ಪುಟ:ಅರಮನೆ.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೦ ಅರಮನೆ ಕಾರವು ನಿಂತ ನಿಂತೇಟಿಗಾತು, ಕುಂತ ಕುಂತೇಟಿಗಾತು. ಮಂದಿ ಹಲಗೆ ತಮ್ಮಟೆ ನಗಾರಿ ಕಹಳೆಯೇ ಮೊದಲಾದ ವಾದ್ಯಗಳನ್ನು ಕಯ್ದೆ ಯೇರಿಸಿದ್ದು ತಡ ಆಗಲಿಲ್ಲ... ಚರಕಲಿ, ಗುಂಡಾಲು, ಗಂಗಾಳ ಪಿಂಗಾಳಗಳೇ ಮೊದಲಾದ ಗುಹೋಪಯೋಗಿ ವಸ್ತುಗಳನ್ನೇ ವಾದ್ಯಗಳನ್ನಾಗಿ ಮಾಡಿಕೊಂಡಿದ್ದೂ ತಡ ಆಗಲಿಲ್ಲ... ತಾಂಯೇ ಸಾಂಬವಿ ಯಂದನಕಂತ ಸಾಯಿರಾರು ಮಂದಿ ಸಾಯಿರಾರು ರೂಪಧಾರಣ ಮಾಡಿದವರಾಗಿ ಕಾಡಡವಿಯನ್ನು ಹೊಕ್ಕಿದ್ದು ತಡ ಆಗಲಿಲ್ಲ... ಸಿವಾ.. ಸಿವಾ... ಅವರು ವಾದ್ಯಗಳನ್ನು ತಮ್ಮದೇ ಆದ ರೀತಿ ವಳಗೆ ಮನಸೋಯಿಚ್ಛೆಯಿಂದ ಭಾರಿಸ ತೊಡಗಿದ್ದೇನು. ಕ್ಯಾ ಹೂ... ಕೇಕಕಣ ಯಂದು ಕೇಕೆ ಹಾಕುತ ಗಲಾಟೆ ಮಾಡಿದ್ದೇನು? ಗಿಡ ಗಿಡ... ಮರ ಮರಗಳ ಸೊಂಟ ಕತ್ತು ಹಿಡಿದು ಜಾಲಾಡತೊಡಗಿದ್ದೇನು? ಸಿವ.. ಸಿವಾ.. ಆ ರವರವ ಗದ್ದಲದೇಟಿಗೆ ಆ ಛಣದವರೆಗೆ ಮಾನಸ ಸರೋವರದಂತಿದ್ದ ಕಾಡಡವಿಯು ವಯಸಂಪಾಯನ ಸರೋವರವಾಗಿ ಮಾರುಪಟ್ಟಿತು. ಕಾಡೆಮ್ಮೆ, ಕಾಡುಕೋಣ, ಚಿರತೆ, ಚಿಗರೆ, ಮೊಲಗಳಿತ್ಯಾದಿ ವುಪದ್ರವಿ, ನಿರುಪದ್ರವಿ ಪ್ರಾಣಿಗಳು, ಪಕ್ಷಿಗಳು ಯದರಿಕೊಂಡು ದಿಕ್ಕಾಪಾಲಾಗಿ ಮೋಡಲಾರಂಭಿಸಿದವು ಸಿವ ಸಿವಾ.. ಕಳ್ಳಿಕಾಕಸು ಕವಳೆಕಾರೆ, ಹಾದರಗಿತ್ತಿ, ಜಾಲಿಯೇ ಮೊದಲಾದ ತರಾತರಿ ಮುಳ್ಳು ಕಂಟೆಗಳನು ಕಡದು ದರದರಾಂತ ಯಳಕೊಂಡು ಬಂದು ಹಚ್ಚಿ ಯಲ್ಲಾಳಿದ್ದ ಬೇಲಿಯನ್ನು ಮೂರಾಳೆತ್ತರಕ್ಕೆ ಯೇರಿಸದರೆಂಬಲ್ಲಿಗೆ.. ನೋಡುನೋಡುವಷ್ಟರಲ್ಲಿ ಮುಳ್ಳುಕಂಟೆಂದು ಹೇಳುಸುತ್ತಿನ ಕೋಟೆಯ ನಿರುಮಾಣಗೊಂಡಿತು ಪಟ್ಟಣದ ಸುತ್ತಮುತ್ತ.. ಆ ಕಡೆ ಯಿರೋರು ಯೀ ಕಡೇಕ ಕಾಣಿಸದಂಗಾತು, ಯೀ ಕಡೆ ಯಿರೋರು ಆಕಡೇಕ ಕಾಣಿಸದಂಗಾತು. ಛಣಾರದೊಳಗ ಮಾಡೋದು ಮಾಡಿಯಾಯಿತು ಬಿಡೋದು ಬಿಟ್ಟು ಆಯಿತು.. ಪಟ್ಟಣದ ರಹದಾರಿ ಪಾಸಲೆಯೊಳಗೆ ಹಂಪಜ್ಜನು ಕಪ್ಪೆಗೆ ಅಂಜಣ ಲೇಪಿಸಿಕೊಂಡು ನೋಡುತ್ತಾನೆ. ತರಾವರಿ ದ್ರುಸ್ಯಗಳು...ಹರದಾರಿ ಪಾಸಲೆ ಆಚೆಗೆ ಛತ್ತೀಸು ಸಹಸ್ರಭುದ್ರದೇವತೆಗಳು.. ಯಲವೋ ಹಂಪಜ್ಜನೇ.. ಮಾಯಾವಿ ಮುದೇತನೆ ನಮ್ಮನ್ಯಾಕ ಬೀಟು ದ್ವೇಸ ಮಾಡುತ್ತಿರುವಿ ಪೂರುವಿಕನೆ.. ನಾವು ನಿನಗ ಮಾಡಿರುವ ಅನ್ಯಾಯವಾದರೂ ಯೇನು ಯಜ್ಞಾ.. ನಮ್ಮನ್ನು ಪಟ್ಟಣದೊಳೀಕ ಬಿಟ್ಟುಕೊಳ್ಳೋ.. ನಡೆಯಲಿರುವ ವಯಿಭೋಗವನ್ನು