ಪುಟ:ಅರಮನೆ.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೦ ಅರಮನೆ ಮಾರುವೇಷದಲ್ಲಿ ಕಳುವು ಮಾಡುತಲಿದ್ದ ರಾಜರನ್ನು ಹಿಡಿದು ಕಂಭಕ್ಕೆ ಕಟ್ಟಿಹಾಕಿ ತಾವೇ ಹೊಡೆದು ಬಡಿದು ಶಿಕ್ಷಿಸುತ್ತಿದ್ದುದುಂಟು ಸಿವನೇ... ಕುಂತಳಪ್ರಾಂತದ ಅತ್ತಲಿನ ಸಮಾಚಾರ ನಂಬುವುದು ಹೆಂಗs? ನಂಬದಿದ್ದರೆ ಹೆಂಗss? ಅವನ್ನೆಲ್ಲ ಬೆದಕ್ಕೋತ ಹೋದರ ಕಲಿಕ್ಕಾಲದ ಬಗ್ಗೇನೇ ಬಲೂ ಬ್ಯಾಸರ ಬಾರದೆ ಯಿರದು ಸಿವನೇ.. ಅತ್ತಲಿನ ಸಮಾಚಾರ ಅಚ್ಚೇ ಕಡೇಕಃ ಯಿರಲಿ.. ಯಿಚ್ಚ ಕಡೇಕ ಅಂದರ.. ಕುದುರೆಡವು ಪಟ್ಟಣದೊಳಗ ಮಂದಿ.. ಯೇನು ತಮ ಕಣ್ಣೀರಿನಿಂದ ತಮ ಕಪಾಳವನ್ನು ಪ್ರಕ್ಷಾಳನ ಮಾಡಿ ಕೊಳ್ಳುತಾ ಯಿದ್ದರಲ್ಲ... ಅವರೆಲ್ಲ ಜಗಲೂರೆವ್ವನ ನೇತ್ರುತ್ವದಲ್ಲಿ ನಿಯೋಗ ತಮ್ಮೂರಿಗೆ ಮರಳಿದ ಲಗಾಯ್ತು ವಂದೊಂದು ಛಣವನ್ನು ವಂದೊಂದು ಕಡಲೆಕಾಳೆಂದು ಪರಿಗಣಿಸಿ ನಮಲಾಕ ಹತ್ತಿದ್ದರು.. ಅವರ ದ್ರುಸ್ಟೀಲಿ ಜಗಲೂರೆವ್ವ ಕೇವಲ ವಣುಮಗಳು ಮಾತ್ರವಾಗಿರಲಿಲ್ಲ.. ಆಕೆಯು ಆಪದ್ಭಾಂಧವಿ ಆಗಿಬಿಟ್ಟಿದ್ದಳು. ಆಕೆ ಕುರುತು ತಲಾ ವಂದೊಂದು ಕಥೆ ಕಟ್ಟಲಾಕ ಹತ್ತಿದ್ದರು, ಯಡ್ಡವರು ಸಾಹೇಬ ಯೀ ಛಣ ಬಂದಾನು, ಆ ಛಣ ಬಂದಾನು ಅಂತ ಜೀವವನ್ನು ಮುಟುಗೀಲಿ ಹಿಡಕೊಂಡು ಕಾಯಲಾಕ ಹತ್ತಿದ್ದರು.. ಜಾವ ಜಾವಕ್ಕೊಂದಾವರಿಯಾದರು ತಾವು ಕೂಡ್ಲಿಗಿ ಕಡೇಕ ಬಿದ್ದಿದ್ದ ದಿಕ್ಕಿನ ಕಡೇಕ ನೋಡದೇ ಯಿರಲಿಲ್ಲ.. ಆ ಕಡೆ ಯಿನಾ ಕಾರಣ ಯೇಳುತಲಿದ್ದ ಕೆಂಧೂಳನ್ನು ಕುದುರೆಗಳ ಖುರಪುಟಕ್ಕೆ ಹೋಲಿಸದೆ ಯಿರಲಿಲ್ಲ... ಮಾಮೂಲು ಮಂದಿಯ ಚಡಪಡಿಕೆ ವಂಥರಾ ಯಿದ್ದರ ಅರಮನೆ ಯೊಳಗಿನ ಚಡಪಡಿಕೇನೆ ಯಿನ್ನೊಂದು ಥರಾನೇ ಯಿತ್ತು. ಯಡ್ಡವರು ಸಾಹೇಬನೇ ಖುದ್ದ ಬರುತಿರುವನೆಂದ ಮ್ಯಾಲ ಅರಮನೆಯ ಗೋಡೆಗಳಿಗೆ ಸುಣ್ಣದ ರುಚೀನ ತೋರಿಸದೆ ಯಿರಲಿಕ್ಕಾದೀತಾ.. ನೂರಾರು ಮಂದಿಗೆ ಭತ್ವರಿ ಅನ್ನ ಸಂತರಣೆ ಮಾಡದೆಯಿರಲಿಕ್ಕಾದೀತಾ.. ಯಂಬ ವಾದ ಭಮ್ರಮಾಂಬೆಯದ್ದಾಗಿದ್ದರ, ಅರಮನೆಗೆ ಯಾಕ ಸುಣ್ಣ ಬಣ್ಣ ಬಳಿಸಬೇಕು? ಯಾಕ ಮೂರು ಮಂದಿಗೆ ಕೂಳು ಹಾಕಿಸಬೇಕು? ಬರುತ್ತಿರುವವ ಕುಂಪಣಿ ಸರಕಾರದ ಯಡ್ಡವರು ಕಣವ್ವಾ. ಅವನೇ ಅಲ್ಲೇನು ಅರಮನೆಯ ದವಡೆಯೊಳಗಿನ ಸಮಸ್ತ ಹುಲ್ಲುಗಳನ್ನುದುರಿಸಿ ಯಣಸಿಕೊಂಡೊಯ್ದು ಕುಂಪಣಿ ಸರಕಾರದ ತಿಜೋರೀಲಿ ಭರಿ ಮಾಡಿದ್ದು, ಅವನು ಬಂದು ಕಿಸಿಯೋದು ಅಷ್ಟರಲ್ಲೇ ಯಿರುವುದು ಯಂಬ ಯಿನ್ನೊಂದು ವಾದ ರಾಜಪರಿವಾರದ ವುಳಿಕೆ ಸದಸ್ಯರದಾಗಿತ್ತು. ಯಾರು ಯೇನೇ ಅನ್ನಲಿ.. ಯಿದು ಪುತ್ತಲ ರಾಜವಮುಸದ ಪ್ರತಿಷ್ಟೆಯ ಯಿಷಯ. ಪುವುಲ ಯಂಬ ಸಬುಧದ