ಪುಟ:ಅರಮನೆ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xvi

ಸದಾ ಸಂಚರಿಸುತ್ತಿದ್ದ, ದುಡಿಯುತ್ತಿದ್ದ ಮನ್ರೋ ಪ್ರಕತಿ ಸಣ್ಣ-ಪುಟ್ಟ ರಾಜ್ಯ-ಪಾಳೆಯ ಪಟ್ಟುಗಳಲ್ಲೂ ಆಯಾಯ ಪಾಳಯಗಾರರಿಂದ/ಜಮೀ೦ದಾರರಿಂದ ಭೂಮಿಯನ್ನು ವಶಪಡಿಸಿಕೊಂಡು ಸ್ಥಳೀಯ ಭೂಮಿಹೀನರಿಗೆ ಹಂಚುತ್ತಿದ್ದನು; ತನ್ನ ಕೈಕೆಳಗಿನ ಬ್ರಿಟಿಷ್‌ ಅಧಿಕಾರಿಗಳಿಗೆ ಪ್ರಾಂತಿಯ ಭಾಷೆ-ಸಂಸ್ಕೃತಿಗಳನ್ನು ಕಲಿಯಲೇಬೇಕೆಂದು ನಿರ್ಬಂಧಿಸುತ್ತಿದ್ದನು; ಪ್ರತಿ ಗ್ರಾಮದಲ್ಲಿಯೂ ಕನ್ನಡ/ತೆಲುಗು ಇತ್ಯಾದಿ ಸ್ಥಳೀಯ ಭಾಷೆಗಳ ಕಲಿಕೆಗೆ ಶಾಲೆಗಳನ್ನು ತೆರೆಯುತ್ತಿದ್ದನು; ...ಮನ್ರೋನ ಇವೆಲ್ಲಾ ಗುಣಗಳನ್ನೂ ಕೃತಿ ವಿವರವಾಗಿ ದಾಖಲಿಸುತ್ತದೆ. ಮನ್ರೋ ಸತ್ತಾಗ ಹಳ್ಳಿಯ ಅಶಿಕ್ಷಿತ ಮುದುಕಿಯೊಬ್ಬಳು ಅವನ ಇಡೀ ಬದುಕಿನ ಸಾಧನೆಗಳನ್ನು ಹೀಗೆ ಗುರುತಿಸುತ್ತಾಳೆ: “ಮುದ್ಯೋರಿಗೆ ಮಗನಾಗಿದ್ದನಲ್ಲಾ... ದಿಕ್ಕು ದೆಸೆಯಿಲ್ಲದೇವಕ್ಕೆ ತಂದೆಯಾಗಿದ್ದನಲ್ಲಾ.. ವುಳುಮೆ ಮಾಡಲಕ ಭೂಮಿಸಾಮಿ ಕೊಟ್ಟ, ದುಡಿಯೋ ಕಯ್ಯಿಗಳಿಗೆ ಕಸುವು ಕೊಟ್ಟ.. ಊರೂರಿಗೊಂದೊ೦ದು ಬಾವಿ ತೋಡಿಸಿ ಕುಡಿಯೋದಕ್ಕೆ ಸೇದ್ಯವಿಗೆ ನೀರು ಕೊಟ್ಟ ಮರಗಿಡ ನೆಟ್ಟು ಕುಂಡರಲಕ ನೆಳ್ಳು ಕೊಟ್ಟ" (ಪುಟ ೫೩೫). ಈ ಕಾರಣದಿಂದಲೇ ಅವನು ಜನಸಾಮಾನ್ಯರ ಹೃದಯದಲ್ಲಿ 'ಮಂಥೋಳ ಸಾಹೇಬ', 'ಮಂಡ್ರಪ್ಪ ದೊರೆ', 'ಮಂಡ್ರಯ್ಯ ದೇವರು' ಇತ್ಯಾದಿ ಹೆಸರುಗಳಿಂದ ಶಾಶ್ವತವಾಗಿ ನೆಲೆಸಿದ.

ಕೃತಿಯಲ್ಲಿ ವಸಾಹತುಶಾಹಿಯ ಒಂದು ಮುಖವನ್ನು ಮನ್ರೋ ಪ್ರತಿನಿಧಿಸಿದರೆ, ಎಡವರ್ಡ್, ಹೆನ್ರಿ, ಥಾಕರೆ, ರೆಬೇರೊ, ಪಾದ್ರಿಗಳು ಇತ್ಯಾದಿ ಅದರ ಇನ್ನೊಂದು ಮುಖವನ್ನು ಪ್ರತಿನಿಧಿಸುತ್ತಾರೆ. ಅವರಿಗೆಲ್ಲಾ ಇರುವ ಏಕಮಾತ್ರಗುರಿಂಹಿಂದರೆ ಹೆಚ್ಚು ಹೆಚ್ಚು ಭಾಗಗಳಲ್ಲಿ ಬ್ರಿಟಿಷ್‌ ಅಧಿಕಾರವನ್ನು ವಿಸ್ತರಿಸುವುದು ಮತ್ತು ಆ ಮೂಲಕ ಉನ್ನತೋನ್ಶತ ಪದವಿಗಳನ್ನು ಪಡೆಯುವುದು; ಅಥವಾ ಹೆಚ್ಚು ಹೆಚ್ಚು ಜನರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಪರಿವರ್ತಿಸುವುದು ಮತ್ತೆ ಕೆಲವು ಅಧಿಕಾರಿಗಳಿಗೆ ಭಾರತವೆಂದರೆ ಒಂದು ಸುಲಭವಾಗಿ ಕೊಳ್ಳೆಹೊಡೆಯಬಹುದಾದ ಅನಂತ ಭಂಡಾರ. “ತಮಗೆ ಮಾಂತರಿಕ ಸಗುತಿಯಿದ್ದಲ್ಲಿಯೀ ಪಟ್ಟಣದ ಮಂದಿಯನ್ನು ಪುಟ್ಟ ಪುಟ್ಟ ಗೊಂಬಿಗಳನ್ನಾಗಿ ಮಾಡದೌದಿತ್ತಲ್ಲ... ಬೆವರು ವಾಸನೆ ಸಹಿತ ಯಿವರನ್ನು ತಮ್ಮ ಗ್ರೇಟು ಬ್ರಿಟನ್ನಿಗೋ ಫ್ರಾನ್ಸಿಗೋ ಸಾಗಾಣಿಕೆ ಮಾಡಿ ಅಪಾರ ಹಣ ಸಂಪಾದಿಸಬಹುದಿತ್ತಲ್ಲ"(ಪುಟ ೫೧) ಎಂದು ಯಸಲೆ, ಬಿಸಲೆ ಮುಂತಾದವರು ವಿಷಾದಿಸುತ್ತಾರೆ.

ಈ ಸಂದರ್ಭದಲ್ಲಿ ಅರಮನೆ ಕಟ್ಟಿಕೊಡುವ ಅತಿ ಮುಖ್ಯ ಚಾರಿತ್ರಿಕ ಅಂಶವೆಂದರೆ ೧೮-೧೯ನೆಯ ಶತಮಾನಗಳಲ್ಲಿ ಹೇಗೆ ಮತ್ತು ಏಕೆ ವಸಾಹತುಶಾಹಿ