ಪುಟ:ಅರಮನೆ.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

5 ಅರಮನೆ ಪರ್ವ : ಯರಡು ಅತ್ತ ಥಾಮಸು ಮನೋ ಸಾಹೇಬನು ವಾರ ಲಾಗಾಯ್ತು ಬಳ್ಳಾರಿ ವಳಗೇ ಮೊಕ್ಕಾಂ ಹೂಡಿ ಬಿಟ್ಟಿದ್ದನು. ತಾನೊಂದೇ ಸ್ಥಳದೊಳಗ ಯೇಸೊಂದು ದಿನಮಾನ ಯದ್ದಾತನಲ್ಲ.. ಜುಲುಮಿಗಳಿಗೆ ವಲಿದಾತನಲ್ಲ.. ಅವಯ್ಯಗ ಕಯ್ಕೆ ತುಂಬ ರಗಡ ಕೆಲಸ ಯಿತ್ತು. ಯಿನ್ನೊಂದು ಕಣಸು ಅವಯ್ಯನ ಕಣ್ಣೂಳಗ ಯಿಲ್ಲದಿರಲಿಲ್ಲ.. ಅದೆಂದರೆ ಸದರಿ ಪಟ್ಟಣದಲ್ಲಿ ಎಂದು ನ್ಯಾಯಾಲಯ ಸ್ಥಾಪನೆ ಮಾಡಬೇಕೆಂಬುದು. ನ್ಯಾಯಾಲಯ ಮತ್ತು ಕಾರಾಗ್ರುಹಗಳ ನಡುವೆ ಹೆಚ್ಚಿನ ಅಂತರಯಿರ ಬಾರದೆಂಬ ಕಾರಣಕ್ಕೆ ವಂದು ಜಾಗವನ್ನು ಆಯ್ಕೆ ಮಾಡಿ ಕಟ್ಟಡದ ಕೆಲಸಕಾರಗಳನ್ನಾ ರಂಭಿಸಿದ್ದನು. ಅದರ ನ್ಯಾಯಮೂರಿ ಯಡಿಸನ್‌ರೊಂದಿಗೆ ಪ್ರಾಂತದ ನ್ಯಾಯ ಯಿತರಣಾ ಯವಸ್ಥೆ ಕುರುತು ಸುದೀರ ಚಕ್ಷೆ ಮಾಡಿದನು. ಹಿಂಗ ಆತಗೆ ಹೆಜ್ಜೆ ಹೆಜ್ಜೆಗೊಂದೊಂದು ದಗದಯಿತ್ತು. ತದನಂತರ ಅಲ್ಲಿಂದ ಹೊಂಟು ಬೊಬ್ಬಿಲಿನಾಗಿರೆಡ್ಡಿಯಿಂದ ಸಂತರಸ್ತಗೊಂಡ ಸಣದೊಡ್ಡ ಜಮೀಂದಾರರ ಯೋಗಕ್ಷೇಮ ಯಿಚಾರಣೆ ಮಾಡಿದನು. ಅವರೆಲ್ಲ ಬೊಬ್ಬಿಲಿಯ ಗುಣಗಾನ ಮಾಡುತ್ತಲೇ ತಾವು ನಿಕುಷ್ಟ ಸ್ಥಿತಿಗಿಳಿದ ಪರಿಯನ್ನು ಯಿವರಿಸಿದರು. ತಮ್ಮ ನಡುವೆ ಬೊಬ್ಬಿಲಿಂಯ ಕಡೆಯೋರು ಯಾರಾರ ಯಿದ್ದಾರು ಯಂಬ ಕಾರಣಕ್ಕೆ ದೊರೆ, ಪಾಪ.. ನಾಗಿರೆಡೀನ್ಯಾಕ ಅನ್ನಬೇಕು.. ಆತ ದೇವರಂಥಾತ, ವಟ್ಟಿನಲ್ಲಿ ನಮ್ಮ ಕರುಮ” ಯಂದು ತಮ್ಮನ್ನು ತಾವು ಹಳಿದುಕೊಂಡರು. ರಾಯಲಸೀಮಾದ ರಾಬಿನ್ ಹುಡ್‌ನನ್ನು ನೋಡಬೇಕೆಂಬ ಆಸೆ ಬಲವತ್ತರಗೊಂಡವನಾಗಿ ಕಲೆಟ್ಟರು ಸಾಹೇಬನು ರೆಡ್ಡಿಯೊಂದಿಗೆ ಮಾತಾಡುವ ಯಿರಾದೆಯನ್ನು ಯಕ್ತಪಡಿಸಿದನು. ಯಾಕಂದರ ತನ್ನಂತೆ ಆತನ ವುದ್ದೇಶ ಸೀಮಂತರ ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡುವುದೇ ಆಗಿರುವುದು. ಕುಂಪಣಿ ಸರಕಾರದ ಕಾನೂನು ಕಟ್ಟಳೆಗಳನ್ನು ವುಲ್ಲಂಘಿಸುತ್ತಿರುವುದೊಂದೇ ಆತನು ಮಾಡುತ್ತಿರುವ