ಪುಟ:ಅರಮನೆ.pdf/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮೪ ಅರಮನೆ ಸಮೇತ ತಂತಮ್ಮ ಗ್ರಾಮಗಳಿಗೆ ವಾಪಸಾದರು ಯಂಬಲ್ಲಿಗೆ ಸಿವ ಸಂಕರ ಮಾದೇವss ಫಲಾನ ಕಡೇಲಿದ್ದ ನಾಗಿರೆಡ್ಡಿಯೂ ಯಲ್ಲ ಮಾಮೂಲು ಮನುಷ್ಯರಂತೆ ತಾನೂ ಗೊಂದಲಕ್ಕೀಡಾಗದೇ ಯಿರಲಿಲ್ಲ. ತಾನು ಮನೋನ ವುಡುಪನ್ನು ಧರಿಸಿಬೇಕಿತ್ಯಾಕೆ? ಧರಿಸಿದಾಗ ಅವರಿವರು ತನ್ನನ್ನು ನೋಡಿ “ಯಣ್ಣಾ ನೀನು ಥೇಟ್ ಮನೋನಂಗೆ ಕಾಣುತೀ” ಯಂದು ತಮ್ಮ ಅಭಿಪ್ರಾಯ ಯಕ್ತ ಮಾಡಿದ್ದುಂಟು.. ಆ ಅಭಿಪ್ರಾಯ ಕೇಳಿಸಿಕೊಂಡಾಕ್ಷಣಕ್ಕೂ, ಹೀಗೂ ಅಜಗಜಾಂತರ ಯತ್ಯಾಸವುಂಟು.. ಧರಿಸಿಕೊಂಡ ಕ್ಷಣದಲ್ಲಿ ತನ್ನೊಳಗ ತಾನೇ ನಷ್ಟಗೊಂಡಿದ್ದನು. ಆಕ್ಷಣ ತನ್ನೊಳಗ ಪರಾಜಿತ ಸಿಪಾಯಿ ಮೂಡಿದನೋ? ಖುದ್ದ ಮನೋ ಮೂಡಿದನೋ? ಹಬ್ಬಕ್ಕೆ ತಂದ ಹರಕೆಯ ಕುರಿಯೋಪಾದಿಯಲ್ಲಿ ತಾನು ವಂದು ಕ್ಷಣ ಸಂಭ್ರಮಿಸಿದ್ದೇನು? ವರಮಾನವನ್ನು ವಸ್ತುಸ್ಥಿತಿಯನ್ನು ವಂದು ಕ್ಷಣ ಮರೆತದ್ದೇನು? ಮನೋನ ರಾಜಕಾರಣ ತಂತ್ರಕ್ಕೆ ತಾನು ಬಲಿಯಾದೆನೋ ಹೆಂಗೆ? ತನ್ನೆದುರಿಗಿದ್ದ ಕುಂಪಣಿ ಸರಕಾರದ ಸಮವತ್ತರವು ತನ್ನತ್ತ ಯಂಗ್ಯವಾಗಿ ನೋಡುತ್ತಿರುವಂತೆ, ಪಕಪಕನೆ ನಗಾಡುತ್ತಿರುವಂತೆ, ಮುಗ್ದಾಳ ರಂದು ಬರುತ್ತಿರುವಂತೆ ಭಾಸವಾಗುತ್ತಿರುವುದು.. ಹಿಂಗ ಯೋಚನೆ ಮಾಡುತ ರೆಡ್ಡಿಯು ಮಾನಸಿಕ ಸ್ವಾಸ್ಥ್ಯ ಕಳಕೊಂಡನು.. ಅದು ಕಯ್ಯಗೆಟಕುವಂತೆ ಯಿದ್ದರಲ್ಲಿ ತಾನದನ್ನು ಮತ್ತೆ ಧರಿಸಿಬಿಡುವೆನೋ ಯಂದು ಹಾರಿದ.. ಅದು ತನ್ನ ಕಣ್ಣೆದುರಿಗೆ ಯಿರಲೇಬಾರದೆಂದುಕೊಂಡನು.. ಅದನ್ನು ತಿಪ್ಪೆಯೊಳಗೆ ಹೂತಿಡಿಸಿದನು.. ಅದು ಕೊಳತು ಗೊಬ್ಬರವಾಗಿ ಹೊಲಾ ಪಲಾ ಸೇರಿದರೇನು ಗತಿ? ಅದರ ಬೇಳೆ ತಿಂದವರು ಕುಂಪಣಿ ಸರಕಾರದ ಪರ ಪ್ರೀತಿ ತೋರಲಕ ಹತ್ತಿದರೇನು ಗತಿ ಯಂದೂ ಆಲೋಚಿಸಿದನು.. ಅದರ ಪರಿಣಾಮವಾಗಿ ತಿಪ್ಪೆಯಿಂದ ತೆಗೆಸಿ ಕೊಡ ಮುಳುಗೋ ಬಾವಿಯೊಳಗೆ ಹಾಕಿಸಿದನು. ಅದರಿಂದಲೂ ತನಗೆ ಮಾನಸಿಕ ಶಾಂತಿ ಲಭಿಸಲಿಲ್ಲ.. ಅದಿರುವ ಬಾವಿ ನೀರ ಕುಡಿದವರು ಕುಂಪಣಿ ಸರಕಾರದ ಪರ ನಿಲುವು ತಾಳಿದರೇನು ಗತಿ ಯಂದೂ ಆಲೋಚಿಸಿದನು. ಅದರ ಪರಿಣಾಮವಾಗಿ ಅದನ್ನು ಬಾವಿಯಿಂದ ತೆಗೆಸಿ ವಣಗಿಸಿ ಬೆಂಕಿ ಹಚ್ಚಿಸಿದನು.. ಧಗ ಧಗ ವುರಿತೋ ವುರಿತು.. “ಯಲಯ್ ಮೂಢನೇ.. ಬೀಗ ನಾನು ಪಂಚಭೂತಗಳೊಳಗ ನೂರಾರು ವರುಷಗಳ ಪಠ್ಯಂತ ಬದುಕಿರುತ್ತೇನೆ..