ಪುಟ:ಅರಮನೆ.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೪೧ ಅಮ್ಮನಕೇರಿಯ ಅವುಲಮ್ಮನಿಂದ ಭರತನಾಟ್ಯವ ಯಿಡಿಸಬೌದಿತ್ತಲ್ಲ.. ಕೂಡ್ಲಿಗಿಯ ತಿಲ್ಲಾನ ತಾಯಕ್ಕನ್ನ ಕರೆಸಿ ಗಾತ್ರಕಛೇರಿ ಯಿಡಿಸಬೌದಿತ್ತಲ್ಲ... ಅವೆಲ್ಲ ಬಿಟ್ಟು ಯಕಃಶ್ಚಿತ್ತ ಗೊಂದಲಿಗರ ಚವುಡೋಜಿ ಯಂಬ ಗೊರವರ ದುಂಡುಚಿಯನ್ನು ಯಿತಿಹಾಸ ಪ್ರಸಿದ್ದಾಲಂಕ್ರುತ ಅರಮನೆಯೊಳಗೆ ಬಿಟ್ಟುಕೊಳ್ಳುವುದೆಂದರೇನು? ಗೊಂದಲಿಗರ ಆಟಪಾಟಗಳಿಂದ ಗತಲೋಕವಾಸಿಗಳಾಗಿರೋ ಮೂರುವಿಕ ರಾಜ ಮಾರಾಜರ ಕಿವಿಗಳನ್ನು ಮಯ್ಲಿಗೆ ಮಾಡುವುದೆಂದರೇನು? ಬ್ಯಾಡ ದೊರೆಯೇ ಬ್ಯಾಡ, ಜಾನಪದರ ಆಕಳಿಕೇನ ತಡಕೊಳ್ಳೋ ತಾಕತ್ತಿಲ್ಲದ ಯೀ ಅರಮನೆಯು ಯಿನ್ನು ಗೊಂದಲಿಗರು ಹಾಡಿದ ರಂದರ ವುಸುರುಗಟ್ಟಿ ಸಾಯ್ತದss ಯಂದು ತಕರಾರೆತ್ತಿದ್ದಕ್ಕೆ ಜಾಲಿ ಮಂಚಯ್ಯ ನಾಯಕನು “ನಮ್ಮಿ ಅರಮನೆಗೆ ಮೂತ್ರದೊಳಗೆ ಮೀನು ಹುಡುಕುವ ಸ್ಥಿತಿವುಂಟಾಗಿರುವುದರಯ್ಯಾ.. ಕಥಕ್ಕಳಿ ಆಡಿಸಿದರ ಕಡಕೊಂಡು ಬೀಳೋ ಹಂಗಯ್ತಿ.. ಭರತನಾಟ್ಯದ ಗೆಜ್ಜೆ ಸಬುದಕ್ಕೆ ಗಾಭರಿ ಆಗೋ ಹಂಗಯ್ತಿ.. ಗಾತ್ರಕಛೇರಿಯ ಗಾಯನದಲೆಗುಂಟ ತೇಲಿ ಹೇಗೋ ಹಂಗ.. ಬೀಣೆ, ಮುದಂಗ, ಚಂಡಕ, ತ್ರಿವಳಿ, ಮುರಜಗಳಂಥ ವಾದ್ಯಗಳ ಸಬುಧಕ್ಕೆ ಗಡಗಡಾಂತ ನಡುಗುವ ಹಂಗಯ್ತಿ.. ಯೇನಾರ ಯಿದು ತಡಕೊಳ್ಳೋದ ಯಿದ್ದರ ಸಂಬಾಳ, ಚವುಡಿಕೆಗಳಂಥ ವಾದ್ಯಗಳನ್ನು ಮಾತ್ರ.. ಚವುಡೋಜಿಯ ಕಂಠದ ಕೆಳ ಅಂತಸ್ತಿನ ದೊನಿಯನ್ನು ಮಾತ್ರ.. ಪೂರುವಾಪರ ಯೋಚನೆ ಮಾಡೀಯೇ ಯಿದನು ಮೇರುಪಾಟು ಮಾಡಿದ್ದೀವಿ.. ಯಿದಕ ಅಡ್ಡಗಾಲು ಹಾಕಿದಿರಂದರ ಮೂರು ಅರಮನೆಯೊಳಗೆ ಬಂದೀತು, ಅರಮನೆಯು ಮೂರೊಳೀಕ್ಕೆ ಹೋದೀತು. ಕಣಸಿನ ಕಜ್ಜಾಯಕ್ಕಿಂತ ನಣಸಿನ ನವಣಕ್ಕೆ ಬಾನವೇ ಯೇಟೋ ವಾಸಿ ಕಣರಪ್ಪಂದಿರುಗಳಿರಾss ನೀವೂನಿಮ್ಮ ಕಯಾದೋಟು ಕೊಟ್ಟು ಗೊಂದಲಿಗರ ಆಟ ನೋಡಿ ರಪ್ಪಂದಿರುಗಳಿರಾ” ಯಂದು ಮುಂತಾಗಿ ಪರಿಪರಿಯಿಂದ ಹೇಳುತ ಅವರನು ವಂದು ದಾರಿಗೆ ತಂದನು. ಯೀ ಆಟ ನೋಡೋದುರ ಮೂಲಕ ಪ್ರಜೆಗಳು ತಮ್ಮರಮನೆಂರು ಬುನಾದೀ ಕಲ್ಲುಗಳಾಗಬೇಕೆಂದು ಸಾಮುಸುಕ್ರುತಿಕ ಯಭಾಗದೋರು ಭರರಿ ಪ್ರಚಾರ ಮಾಡುತಃ ಮಾಡುತss ಯಿತ್ಯ ಗೊಂದಲಿಗರ ಚವುಡೋಜಿ ಮತ್ತಾತನ ಹೆಂಡರು ಮಕ್ಕಳನ್ನು ಕಯ್ಯೋಳಗೆ ಕಿಲುಬುವ ಕಾಸಿಲ್ಲದ ಸುಂಕ ವಸೂಲಿ ಮಾಡುವ ಚವುಗಲೆಯವರ ಬಯಲು ಬಂಧನದಲ್ಲಿದ್ದರು. ಅವರ ಮಗ್ಗುಲಿದ್ದ ಚೀಲವು ಆತೂರು ರಾಜ, ಯೇವುರ ರಾಜ ಕೊಟ್ಟಿದ್ದ ಪ್ರಮಾಣ ಪತ್ರಗಳಿಂದ ತುಂಬಿ ತುಳುಕಾಡುತಲಿತ್ತು.