ಪುಟ:ಅರಮನೆ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ

೧೨೯


ಅರಮನೆವಳಾಗಿರೋರನು ನಾವು ಸುಮ್ಮಕ ಬಿಡೋದಿಲ್ಲ..
ಮೊದಲೆ ನೊಂದು ಪಿತ್ಥ ಕೆರಳಿಸಿಕೊಂಡಿದ್ದ ಮಂದಿ ಅದು.
ತಲಾಕೊಂದೊಂದು ಅನ್ನೋದು ಅಂತು, ಅನ್ನುತ್ತಲ್ಲೇ ಯಿತ್ತು. ಸಿಟ್ಟು ಸೆಡವು
ಅಂಬೋ ಮೋನ್ಮಾಮವನ್ನು ಹೇಳಿಕೊಟ್ಟಿರುವಾಕೆ ಸಾಂಬವಿ.. ಯೀಗ ಆಕೆ
ಯಿಲ್ಲದಾಳಂದರ ಅದಾಳ ಧರುಮ ಕರುಮ, ನ್ಯಾಯ ಅನ್ಯಾಯಕ್ಕೆಲ್ಲ ಆಕೆಯೇ
ಬಾದ್ಯಸ್ಥಳು.. ಆ ಮಾತಾಯಿ ನೊಂದು ಬೆಂದಿರೋ ಮಂದಿ ಕಮ್ಮಿಯಿಂದ
ಯೇನೇನು ಮಾಡಿಸುತಾಳೋ? ತಾವೇನು ಗತಿ ಆತೀಮೋ? ಅರಮನೆ ಯೇನು
ಗತಿ ಆತದೋ? ಯಂಬ ಚಿಂತೆಯೊಳಗೆ ಬೇಯುತ್ತ, ಗಡಗಡ ನಡುಗುತ್ತ
ವಂದು ತುತ್ತು ಬಾನ ಮುಟ್ಟದೆ, ಎಂದು ಗುಟುಕು ನೀರನ್ನು ಬಾಯೊಳಗೆ
ಹಾಕ್ಕಂಬದೆ ಅರಮನೆ ಯೊಳಗೆ ಅಯ್ತು ಮಂದಿ ಘನ ಸೊಸ್ತೇರು ತಮ್ಮ
ಅತ್ತೆ ಭಯಮಾಂಬೆಯ ಕಡೇಕ, ತಮ ಗಂಡ ಪಾಂಚಾಲನ ಕಡೇಕ ಬೊಟ್ಟು
ಮಾಡಿ ತೋರಿಸುತ್ತಿರು ವಾಗ್ಗೆ ಬಾಯಿಗೆ ಬಂದದ್ದನ್ನು ಅಂದಾಡುತ್ತಿರುವಾಗೆ..
ತಾವು ತಮ ತಮ್ಮ ತವರು ಮನೆಗೆ ಹೊಂಟೋತೀವಿ ಯಂದಾಡುತ್ತಿರುವಾಗ್ಗೆ..
ಯಿಡೀ ಪಟ್ಟಣವನ್ನು ಲಟ್ಟಿಗೆಯೊಳಗೆ ಮುರಿಯುತ್ತಿರುವಾಗ್ಗೆ, ಅರುವಾಚೀನ
ಪಿಕದಾನಿ ಯೊಳಗೆ ಲಾವಾರಸ ಕೊತಕೊತನೆ ಕುದಿಯುತಿರುವಾಗ್ಗೆ ಅದು
ವುಗಳ ಬಂದವರ ತುಟಿಗಳಿಗೆ ಬರೆ ಯಳೆಯುತಿರುವಾಗ್ಗೆ, ಅದು ಮುಟ್ಟ
ಬಂದವರ ಬೆರಳುಗಳನ್ನು ಸುಡುತ್ತಿರುವಾಗ್ಗೆ.. ವಟ್ಟಿನಲ್ಲಿ ಯಲ್ಲ ಅಯೋಮಯ
ವಾಗಿರುವಾಗ್ಗೆ....
ಯತ್ತ ಹೊರಗಡೀಕೆ ಸಿಟ್ಟಿನ ಕಯ್ಯಗೆ ಬುದ್ದಿ ಕೊಟ್ಟಿದ್ದ ಮಂದಿ ಯಾವ
ಮಾದಿಯಿಂದಲೋ ತಮ್ಮ ತಮ್ಮ ಕಯೊಳಗೆ ಹಾಕಿ, ಸಲಿಕೆ, ಗುದ್ದಲಿಯೇ
ಮೊದಲಾದ ಕ್ರುಷಿಯ ಆಯುಧಗಳನ್ನು ಹಿಡಕೊಂಡು ವಕ್ಕೊರಲಿನಿಂದ
ಸಿವನ್ನಾಮ ಪಾರೊತೀಪತಿ ಹರ ಹರ ಮಾದೇವು ಯಂದನ್ನಲಿಕ್ಕೂ
ಲಚುಮವ್ವನ ತೋಪಿನಿಂದ ಸೋ ವರುಸಗಳ ಹಿಂದೆ ಹುಟ್ಟಿದ್ದಂಥ
ಜಡೇತಾತನು ಬ್ರೆಮಾಸ್ತರದಂತೆ ಸುಯ್ಯಂತ ಬಂದು ಅರಮನೆಯ ಮೋಟು
ಗ್ವಾಡೆ ಮ್ಯಾಲ ನಿಂತು ತನ್ನೇಳು ಮಾರುದ್ದದ ತಲೆಗೂದಲನ್ನು ಸಡೆದು
ನಿಗಿನಿಗಿ ವುರಿಯುತ್ತ “ಯಲೆರಲೋ ನರಮಾನ್ನವರುಗಳಿರಾ.. ಕೋಪತಾಪದಿಂದ
ತ್ರಿಷಷಿ«ಪುರಾತನ ರಾಕ್ಷಸರುಗಳಾಗಿ ಬಿಟ್ಟಿರುವಿರಲ್ಲಾ.. ಅರಮನೆಗೆ ಪೆಟ್ಟಿಟ್ಟಲ್ಲಿ
ಆದಿಸಗುತಿ ನಿಮ್ಮನ್ನು ಸುಮಕ ಬಿಡುವಳೆಂದು ಕೊಂಡಿ ರುವಿರೇನೋ
ಮೂಢರುಗಳಿರಾ.. ಯಿದು ಅರಮನೆ ಮಾತ್ರವಲ್ಲ ಕಣರಪ್ಪಾ.. ಅರಮನೆ