದ್ದೆಂದು ತಾತ್ಪರ್ಯ, ೧೦ ಗುಣಜ್ಞರಾದವರು ಈ ಗ್ರಂಥದಲ್ಲಿ ವಿರುದ್ದ ಸಂಧಿ, ಅರಿಸಮಾಸ ಮೊದಲಾದ ದೋಷಗಳ ಮೇಲೆ ದೃಷ್ಟಿಯಿಡಕೂಡದು, ಯಾಕಂದರೆ- ಹಂಸಪಕ್ಷಿಯು ಜಲಮಿ ಶ್ರವಾದ ಹಾಲನ್ನು ಸ್ವೀಕರಿಸದೆ ಬಿಡುವದೇ? ನೀರು ಬೆರೆದ ಹಾಲನ್ನು ಹಂಸಪಕ್ಷಿಯ - ಮುಂದೆ ಮಡಗಿದರೆ ಅದು ನೀರಿನ ಅಂಶವನ್ನು ಬಿಟ್ಟು ಹಾಲನ್ನೇ ತೆಗೆದುಕೊಳ್ಳುವ ಹಾಗೆ ಸತ್ಪುರುಷರಾದವರು ಈ ಗ್ರಂಥದಲ್ಲಿ ಕವಿತಾದೋಷಗಳಿದ್ದರೂ ಅವುಗಳನ್ನು ಗಣನೆಗೆ ತಾರದೆ ಮುಖ್ಯವಾದ ವಿಷಯವನ್ನೇ ಗ್ರಹಿಸಬೇಕೆಂದು ಭಾವವು. ಈ ಪ್ರಕರಣದಲ್ಲಿ ಅಭಿಪ್ರಾಯವೇ ಮುಖ್ಯವಾದದ್ದು ; ಮಾತುಗಳ ಸೇರುವೆ, ಪ್ರಸ ಮೊದಲಾದವುಗಳಿಲ್ಲದಿದ್ದಾಗ್ಯೂ ಆಭರಣಗಳನ್ನು ತೆಗೆದು ಅಂಗಸಂಗಕ್ಕೆ ಬಂದ ವಲ್ಲಭೆಯ ಹಾಗೆ ಮನೋಹರವಾಗಿಯೇ ಇರುವದು.