ಪುಟ:ಅರಮನೆ.pdf/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೪ ಅರಮನೆ ನೋಡುತಯ್ಕೆ ಮಂದಿ ಸಿವನೇ. - ಅಗಾಧ ಯಿರಣವುಳ್ಳ ದತ್ತಮಂಡಲ ದೇಸ ಕೋಲ್ಡನೇ ವಡೆಯನಾಗಿರುವಂಥ ಕಲೆಟ್ಟರ ಸಾಹೇಬನು ಕೂಲಿಕುಂಬಳಿಯವರ ಝಪಡಿಯಂ ಹೊಕ್ಕಿದ್ದೊಂದು ಜೋಜಿಗ ಸಿವನೇ, ತನ್ನೊಳಗೂ ಬಾತ್ರುತ್ವ ವುಂಟೆಂಬುದನು ತೋರಿದ್ದೊಂದು ಚೋಜಿಗ ಸಿವನೇ, ಮಾಮೂಲಿ ಮನುಶ್ಯನಂಗ ನೆಲದ ಮ್ಯಾಲ ಚಕ್ಕಳಮುಕ್ಕಳ ಹಾಕ್ಕೊಂಡು ಕೂಕಂಡದ್ದೊಂದು ಚೋಜಿಗವು ಸಿವನೇ, ಅವಯ್ಯ ಯೇನೇನು ವುಂಬಲಿರುವನೆಂದರೆ ಸಜ್ಜೆರೊಟ್ಟಿ ಜ್ವಾಳದರೊಟ್ಟಿ ಗಡುಸೊಪುE, ಯಣಗಾಯಿ, ಕಟಂಬಳಿ, ಜ್ವಾಳದನ್ನ, ಮೊಸರು, ಮಜ್ಜಿಗೆ, ನೆಂಜಿಕೊಳ್ಳಲುಕೊಂದು ಚಟ್ಟಣಿ, ಕಡಕೊಳ್ಳಲುಕೊಂದು ಮಜ್ಜಿಗೆ ಮೆಣಸಿನಕಾಯಿ, ವುಳ್ಳಾಗಡ್ಡೆ ಯಿತ್ಯಾದಿ.. ಅವಯ್ಯಗಿವಯ್ಯ ಬಡಸುತ್ತಾನೆ.. ಯಿವಯ್ಯಗ ಅವಯ್ಯ ಬಡುಸುತ್ತಾನೆ. ಅವಯ್ಯಗ ಯಿವಯ್ಯ ತುತ್ತು ಮಾಡಿ ವುಂಬುಸುತ್ತಾನೆ, ಯಿವಯ್ಯಗೆ ಅವಯ್ಯ ತುತ್ತು ಮಾಡಿ ಮುಂಬುಸುತ್ತಾನೆ.. ಅವಯ್ಯಗ ಉವಯ್ಯನೊಳಗ ತಾಯಿ ಅದಾಳೆ, ಯಿವಯ್ಯಗ ಅವಯ್ಯನೊಳಗ ತಾಯಿ ಅದಾಳೆ ಸಿವನೇ... ವಂದೊಂದು ದ್ರುಸ್ಕ ವಂದೊಂದು ಸಾವುರ ವರಹಾಕ್ಕೆ ಸಮಯಿತ್ತು. ಯಿಂಥ ದ್ರುಸ್ಯವು ಯುಗಕ್ಕೊಂದೊಂದು ಸಲ ನಡೆದಿರಬೌದು ಸಿವನೇ.. * ಕಲೆ ಟ್ಟರು ಸಾಹೇಬನೂ, ಬೂಬ್ಬಿಲಿನಾಗಿರೆಡ್ಡಿಂ ನೋಡುನೋಡುವಷ್ಟರೊಳಗ ಅಣ್ಣ ತಮ್ಮಂದಿರಂಗಾಗಿಬಿಟ್ಟರಲ್ಲಾ.. ಯಂಜಲ ಮೂಲಕ ಪರಸ್ಪರ ಪರಕಾಯ ಪ್ರವೇಶ ಮಾಡಿಬಿಟ್ಟರಲ್ಲಾ, ಯಿದೇನು ಚೋದ್ಯವು? ಮೋ ಮಯ್ ಗಾಡ್ ಯಂದು ವುದ್ದರಿಸುತ ನೋಡುತಲಿದ್ದ ಹೆನ್ರಿಯೂ ಕನ್ನೆ ಮಾಡಿದ್ದು ಯರವಾತು, ಬಾಯಿಸನ್ನೆ ಮಾಡಿದ್ದು ಯರವಾತು, ಯಾರಾರ ಮನಸ್ಸಿನೊಳಗೆ ಯಾವ್ಯಾವ ಅರಗಿನ ಮನೆ ಗಳುಂಟೆ ? ಮನಸಭಗಳುಂಟೋ?. ವಬ್ಬರ ಮರುಮ ಯಿನ್ನೊಬ್ಬರಿಗೆ ತಿಳಿದು ಬರಾಣಿಲ್ಲವಲ್ಲಾ.. ನಿಬ್ಬೆರಗಾಗಿಸುವಂತೆ ನಡೆದ ಯಿನ್ನೊಂದು ಚೋಜಿಗ ಯಂದರ.. “ಯಣ್ಣಾss ಯೊ ದಿರಿಸಿನಾಗ ನೀನೆಂಗ ಕಾಣುತೀ ಯಂಬುದನು ನನಗ ಕಾಲ್ತುಂಬ ನೋಡುವಂಗಾಗಯ್ತಿ” ಯಂದು ನಾಗಿರೆಡ್ಡಿಯೂss “ತಮ್ಮಾ ಯೇ ದಿರಿಸಿನಾಗ ನೀನೆಂಗ ಕಾಣುತೀ ಯಂಬುದನು ನನಗ