ಪುಟ:ಅರಮನೆ.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅರಮನೆ

೧೯೯

ಅಯ್ತೆ.. ವಬ್ಬೊಬ್ಬರು ವಂದೊಂದು ಯಿದವಾಗಿ ಯಾಖ್ಯಾನ ಮಾಡುತವರೇss
ಮಾಡು ತವರೇsss
ತಾವು ಹುಟ್ಟಿ ಯೇಸು ಸಮುವಚ್ಚರಗಳಳಿದಿರಬೌದು? ಯೇನು ಕಥೆ?
ತಾಯಿ ಹೊಳೆಗೆ ಹೊಂಡುವ ಪರಿಕ್ರಮ ಕುರುತು ನಿಚ್ಚಳವಾಗಿ ಹೇಳುವಂಥ
ಮಾನುಭಾವರು ತಮ್ಮ ಪಯ್ಕಿ ವಬ್ಬರಾರ ಯಿಲ್ಲವಲ್ಲ... ಯಾಲಪಿ, ಕಗ್ಗಲ್ಲು,
ಹಡಲಗಿ, ಸಿರುವಾರಗಳಲ್ಲಿ ಭೋ ಕಾಲದ ಹಿಂದೆ ಯಾಲಪಮ್ಮ, ಕಗ್ಗಲ್ಲಮ್ಮ
ಹಡಲಗೆಮ್ಮ, ಸಿರುವಾರದಮ್ಮಂದಿರನ್ನು ಹೊಳೆಗೊಂಡಿಸುವ ಕಾರ್ಯೇವು ನಡೆದ
ಸಂಗತಿ ತಮಗಾರಿಗೆ ಗೊತ್ತುಂಟು? ತಮಗಾರಿಗೆ ಗೊತ್ತಿಲ್ಲದುಂಟು? ಆ
ಸಮಯಕ್ಕ ತಮ್ಮ ಪಯ್ಕಿ ಮಾರು ಹುಟ್ಟಿದ್ದರು, ಯಾರು ಮೊಲೆ
ಜಮಡುತಲಿದ್ದರು.. ಯಾರು ಹರೇವಿಗೆ ಬಂದಿದ್ದರು... ಯಂದು ಲೆಕ್ಕಾಚಾರ
ಮಾಡುತ್ತ ಹೋದಲ್ಲಿ. ಅವರಿವರ ನೆನಪುಗಳನ್ನು ಪೋಣಿಸಿ ಆಕಾರ ಕೊಡುತ್ತ
ಹೋದಲ್ಲಿ.. ಅವ್ವನ್ನ ಹೊಳೆಗೆ ಹೊಂಡಿಸುವುದೆಂದರೆ, ಲಗ್ಗುನ, ಸೋಬುನ,
ನಾಮಕರಣ ಕಾರ್ಯೇವುಗಳಷ್ಷು ಸುಬುನವಲ್ಲವೆಂದು ಹೇಳುತ್ತ ಹೋದಲ್ಲಿ...
ಅರೀದವರಾದ ತಾವು ಮುಂಗಾಲು ಪುಟುಗೇಲಿ ಮಾಡಿದೆವೆಂದರೆ ವಂದು
ಹೆಚ್ಚು ವಂದು ಕಡಿಮೆಯಾಗಿ ತಾಯಿ ಮುನುಸುಕೊಂಡು ಹಿಡಿ ಹಿಡಿ
ಸಾಪಕೊಟ್ಟು ತಮ್ಮಂಥ ನರಹುಳುಗಳನ್ನು ಸುಟ್ಟು ಭಸುಮ ಮಾಡಿದಲ್ಲಿ..
ಯಾಕಿದ್ದೀತಪಾ? ಯಾಕಿದ್ದೀತ ಪಾ? ತಮಗಿಂತ ಪೂರುವಿಕರು
ಯಾರಾದರುವುಂಟಾ ಸದರಿ ಪಟ್ಟಣದ ಕಣ್ಣಳತೆಯೊಳಗ.. ಕೂಗಳತೆಯೊಳಗ
ಯಂದು ಯೋಜನೆ ಮಾಡುತ್ತಾ ಹೋದಲ್ಲಿ...
ಕರೆ ಕಳಿಸಿದೊಡನೆ ಬಡೇಲಡಕಿನಿಂದ ಸರಬಜ್ಜನು, ಕುಮತಿಯಿಂದ
ಕರೆಜ್ಞನು, ಗುಂಡು ಮುಳುಗಿನಿಂದ ಡೋಮಜ್ಜನು, ಕಾನಾಮಡುಗಿನಿಂದ ಕಾವಳಜ್ಜ
ಬಂದರೆಂದರೆ ಬಂದರು. “ನೋಡಿರೆಪ್ಪ.. ನಾವು ನಿಮ್ಮನ್ನೆಲ್ಲ ಯತ್ತಿ
ಆಡಿಸಿದವರದೀವಿ.. ಕಯ್ತುತ್ತು ಮಾಡಿ ವುಂಬಿಸಿದವರದೀವಿ.. ನಿಮ್ಮ ಯಿಸಿ
ವುಚ್ಚೇನ ಬಳದವರದೀವಿ.. ನಮ್ಮ ಕಣ್ಣಮುಂದ ಬೆಳದುss ಬೆಳದೂ
ಮುದೇರಾದವರಾ.. ನಿಮಗಿಂತ ಪೂರುವಿಕರಾದ ನಮ್ಮನ್ನು ಕರೆಯಿಶಿಕೊಂಡ
ಕಾರಣವೇನು?” ಯಂದು ಕಯ್ಯಿ ಕಾಲು ಪಂಚೇಂದ್ರಿಯಂಗಳು ನೆಟ್ಟಗಿದ್ದ ಅವರು
ಕೇಳಲಾಗಿ ಯವರು “ಚೀಗ ದೊಡಪ್ಪಂದಿರಾ” ಯಂಬ ಸಂಬಂಧವಾಚಕ
ಅನುಪಲ್ಲವಿಗಳೊಡನೆ ಫಲಾನ ಹಿಂಗಿಂಗೆ.. ಫಲಾನ ಹಿಂಗಿಂಗೇ ಯಂದು