ಪುಟ:ಅರಮನೆ.pdf/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೯೩ ಜಾಟಗೆರೆ ಹಾದಿಗುಂಟ ಹೊಂಟು ಬರುತಲಿದ್ದ ಅವಯ್ಯನ ಹೆಂಡರು ಮಕ್ಕಳು ಯಾರೋ ತಮ್ಮ ಬಾಯೊಳಗ ತುತ್ತುಗಳನ್ನು ದೂಡುತ್ತಿರುವರಲ್ಲಾ ಯಂದು ವುದ್ದಾರ ಮಾಡಲಾರಂಭಿಸಿದರು. ಯಿವಯ್ಯನಿಲ್ಲಿ ಹೆಂಗೆಂಗ ವುಂಬಲಕ ಹತ್ತಿದನೋ ಅಲ್ಲಿ ಅವರೆಲ್ಲರ ವಡಲುಗಳು ಹಂಗಂಗ ತುಂಬಲಕ ಹತ್ತಿದವು.. ವಂದು ವಡಲss ವಂದು ಕಥಿಯಾss.. ಆಗಂತುಕರ ಬಡಸೀ ಬಡಸೀ ನೀಡೋರ ರೆಟ್ಟೆಗಳು ಸೋತು ಹೋದವು.. ಅವಯ್ಯ ಬರೋಬ್ಬರಿ ಹತ್ತನ್ನೆಲ್ಲು ಮಂದಿ ಬಾಬತ್ತನ್ನು ತಾನೊಬ್ಬನೆ ವುಂಡು ಮುಗಿಸಿದನೆಂಬಲ್ಲಿಗೆ ಸಿವಸಂಕರ ಮಾದೇವss ಯೀ ಪ್ರಕಾರವಾಗಿ ವುಂಬುವ ಯಿಷಯದಲ್ಲಿ ದಾಖಲೆಯನ್ನು ಸಷ್ಟಿಸಿದ ಅವಯ್ಯನು ಪೋಷಿ«ಯಿಂದ ಫಲ ತಾಂಬೂಲ ಪಡದು ಬೀಳುಕೊಂಡು ಧರುಮ ಛತ್ತರದಿಂದ ಹೊರ ಬಂದನು. ಹೊಟ್ಟೆ ತುಂಬ ಮುದ್ದೆ, ಕಣ್ಣು ತುಂಬ ನಿದ್ದೆ ಅಂಬುತಾರಲ್ಲ... ಅದಕ ವಂದು ಜೋಂಪು ಕಣ್ಣು ಮುಚ್ಚಿಕೊಳ್ಳಬೇಕೆಂದು ನಿರರಿಸಿ ಅಲ್ಲೇ ಯಿದ್ದ ಮರದಡಿ ಮಮ್ಮ ಚೆಲ್ಲಿದನು. ಕಣ್ಣು ಮುಚ್ಚಿದ್ದು ತಡ ಆಗಲಿಲ್ಲ... ನಿದ್ದೆ ಅಡರಿಬಂದದ್ದು ತಡ ಆಗಲಿಲ್ಲ. ಆ ನಿದ್ದೆವಳಗ ಅದಾವ ಕಣಸು ಕಂಡನೋ... ಅದೇ ಹೊತ್ತಿಗೆ ಸರಿಯಾಗಿ ಹಂಪಜ್ಜನು ಯಲ್ಲದೀಯಪ್ಪಾ, ಯಾವ ವಸ್ತನ ಪಡುತಲಿದ್ದೇಯಪ್ಪಾ.. ಯಂದಾಡಿದಾದ ಮ್ಯಾಲ ಗೊಂಜಾಡಲರ ಅಡಿವಯ್ಯ, ಮೊಂಡು ಮೂಗಿನ ಮೂಗಯ್ಯಂದಿರನ್ನು ಕರೆದು ನೋಡಿರಪ್ಪಾ.. ಫಲಾನ ಯಿಂಥ ಜಗವದಲ್ಲಿ ಭೂತ ಬಿಲ್ಲೆ ಮಲಗಯ್ತಿ.. ಲಗೂನ ಹೋಗಿ ಅದನ್ನು ಕರಕೊಂಡು ಬರುವಂತವರಾಗಿ ಯಂದು ಆಗೈ ಮಾಡಿದನು.. ಭೂತ ಬಿಲ್ಲೆ ಯಂಬ ಸಬುಧವನ್ನು ಆಭರಣೋಪಾದಿಯಲ್ಲಿ ತಮ್ಮ ತಮ್ಮ ಮುಖಗಳ ಮಾಲ ಮುಡಕೊಂಡವರಾದ ಅವರು ಲಗುಬಗೆ ಹೆಜ್ಜೆ ಹಾಕುತ ಹೋಗಿ ಭೂತಬಿಲ್ಲೆಯನ್ನು ಗವುರವಾದರಗಳೊಡನೆ ಕರಕೊಂಡು ಬಂದು ಪೂರುವಿಕನ ಮುಂದ ಸಾದರಪಡಿಸಿದರು. ಭೂತಬಿಲ್ ಪದವಿಯನ್ನಲಂಕರಿಸಲಿರುವ, ಅಲಂಕರಿಸುವುದರ ದ್ವಾರಾ ಸಾಂಬವಿ ಹೊಳೆಗೆ ಹೊಂಡುವ ದಯವ ಕಾರೈವನ್ನು ಯಿದ್ಯುಕ್ತವಾಗಿ ವುದ್ಘಾಟನೆ ಮಾಡಲಿರುವ, ಯೀ ಕಾಲ್ಕಿವಿಗಾಗಿ ತನ್ನ ಜೀವವನ್ನೇ ಅಮಾನತ್ತಿನಲ್ಲಿಡಲಿರುವ ದ್ಯಾಮಯ್ಯನೂ, ಪೂರುವಿಕನಾದ ಹಂಪಜ್ಜನೂ ಸವಾಲು, ಜವಾಬುಗಳನ್ನು