ಪುಟ:ಅರಮನೆ.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೦ ಅರಮನೆ ಅರಮನೇಯಾ.. ಯಿಡೀ ಪಟ್ಟಣವನ್ನು ಕಸಬಾರಿಗೆ ಮಾಡಿಕೊಂಡಿರೋದು ಯಿದೇ ಅರಮನೇಯಾ.. ರೆಟ್ಟೇಲಿ ತಾಕತ್ತಿಲ್ಲದಿದ್ದರೂ ಹೊಟ್ಟೇಲಿ ಯೇಳುಕೊಪ್ಪರಿಗೆ ಸಿಟ್ಟು ಸೆಡವು ಮಿಟುಕೊಂಡಿರೋದು ಯಿದೇ ಅರಮನೇಯಾ.. ಯಿಡೀ ಪಟ್ಟಣವನ್ನು ಅಳಂಗಿ (ಚಳಿನಿವಾರಣಾರವಾಗಿ ಕಸಕಡ್ಡಿ ಸೇರಿಸಿ ಹಚ್ಚುವ ಬೆಂಕಿ) ಮಾಡಿಕೊಂಡು ಚಳಿ ಕಾಯಿಸ್ತಿರೋದು ಯಿದೇ ಅರಮನೇಯಾ. ಮುಂಜಾಲಿದ್ದರೂ ಚೆಂಜೀಕಿಲ್ಲದಿದ್ದರೂ, ಚೆಂಜೀಕಿದ್ದರೂ ಮುಂಜಾನೆಗಿಲ್ಲದಿದ್ದರೂ ಬಡಿವಾರ ಮಾಡುತ್ತಿರೋದು ಯಿದೇ ಅರಮನೇಯಾ.. ಕುಂಡಿ ಸುಟ್ಟ ಬೆಕ್ಕಿನಂಗಿದ್ದರೂ ಹುಲಿಯಂಗ ಘರಜನೆ ಮಾಡುತ್ತಿರೋದು ಯಿದೇ ಅರಮನೇಯಾ .. ಅಲಲಲಾ......... ಕಜ್ಜಿ ಪುಳ್ಳೆ ಕೂಸಿನ ಗಡುತರ ಯಿರೋ ಯಿದೇ ಮೀಟೊಂದು ಧಿಮಾಕು ತೋರಿಸಲಾಕ ಹತ್ತೇತಿ.. ಯಿನ್ನು ಹರಪನಹಳ್ಳಿ ಅರಮನೆ ಹಾಂಗಿದ್ದಿದ್ದಲ್ಲಿ ಯಿನೇಟು ದಿಮಾಕು ತೋರಿಸುತ್ತಿತ್ತೋ? ಪುಣ್ಯಾತುಮ ಥಾಮಸು ಮನುರೋ ಸಾಹೇಬ ಯಿದರಾಸೀನ ಮುಟ್ಟುಗೋಲು ಹಾಕ್ಕೊಂಡು ಯಿದರ ಟೊಂಕ ಮುರಿದ, ಸರೇ ಸರೆ.. ವಂದಕಿದ್ದರೂ ವಂದಕಿಲ್ಲದಂಗ ಮಾಡಿ ರಾಜಪರಿವಾರದ ಮಂದಿ ಬೀದೀಲಿ ಅಡ್ಡಾಡೋ ಹಾಂಗ ಮಾಡಿದ ಸರೇ ಸರೆ.. ಯಲ್ಲಾಂದರ ಯವರು ಪಟ್ಟಣದ ಮಂದೀನ ಸುಮ್ಮಕ ಬಿಡುತ್ತಿದ್ದರಾ? ಹರಕೊಂಡು ಬುಕ್ಕಿಬಿಡುತ್ತಿದ್ದರು.. ಅಲಲಾಲ...... ... ಅಲಲಲಾ ಕಾಟನಾಯಕಾ.... ಅಲಲಲಾ ಭಯಮಾಂಬೇs... ಅಲಲಲಲಾ ಪುವ್ವಲ ರಾಜ ವಮುಸಸ್ಥರಾ.. ಅಲಲಲಾss.. ನಮ್ಮನ್ನು ನಮ್ಮ ಪಾಡಿಗೆ ಸುಮ್ಮಕ ಬಿಡಿರಿ ಯಜಮಾನರುಗಳಿರಾ.. ನಮ್ಮ ಕಷ್ಟನಷ್ಟ ಕಾಗದ ಯೀ ಅರಮನೆ ಯಿದ್ದರೆಷ್ಟು ಸ್ವಾದರೆಷ್ಟು..? ಯಂಥ ಬರಗಾಲ ಬಂದರೂ ನಾವು ಗುತ್ತಿಗೆ ಕಟ್ಟುತ್ತಿರಲಿಲ್ಲೇನು? ಸಯೀಕರನು ಕಳುಸಿ ವದ್ದು ಬಡದೂ ನಮ್ಮಿಂದ ತೆರಿಗೆ ವಸೂಲಿ ಮಾಡುತ್ತಿರಲಿಲ್ಲೇನು ಯಿವರು? ಯಿವರು ತಿಂಥಿರೋ ಕೂಳು ನಮ್ಮದು, ಯವರು ವುಟುಕೊಂಡಿರೋ ಅರಿವೆ ನಮ್ಮದು, ಯವರ ಮಮಾಲ ಲಕಲಕ ಹೊಳೀತಿರೋ ವಡವೆ ವಸ್ತ್ರ ನಮ್ಮದು, ಯಿವರ ತಿಜೋರಿಲಿರೋ ರೊಕ್ಕ ನಮ್ಮದು, ಯಿವರ ಅಗೇವುಗಳಲ್ಲಿರೋ ದವಸ ನಮ್ಮದು.. ಯಿವರ ಹೆಂಡಂದಿರ ಹಣೇಲಿರೋ ಕುಂಕುಮ ಬೊಟ್ಟು ಮಾತ್ರ... ಯೇ ಅರಮನೇನ ನಾವು ಸುಮ್ಮಕ ಬುಡೋದಿಲ್ಲ...