ಪುಟ:ಅರಮನೆ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xvii

ಮತದ್ರೋಹಿಯಾದ ಮನ್ರೋ ಸಾಯಲೆಂದು ಉಗ್ರಹೋಮಗಳನ್ನು ಮಾಡುವ ಅಗ್ರಹಾರಗಳ ದೀಕ್ಷಿತರು; ಒಡವೆಗಳನ್ನು ಧರಿಸಿದ ರಾಜಮಾತೆಯ ಹೆಣವನ್ನೇ ಕಳವು ಮಾಡುವ ಜೋರಾಗ್ರಣಿಗಳು; ... ಇಂತಹ ಹತ್ತೈವತ್ತು ವಿವರಗಳ ಮೂಲಕ, ಘಟನೆಗಳ ಮೂಲಕ, ವಸಾಹತುಶಾಹಿಯ ಮೊದಲ ಘಟ್ಟದ ಗ್ರಾಮೀಣ ಭಾರತದ ಪ್ರಕಿಯೊಂದು ನಾಡಿ ಮಿಡಿತವನ್ನೂ ಕುಂವೀ ಈ ಕೃತಿಯಲ್ಲಿ ಸೆರೆ ಹಿಡಿಯುತ್ತಾರೆ, ಓದುಗರಿಗೆ ಕೇಳಿಸುತ್ತಾರೆ. ಹೇಗೆ “ವರ್ತವರಾನದ ಜಗಲಿ ಮ್ಯಾಲಿಂದ ಭೂತಕಾಲವನ್ನು ಕದಲಿಸಲಾಗದ" ಗ್ರಾಮೀಣ ಭಾರತ ಬ್ರಿಟಿಷ್‌ ಆಳ್ವಿಕೆಯನ್ನು ಎರಡೂ ಕೈಗಳಿಂದ ಸ್ವಾಗತಿಸಿತು ಎಂಬುದನ್ನು ಅನ್ಯಾದೃಶವಾಗಿ ಚಿತ್ರಿಸುತ್ತಾರೆ.

೨. ಧಾರ್ಮಿಕ ಆಂತಾಮು : ಕೃತಿಂತು ಒಂದು ಆಂತತಾಮು ವಸಾಹತುಶಾಹಿಯ ಆಗಮನವಾದರೆ, ಅದರ ಮತ್ತೊಂದು ಪ್ರಮುಖ ಆಯಾಮ ಪರಂಪರಾಗತ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳು... ಕೃತಿಯ ಪ್ರಾರಂಭದಲ್ಲಿಯೇ ಈ ಆಯಾಮವನ್ನೂ ಕೃತಿಕಾರರು ನಮಗೆ ಪರಿಚಯಿಸುತ್ತಾರೆ. ಕುದುರೆಡವು ಪಟ್ಟಣದಲ್ಲಿ ಅರಮನೆಯಲ್ಲಿ ಪೀಕದಾನಿ ಹಿಡಿಯುವ ಮೂಳೆಚಕ್ಕಳಗಳ ಓಬಯ್ಯ ಎಂಬವನ ದೇಹವನ್ನು ದೇವಿ ಸಾಂಭವಿ ಪ್ರವೇಶಿಸಿ ಅದನ್ನು ತನ್ನ ಪಸತಿಯನ್ನಾಗಿ ಮಾಡಿಕೊಳ್ಳುತ್ತಾಳೆ(ಇಲ್ಲಿಂದ ಮುಂದೆ ಓಬಯ್ಯನನ್ನು 'ವಸ್ತಿ' ಎಂದೇ ಕೃತಿಯಲ್ಲಿ ಕರೆಯಲಾಗುತ್ತದೆ). ಕಥಾನಕವು ಬೆಳೆದಂತೆ, ಈ 'ಪವಿತ್ರವಸ್ತಿ'ಯ ಮಹಾತ್ಮೆ, ದೇವಿ ಸಾಂಭವಿಯನ್ನು 'ಹೊಳೆಗೆ ಹೊಂಡಿಸುವ' ಅದ್ಧೂರಿಯ ಆಚರಣೆ, ಜಾತ್ರೆಯ ದಿನದಂದು ಅವಳ ಪ್ರೀತ್ಕರ್ಥವಾಗಿ ಆಗುವ ಅಗಾಧ ಪ್ರಾಣಿಬಲಿ ಮತ್ತು ಇತರ ಆಚರಣೆಗಳು, ಅನ೦ತರ ಸಾಂಭವಿಗೆ ಮಕ್ಕಳನ್ನಾಡಿಸುವ ಆಸೆ ಮತ್ತು ಕೊನೆಗೆ ಓಬಯ್ಯನೇ ಅವಳ ಮಗುವಾಗುವುದು, ಆ ಮಗುವಿನ ಅನ್ನಪ್ರಾಶನ-ನಾಮಕರಣ-ಅಕ್ಷರಾಭ್ಯಾಸ ಇತ್ಯಾದಿ ಸ೦ಸ್ಕಾರಗಳು ಇವೆಲ್ಲವುಗಳನ್ನೂ ದೀರ್ಫ್ಥವಾಗಿ, ವಿವರವಾಗಿ, ಕೃತಿ ದಾಖಲಿಸುತ್ತದೆ. ಏಳೆ೦ಟು ಪುಟಗಳಷ್ಟು ದೀರ್ಫವಾಗಿರುವ ಜಾತ್ರೆಯ ವರ್ಣನೆ ಕಣ್ಣಿಗೆ ಕಟ್ಟುವಷ್ಟು ನೈಜವಾಗಿ ಬಂದಿದೆ.

ಈ ಬಗೆಯ ಧಾರ್ಮಿಕ ಆಚರಣೆ-ನಂಬಿಕೆಗಳ ಬಗ್ಗೆ ಲೇಖಕರ ನಿಲುವೇನು ಎಂಬ ಪ್ರಶ್ನೆಗೆ ಅಷ್ಟೇನೂ ಸರಳ ಉತ್ತರವಿಲ್ಲ. ಆಧುನಿಕ ಹಾಗೂ ಪಾಶ್ಚಿಮಾತ್ಯ ಮನ್ರೋ “ವರ್ತಮಾನವೇ ಯಿಲ್ಲದ ಯಿಂಡಿಯಾ ವುದ್ಧಾರವಾಗುವುದು ಹೇಗೆ?” ಎಂದು ಪದೇ ಪದೇ ಹಲುಬುತ್ತಾನೆ. ಆದರೆ ನಿರೂಪಕನ ನಿಲುವು ಸಂದಿಗ್ಧ. ಒಂದೆಡೆ ಅವನು “...ಯಲ್ಲಂದರಲ್ಲಿ ಭೂತಕಾಲದ ತೊಗಲ ಬಾವಲಿಗಳು ಜೋತಾಡುತಲಿದ್ದುದೇನು ಹೇಳಲಿ, ಸಿವನೆ” (ಪುಟ ೫೪೩) ಎಂದು