ಪುಟ:ಅರಮನೆ.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೨೧ ಪಟ್ಟವನ್ನೇರಿರುವ ಗಳಿಗೆ ಸುಭದಾಯಕಯಿರುವುದು, ರಾಜಯೋಗ ಪ್ರದಾಯಕ ಯಿರುವುದು ಯಂದು ಜೋತಿಷ್ಯ ಸಾಸ್ತರವ ನುಡಿದರೆಂಬಲ್ಲಿಗೆ ಸಿವಸಂಕರ ಮಾದೇವಾ......... ಯವ್ವನದರಮನೆಯ ಹೊಸ್ತಿಲನ್ನು ಯೀಗ ತಾನೆ ದಾಟಿರುವ ತನ್ನ ವಮುಸ ಕುಡಿಯು, ತನ್ನ ಪಂಚಪ್ರಾಣವು ಯೇನು ತಿಂಬಬೇಕು? ಯೇನು ಕುಡಿಯಬೇಕು ಯಂದು ಯೋಚಿಸಿದ ತಾಯಕ್ಕ ವಣದ್ರಾಕ್ಷಿ, ಗೋಡಂಬಿ, ಬಾದಾಮು, ಮುತ್ತತ್ತಿ, ಖರಜೂರ, ಕೆನೆತುಪ್ಪ ಕೆನೆಮೊಸರು, ನೊರೆವಾಲು, ಬಂಗಾರುಮುಡಿ ಅಕ್ಕಿ ಜವೆಗೋದಿ ಯವೇ ಮೊದಲಾದ ದುಬಾರಿಯೂ, ಪುಷ್ಟಿದಾಯಕವೂಆದ ದಿನಿಸನ್ನು ದೂರದ ದೇಸಗಳಾದ, ದಾವಣಗೆರೆ, ರಾಣಿ ಬೆನ್ನೂರುಗಳಿಂದ ಗುಟ್ಟಾಗಿ ತರಿಸಿಕೊಂಡದ್ದು ಯಾಕಂದರ.. ಅದಕ್ಕssss.. ಆದರ ಯೀ ಯಲ್ಲ ಮೇರುಪಾಡು ಯೇಸು ದಿವಸಗಳ ಮಟ ನಡೆಯಲಕಾದೀತು? ಚಂದ್ರಾಮನಿಂದ ಬೆಳದಿಂಗಳನ್ನು ತಡೆಯಲಕಾದೀತಾ? ಪುಷ್ಪರಾಜಿಯಿಂದ ಪರಿಮಳಕ್ಕಡ ಗೋಡೆ ಯಬ್ಬಿಸಲಕಾದೀತಾ? ರುತುಮತಿಗೊಂಡ ಸರೀರದ ಮ್ಯಾಲ ವುಬ್ಬು ತಗ್ಗುಗಳು ಮೂಡಧಾಂಗ... ಸಿವನೇ ಅದೆಲ್ಲ ಆಗದ ಮಾತು... ಚಿನ್ನಾಸಾನಿ ಫಲಾನ ದಿವಸದಂದು ಹಿರೇಮನುಶೋಳಾದಳೆಂಬ ಸಂಗತಿಯು ಪಟ್ಟಣದ ಕಿವಿಯೊಳಗ ಪಾನಕದ ಧಾರೆಯಾಗಿ ಸುರಿಯಿತು. ಯಿಡೀ ಪಟ್ಟಣವು ತಾನೇ ರುತುಮತಿ ಗೊಂಡೋಪಾದಿಯಲ್ಲಿ ಸಂಭ್ರಮಿಸಿತೆಂಬಲ್ಲಿಗೆ ಸಿವಸಂಕರ ಮಾದೇವಾss ಅತ್ತ ಹರಪನಹಳ್ಳಿ ಸೀಮೆ ವಳಿತದೊಳಗೆ ತೆಲಗಿ, ಗುಂಡುಗತ್ತಿ, ಮಸುಲವಾಡ, ಅಲಗಿಲವಾಡ, ಚಿರಸ್ಕಳ್ಳಿ ಅರಸಿಕೆರೆ, ಕಂಬತ್ತಳ್ಳಿಯೇ ಮೊದಲಾದ ಕಾಸಿಗೊಂದು ಕೊಸರಿಗೊಂದರಂತಿದ್ದ ಸಮುಸ್ಥಾನಗಳ ರಾಜರುಗಳನ್ನು ನೋಡಿ ಮೊಸರುವಳ್ಳಿಗಳೇ ನಾಚಿಕೊಳ್ಳತೊಡಗಿದ್ದವು ಸಿವನೇ.. ಸಿಕ್ಕವರಿಗೆ ಸಿವಲಿಂಗ ಅಂತ ತಾವೇ ವಂದುಕಡೇಲಿಂದ ತಮ್ಮ ತಮ್ಮ ಪ್ರಜೆಗಳನ್ನು ಮೇಯಲಾರಂಭಿಸಿದ್ದರು ಸಿವನೇ.. ಕಳ್ಳರಿಗ್ಯಾಕೆ ಪಾಲು ಕೊಡಬೇಕೆಂಬ ಲೆಕ್ಕಾಚಾರದಿಂದ ಕೆಲ ರಾಜರು ರಾತ್ರಿಯಾದೊಡನೆ ಬಂದಿಖೋಟು ಮುಖವಾಡ ಧರಿಸಿ ಖುದ್ದ ಕಳುವಿಗೆ ಹೋಗಲಾರಂಭಿಸಿದ್ದರು ಮುರಹರನೆ.. ತಮ್ಮಿ ವಾಮಮಾರಕ್ಕೆ ಅನುಕೂಲವಾಗುವಂತೆ ತಮ್ಮ ತಮ್ಮ ರಾಜ್ಯಾಂಗದ ಕಾನೂನುಗಳನ್ನು ತಿದ್ದುಪಡಿ ಮಾಡಿ ಪ್ರಜೆಗಳ ಮ್ಯಾಲ ಯೇರಲ ಕಾರಂಭಿಸಿದ್ದರು 'ರಾಜಾ ಪ್ರತ್ಯಕ್ಷದೇವತಾ'ಯ ಸಿಲಾಪಲಕಗಳನ್ನು ತಮ್ಮ ತಮ್ಮ ರಾಜ್ಯಗಳ ಬೀದಿ