ಪುಟ:ಅರಮನೆ.pdf/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೭೫ ನೋಡುವಂಗಾಗಯೆ” ಯಂದು ಮನೋ ಸಾಹೇಬನೂ... ನೋಡು ನೋಡುವಷ್ಟರಲ್ಲಿ ಅವಯ್ಯ ತನ್ನುಡುಗೆಯನ್ನು ಯಿವಯ್ಯಗೆ ವುಡುಸಿದನು. ಯಿವಯ್ಯ ತನ್ನುಡುಗೆಯನ್ನು ಅವಯ್ಯಗ ವುಡುಸಿದನು. ಥಾಮಸು ಮನೋನು ನಾಗಿರೆಡ್ಡಿಯಾಗಿ ಬದಲಾದದ್ದು ತಡ ಆಗಲಿಲ್ಲ. ನಾಗಿರೆಡ್ಡಿಯು ಥಾಮಸು ಮನೋನಾಗಿ ಬದಲಾದದ್ದು ತಡ ಆಗಲಿಲ್ಲ... ಯಣ್ಣಾ.. ಯೇ ದೋತರದಾಗ ಬಲು ಪಾಡು ಕಾಣುತೀ ಯಂದು ರೆಡ್ಡಿಯೂ, ತಮ್ಮ ಯೀ ಟವುಜರೊಳಗ ಬಲುಪಾಡು ಕಾಣುತೀ ಯಂದು ಮನೋನೂ.. ವಂಛಣ ಪರಪಾಟಿಗೆ ಬಿದ್ದು ಹೆಯು ರೆಡ್ಡಿಗೆ ಸಲೂಟು ಮಾಡಿದನು, ಮಂದಿಯು ಮನೋನನ್ನು ರೆಡ್ಡಿ ಯಂದು ಭಾವನ ಮಾಡಿಕೊಂಬಲ್ಲಿಗೆ ಸಿವಸಂಕರ ಮಾದೇವಃs ಅತ್ತ ಯಿಟ್ಟಿಂಗೆ ಪರಗಣದಲ್ಲಿರುವ ಮೋರಿಂಗರೆ ಗ್ರಾಮದ ಬಲಾಡ್ಯ ವತನದಾರನಾದ ತಿರುಕಪ್ಪ ಗವುಡನ ಯೇಕ ಮಾತ್ರಸುಪುತ್ರಿಪಾರೊತಿಯು ಭರಣಿ ನಕ್ಷತ್ರದ ನಾಕನೇ ಪಾದದಲ್ಲಿ ಹಿರೇ ಮನುಷ್ಯಳಾದಳೆಂಬ ಸಂಗತಿ ಅದು ಹೆಂಗೋ ಕಿವಿಗೆ ಬಿದ್ದಾಗ ಅಕಾಸ ರಾಮಣ್ಣ ವುಲಿಕ್ಕಿ ಪಡಿ “ದೇವರಾss ಆ ಮಗಳ ಯೇಕರಿಕೆ ದೇಕರಿಕೆ ನಿನಗಳ ಬಿಟ್ಟಿದ್ದಪ್ಪಾ” ಯಂದನಕಂತ ಕಯ್ಕೆತ್ತಿ ಮುಗುದನು ಮನದಾಗ.. ಆಗ್ಗೆ ಹೊತ್ತು ತಗ್ಗಿನತ್ತ ಸಾಗಿತ್ತು ಕಣ್ಣುಮುಚ್ಚಿದ್ದನು. ಸಿರಿವಂತ ಮನೆಗಳು ರೆಪ್ಪವಳಗ ವಂದೊಂದಾಗಿ ಮಾಡಿ ಸಾಕ್ಷಿ ನುಡಿಯುತಲಿದ್ದವು. ಅವುಗಳನ್ನೆಲ್ಲ ಬದಿಗೊತ್ತಿ ಪಾರೋತಿ ನೆನಪಾದಳು. ಯೇಸೊಂದು ದಿವಸಗಳಾದವು ತಾನಾ ಮಗೀನ ನೋಡದೆ.. ತಾನಾಕೆಯನ್ನು ನೋಡಿದಾಗ ಯಿನ್ನೂ ನಡಿಗೆಯನ್ನು ಕಲಿಯುತಲಿದ್ದಳು. ಯತ್ತಿಕೊಂಡೊಡನೆ ತನ್ನ ಮೀಸೆಯೊಂದಿಗೆ ಜಗ್ಗಾಟ ಆಡಿದ್ದಳು.. ತೊಂಬಲ ಮೆಲ್ಲುತ್ತ ಗವುಡ 'ತಮ್ಮಾ ರಾಮಣ್ಣ... ಮುಂದೊಂದಲ್ಲಾ ವಂದಿನ ನೀನೀಕೇನ ಸೊಂತ ಮಗಳೆಂದು ತಿಳಿ ಕೋಬೇಕಂತ್ತುಪ್ಪಾ” ಯಂದಿದ್ದನು.. ಮೊರಿಂಗರೆ ಯಲ್ಲೋ? ಯಲ್ಲಾಪ್ರಕೊರಚರಟ್ಟಿ ಯಲ್ಲೋ? ಯಿವೆರಡನ್ನು ಅಗೋಚರ ಕರುಳ ಬಳ್ಳಿ ಬೆಸೆದಿರುವುದು.. ರಾಮಣ್ಣ ನಿಟ್ಟುಸುರು ಬಿಟ್ಟ.. “ಯಾಕ ಮಾವಃ ಯಸನ ಮಾಡ್ತಿದೀ” ಯಂದು ಚೋರ ತಂತ್ರಗ್ನ ಸಂಬುಗ ಕೇಳಿದನೆಂಬಲ್ಲಿಗೆ... ಅತ್ತಕಡೆ ಹರಪನಹಳ್ಳಿ ಸೀಮೆಯೊಳಗ ಸಯ್ಯ ಅಂಬುವವರಿರಲಿಲ್ಲ.. ಪಾಡು ಬಿಡು ಅಂಬುವವರಿರಲಿಲ್ಲ... ಗುಂಡಗತ್ತಿ ಅರಮನೆಯ ವಾರಸತ್ವದ ಯಿಷಯದಲ್ಲಿ ಹತ್ತು ದಿಕ್ಕಿನಿಂದ ಯಿಳದಿದ್ದ ವಾರಸುದಾರರ ನಡುವೆ ತಗಾದೆ