ಪುಟ:ಅರಮನೆ.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೮ ಅರಮನೆ ಜಮೀಂದಾರ, ಮಾಂಡಲೀಕ, ಸಾಮಂತ ಕಡೇಲಿಂದ ಯಕ್ಕಾ ನಿನ ಮಗಳು ರುತುಮತಿ ಆಗವಳ೦ತಲ್ಲಾ.. ತುತೇ ನಿನ ಮಗಳು ತ್ರಿಪುರಸುಂದರಿಯಂತವಳಂತಲ್ಲಾ.. ಆಕೆಯ ಸರೀರದ ಝಳ ಯಿಲ್ಲೀವರೆವಿಗೂ ಹೊಂಟು ಬಂದು ತಮ್ಮನ್ನು ಬಾಧಿಸಲಕ ಹತ್ತಯ್ಕೆ.. ಅನರವ್ಯ ರತುನವನ್ನು ಯೇಸು ದಿನಾಂತ ದಾಚಿಕೊಂಡಿರುತೀ.. ನಿನ್ನ ತೂಕದ ಬಂಗಾರ ಕೊಡುತೇವಿ.. ನೀನು ಹೂ ಅಂದರ.. ಯಂಬಿವೇ ಮೊದಲಾದ ವಕ್ಕಣಿಕೆಗಳುಳ್ಳ ಅಹವಾಲುಗಳು ವಂದರ ಹಿಂದೊಂದರಂತೆ ಬರತೊಡಗಿದವು. ಅವಕ್ಕೆಲ್ಲ ತಾನೇನಂತ ಜವಾಬು ಕೊಟ್ಟಾಳು? ತನ್ನ ಮಗಳ ತಂಟೆಗೆ ಬಂದೀರಾ ಜಾಕೆ ಯಂಬ ಯಚ್ಚರಿಕೆಯ ಮಾತನ್ನು ಹೊರತು. ಬಲಕುಂದಿ ಬಲರಾಮರೆಡ್ಡಿ ಹೊಟ್ಟೆಗೇನು ತಿಂಥಿರಬೌದು..? ನಿನ್ನ ಮಗಳನ್ನು ಅಪಹರಿಸುತ್ತೇನೆಂದು ಬೆದರಿಕೆ ಹಾಕುವುದೇನು? ವುತ್ತುನೂರಿನ ತ್ರಿಪುರಾಂತಕ ನಾಯಕ ಹೊಟ್ಟೆಗೇನು ತಿಂಥಿದ್ದಿರಬೌದು..? ಮನೆಗೆ ಮುತ್ತಿಗೆ ಹಾಕಿ ಚೆನ್ನಾಸಾನಿಯನ್ನು ಗೆದ್ದೊಯ್ಯುವುದಾಗಿ ಬೆದರಿಕೆ ಹಾಕುವುದೇನು? ತಾಯಕ್ಕಳಾದ ತಾನು ಕಣ್ಣನ್ನೆ, ಬಾಯಿಸನ್ನೆಯಿಂದ ಸಾಯಿರಾರು ಮಂದಿಯನ್ನು ಕಲೆ ಹಾಕಿ ಆಕ್ರಮಣದ ಹುಟ್ಟಡಗಿಸ ಬಲ್ಲಳೆಂಬ ಕಾರಣಕ್ಕೆ ಯಿವತ್ತಿನವರೆಗೆ ಯಾವುದೇ ಅಹಿತ ಘಟನೆ ನಡೆದಿಲ್ಲ. ಆದರೂ ತನ್ನ ಜಾಗರೂಕತೆಯಿಂದ ತಾನಿರುವುದಂತೂ ನಿಜ. ತನ್ನ ಬೀಜ ಸಂಜಾತೆ ಅಲ್ಲದಿದ್ದರೂ ಬುಗಡೆ ನೀಲಕಂಠಪ್ಪಗೆ ಚಿನ್ನಾಸಾನಿ ಅಂದರೆ ಪಂಚಪ್ರಾಣ. ಖುದ್ದ ಪಯಿಲ್ತಾನನೂ, ಸದರಿ ಪಟ್ಟಣದ ಹತ್ತಾರು ಗರಡಿಮನೆಗಳ ಮಾಪೋಷಕನೂ ಆಗಿರುವ ಆತನು ಸಮರೋಪಾದಿಯಲ್ಲಿ ಚಿನ್ನಾಸಾನಿಂರು ಕಾವಲನ್ನು ಸುಪದ್ದಿಗೆ ತೆಗೆದುಕೊಂಡಿರುವನೆಂದ ಮ್ಯಾಲ ಕೇಳುವುದೇನುಂಟು? ಯಿದರಿಂದಾಗಿ ಹೊರಗಿನ ಪ್ರಪಂಚವನ್ನು ನಿದ ನಿದಾನಿಕೀಲೆ ಕಡಕೊಳ್ಳುತ ತಾನಿರೋ ಮನೆಯೇ ಮದು ಅಗಾಧ ಪ್ರಪಂಚಯಂದು ಪರಿಭಾವಿಸುತ್ತ.. ನುತ್ಯ ಗಾಯನಗಳ ಕಲಿಕೆಯ ನಡುವೆ ಬ್ಯಾಸರವಾದಾಗಲೆಲ್ಲ ವುಪ್ಪರಿಗೆ ಮ್ಯಾಲೇರಿ ಭವಂತಿ ಜಾಲಂದರದ ಮೂಲಕ ದೂರದ ಗುಡ್ಡ ಆಕಾಸ, ಪಕ್ಷಿಗಳನ್ನೆಲ್ಲ ನೋಡುತ್ತ ಕಣ್ಣನ್ನಡಿ ಯೊಳಗ ತನ್ನ ಪ್ರತಿಬಿಂಬವನ್ನು ನೋಡಿ ತನಗೆ ತಾನೇ ಮರುಳಾಗುತ್ತ ಯಿನಾಕಾರಣ ಆಗೊಮ್ಮೆ ಹೀಗೊಮ್ಮೆ ನಿಟ್ಟುಸಿರು ಬಿಡುತ್ತ ಚಿನ್ನಾಸಾನಿಯು... ಅತ್ತತ್ತ ಹರಪನಹಳ್ಳಿ ವಳೀತದೊಳಗ ಪ್ರಜಾಕಂಟಕರಾಗಿ ಪರಿಣಮಿಸಿದ್ದ ರಾಜಾಧಿರಾಜರು ನಾಯಿ, ಬೆಕ್ಕುಗಳು ತಾವು ಹೆತ್ತಂತ ಕಂದಮ್ಮಗಳನ ತಿನ್ನುವುದಿಲ್ಲವೇನು? ಅದರಂತೆ ತಾತ್ಕಾಲಿಕವಾಗಿ ತಮ್ಮ ಪ್ರಜೆಗಳು ಹಸಿದಿರೋ